ಒಂದು ಕಡೆ ಸ್ಟಾರ್ ಆಟಗಾರರು ಹೊರ ಹೋಗುತ್ತಿರುವಾಗ ತಂಡ ಸೇರಿಕೊಳ್ಳುತ್ತಿರುವ ಇಬ್ಬರಿಗೆ ಮತ್ತೊಂದು ಸಮಸ್ಯೆ: ಕಿಡಿ ಕಾರಿದ ಫ್ಯಾನ್ಸ್.
ಭಾರತ ಕ್ರಿಕೆಟ್ ತಂಡಕ್ಕೆ ಒಂದರ ನಂತರ ಮತ್ತೊಂದು ತೊಂದರೆಗಳು ಅಡಚಣೆಗಳು ಬರುತ್ತಲೇ ಇದೆ. ಒಂದೆರಡು ದಿನಗಳ ಹಿಂದೆಯಷ್ಟೇ, ಭಾರತ ತಂಡಕ್ಕೆ ಉತ್ತಮವಾದ ಪರ್ಫಾರ್ಮೆನ್ಸ್ ಮೂಲಕ ಭರವಸೆ ಮೂಡಿಸಿದ್ದ ದೀಪಕ್ ಚಹರ್ ಅವರು ಬೆನ್ನು ನೋವು ಮತ್ತು ಕಾಲಿನ ಸಮಸ್ಯೆ ಎದುರಾಗಿ, ವಿಶ್ವಕಪ್ ಇಂದ ದೂರ ಉಳಿಯುವ ಹಾಗೆ ಆಯಿತು. ಈಗ ಮತ್ತಿಬ್ಬರು ಪ್ರಮುಖ ಆಟಗಾರರು ಟೀಮ್ ಇಂಡಿಯಾ ಇಂದ ಹೊರಗುಳಿಯುವ ಹಾಗೆ ಆಗಿದ್ದು, ಭಾರತ ತಂಡಕ್ಕೆ ತಲೆನೋವು ಹೆಚ್ಚಾಗಿದೆ.
ಭಾರತ ತಂಡದ ನೆಟ್ ಬೌಲರ್ ಗಳಾಗಿ ಉಮ್ರಾನ್ ಮಲಿಕ್ ಮತ್ತು ಕುಲದೀಪ್ ಸೇನ್ ಅವರನ್ನು ಆಯ್ಕೆ ಮಾಡಲಾಗಿತ್ತು. ಈ ಇಬ್ಬರು ಆಟಗಾರರು ಆಸ್ಟ್ರೇಲಿಯಾ ತಲುಪುವುದಕ್ಕಿಂತ ಮೊದಲೇ, ಅವರಿಬ್ಬರಿಗೂ ವೀಸಾ ಬರದೆ, ಆಸ್ಟ್ರೇಲಿಯಾಗೆ ಹೋಗದೆ ಇರುವ ಹಾಗೆ ಆಗಿದೆ. ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್ ಮತ್ತು ಶಾರ್ದೂಲ್ ಠಾಕೂರ್ ಅವರು ಈಗ ಆಸ್ಟ್ರೇಲಿಯಾ ತಲುಪಿದ್ದಾರೆ. ಶಮಿ ಅವರು ಸ್ಟ್ಯಾಂಡ್ ಬೈ ಆಟಗಾರನ ಸಾಲಿನಲ್ಲಿದ್ದರು. ಆದರೆ ಉಮ್ರಾನ್ ಮಲಿಕ್ ಅವರು ತಂಡದಲ್ಲಿ ಇದ್ದಿದ್ದಾರೆ ಭಾರತ ತಂಡಕ್ಕೆ ಬಹಳ ಸಹಾಯ ಆಗುತ್ತಿತ್ತು.
ಉಮ್ರಾನ್ ಮಲಿಕ್ ಅವರು 150ಕಿಮೀ ವೇಗದಲ್ಲಿ ಬೌಲಿಂಗ್ ಮಾಡಬಲ್ಲರು. ಆಸ್ಟ್ರೇಲಿಯಾ ಪಿಚ್, ವೇಗಿಗಳಿಗೆ, ಮತ್ತು ಬೌನ್ಸ್ ಮಾಡಲು ಉತ್ತಮವಾದ ಪಿಚ್ ಇರುವ ಕಾರಣ ಉಮ್ರಾನ್ ಮಲಿಕ್ ಅವರು ಸೂಕ್ತವಾಗಿರುತ್ತಿದ್ದರು. ಆದರೆ ಈಗ ಉಮ್ರಾನ್ ಮಲಿಕ್ ಅವರಿಲ್ಲದೆ ಭಾರತ ತಂಡಕ್ಕೆ ಹಿನ್ನಡೆ ಆಗಬಹುದು ಎನ್ನಲಾಗುತ್ತಿದೆ. ಇತ್ತ ಮೊಹಮ್ಮದ್ ಶಮಿ, ಸಿರಾಜ್ ಮತ್ತು ಶಾರ್ದೂಲ್ ಠಾಕೂರ್ ಅವರು ಆಸ್ಟ್ರೇಲಿಯಾ ತಲುಪಿದ್ದು, ಈ ಮೂವರು ವೇಗಿಗಳಲ್ಲಿ ಒಬ್ಬರು ನೆಟ್ ಬೌಲರ್ ಆಗಿ ಆಯ್ಕೆಯಾಗಬಹುದು ಎನ್ನಲಾಗುತ್ತಿದೆ. ಜಸ್ಪ್ರೀತ್ ಬುಮ್ರ ಅವರ ಸ್ಥಾನಕ್ಕೆ ಯಾರು ಆಯ್ಕೆಯಾಗಬಹುದು ಎಂದು ಸಹ ಕಾದು ನೋಡಬೇಕಿದೆ. ಪದೇ ಪದೇ ಹೀಗೆ ಆಗುತ್ತಿರುವುದರಿಂದ ಅಭಿಮಾನಿಗಳಿಗೂ ಬೇಸರವಾಗಿದ್ದು, ಭಾರತ ತಂಡದ ಸಮಸ್ಯೆ ಯಾವಾಗ ಸರಿ ಹೋಗುತ್ತದೆ ಎನ್ನುತ್ತಿದ್ದಾರೆ ಅಭಿಮಾನಿಗಳು.