ಬಿಗ್ ನ್ಯೂಸ್: ಸಿಹಿ ಸುದ್ದಿ ಹಂಚಿಕೊಂಡ ರೌಡಿ ಬೇಬಿ ಅಮೂಲ್ಯ ಹಾಗೂ ಕನ್ಯಾಕುಮಾರಿ ಚರಣ್. ಏನಂತೆ ಗೊತ್ತೇ?? ಕುಣಿದು ಕುಪ್ಪಳಿಸಿದ ಫ್ಯಾನ್ಸ್.
ನಮ್ಮ ಕನ್ನಡ ಕಿರುತೆರೆಯ ಕಲಾವಿದರು ಈಗ ಬೇರೆ ಭಾಷೆಯ ಧಾರವಾಹಿಗಳಲ್ಲಿ ಮಿಂಚುತ್ತಿದ್ದಾರೆ. ತೆಲುಗು ಮತ್ತು ತಮಿಳು ಕಿರುತೆರೆಯಲ್ಲಿ ಕನ್ನಡ ಕಿರುತೆರೆ ಕಲಾವಿದರ ದರ್ಬಾರ್ ನಡೆಯುತ್ತಿದೆ ಎಂದರೆ ತಪ್ಪಾಗುವುದಿಲ್ಲ. ಜೀಕನ್ನಡ ವಾಹಿನಿಯ ಗಟ್ಟಿಮೇಳ ಧಾರವಾಹಿಯಲ್ಲಿ ನಾಯಕಿ ಅಮೂಲ್ಯ, ರೌಡಿ ಬೇಬಿ ಎಂದೇ ಫೇಮಸ್ ಆಗಿರುವ ನಿಶಾ ಮಿಲನ ಅವರು ಈಗಾಗಲೇ ತೆಲುಗು ಧಾರಾವಾಹಿಯಲ್ಲಿ ಮಿಂಚುತ್ತಿರುವ ವಿಚಾರ ಗೊತ್ತೇ ಇದೆ, ಇದೀಗ ಅವರು ಮತ್ತೊಂದು ತೆಲುಗು ಧಾರಾವಾಹಿಗೆ ಆಯ್ಕೆಯಾಗಿದ್ದಾರೆ.
ನಿಶಾ ಅವರು ನಟಿಸುತ್ತಿರುವ ಹೊಸ ತೆಲುಗು ಧಾರಾವಾಹಿಯ ಹೆಸರು ಅಮ್ಮಾಯಿಗಾರು. ಜೀತೆಲುಗು ವಾಹಿನಿಯಲ್ಲಿ ಈ ಧಾರವಾಹಿ ಪ್ರಸಾರವಾಗಲಿದೆ, ಈ ಧಾರಾವಾಹಿಯಲ್ಲಿ ನಾಯಕಿನಾಗಿ ನಟಿಸುತ್ತಿರುವುದು ಸಹ ನಮ್ಮ ಕನ್ನಡದ ನಟ, ಕಲರ್ಸ್ ಕನ್ನಡ ವಾಹಿನಿಯ ಕನ್ಯಾಕುಮಾರಿ ಧಾರವಾಹಿಯಲ್ಲಿ ನಾಯಕ ಚರಣ್ ಪಾತ್ರದಲ್ಲಿ ನಟಿಸಿದ್ದಾ ಯಶವಂತ್ ಅವರು ಅಮ್ಮಾಯಿಗಾರು ಧಾರವಾಹಿಯಲ್ಲಿ ನಾಯಕನಾಗಿ ನಟಿಸುತ್ತಿದ್ದಾರೆ. ಈ ಧಾರಾವಾಹಿಯಲ್ಲಿ ನಿಶಾ ಅವರದ್ದು ಶ್ರೀಮಂತ ಕುಟುಂಬಕ್ಕೆ ಸೇರಿದ ಮನೆಯ ಮಗಳ ಪಾತ್ರ, ಆದರೆ ಈಕೆಗೆ ಮನೆಯಲ್ಲಿ ಯಾರೂ ಪ್ರೀತಿ ತೋರಿಸುವುದಿಲ್ಲ.
ನಾಯಕಿಗೆ ಬೇಕಿರುವುದು ಪ್ರೀತಿ ಮಾತ್ರ, ಅವರ ಮನೆಯಲ್ಲೇ ಕೆಲಸ ಮಾಡುವ ಹುಡುಗ ನಾಯಕ, ಇವನದ್ದು ಬಡತನದ ಕುಟುಂಬ ಆದರೆ ಪ್ರೀತಿಗೆ ಏನು ಕೊರತೆ ಇರುವುದಿಲ್ಲ. ಇಂತಹ ಕುಟುಂಬದಿಂದ ಬರುವ ಹುಡುಗ ನಾಯಕಿಯ ಮನೆಯಲ್ಲಿ ಆಕೆಯನ್ನು ನೋಡಿಕೊಳ್ಳುವ ಕೇರ್ ಟೇಕರ್ ಆಗಿರುತ್ತಾನೆ. ಇವರಿಬ್ಬರ ನಡುವೆ ಬೆಳೆಯುವ ನಿಜವಾದ ಪ್ರೀತಿಯೇ ಈ ಧಾರವಾಹಿ ಕಥೆ. ಧಾರಾವಾಹಿಯ ಪ್ರೊಮೋವನ್ನು ನಿಶಾ ಅವರು ಶೇರ್ ಮಾಡಿಕೊಂಡಿದ್ದು, ಈ ಧಾರಾವಾಹಿಯ ಕಥೆ ಎಲ್ಲರಿಗೂ ತುಂಬಾ ಇಷ್ಟವಾಗುತ್ತದೆ ಎಂದು ನಂಬಿದ್ದಾರೆ ನಿಶಾ.