ನಟ ಯಶ್ ರಾವರಿಗಾಗಿ ಓಡೋಡಿ ಬಂದ ತೆಲುಗಿನ ಖ್ಯಾತ ನಟ: ಯಶ್ ಜೊತೆ ಸಿನೆಮಾ ಮಾಡಲು ಮುಂದಾದ ಟಾಪ್ ಹೀರೋ ಯಾರು ಗೊತ್ತೇ??
ನಟ ಯಶ್ ಅವರು ಈಗ ಪ್ಯಾನ್ ಇಂಡಿಯಾ ಸ್ಟಾರ್, ಅದರಲ್ಲೂ ಕೆಜಿಎಫ್2 ಸಿನಿಮಾ ಯಶಸ್ಸು ಅವರನ್ನು ಯಾವ ಹಂತಕ್ಕೆ ಕರೆದುಕೊಂಡು ಜೋಗಿದೆ ಎಂದು ಪ್ರತ್ಯೇಕವಾಗಿ ಹೇಳಬೇಕಿಲ್ಲ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಯಶ್ ಅವರಿಗೆ ಅಭಿಮಾನಿ ಬಳಗ ಇದೆ. ಕೆಜಿಎಫ್2 ನಂತರ ಯಶ್ ಅವರು ಯಾವ ಸಿನಿಮಾದಲ್ಲಿ ನಟಿಸುತ್ತಾರೆ, ಯಶ್ ಅವರ 19ನೇ ಸಿನಿಮಾ ಯಾವುದು ಎನ್ನುವ ಅಭಿಮಾನಿಗಳಲ್ಲಿ ಮತ್ತು ಚಿತ್ರರಂಗದಲ್ಲಿ ಸಹ ಭಾರಿ ಕುತೂಹಲ ಇದೆ, ಆದರೆ ಇದರ ಬಗ್ಗೆ ಯಶ್ ಅವರು ಇನ್ನು ಯಾವುದೇ ಮಾಹಿತಿಯನ್ನು ಬಿಟ್ಟುಕೊಟ್ಟಿಲ್ಲ. ಕೆಜಿಎಫ್2 ಬಿಡುಗಡೆಯಾಗಿ 5 ತಿಂಗಳು ಕಳೆಯುತ್ತಿದ್ದರು, ಯಶ್19 ಬಗ್ಗೆ ಹೊಸ ಅಪ್ಡೇಟ್ ಸಿಕ್ಕಿಲ್ಲ.
ಸಧ್ಯಕ್ಕೆ ಸಿಕ್ಕಿರುವ ಮಾಹಿತಿ ಪ್ರಕಾರ ನಟ ಯಶ್ ಅವರು ಮುಂದಿನ ಸಿನಿಮಾದಲ್ಲಿ ಮತ್ತೊಬ್ಬ ಸ್ಟಾರ್ ನಟನ ಜೊತೆಗೆ ಕೈಜೋಡಿಸಲಿದ್ದಾರೆ ಎನ್ನಲಾಗುತ್ತಿದೆ. ಯಶ್ ಅವರ ಮುಂದಿನ ಸಿನಿಮಾವನ್ನು ಮಫ್ತಿ ಸಿನಿಮಾ ಖ್ಯಾತಿಯ ನರ್ತನ್ ಅವರು ನಿರ್ದೇಶನ ಮಾಡುತ್ತಾರೆ ಎನ್ನಲಾಗಿತ್ತು, ನರ್ತನ್ ಅವರು ಸಹ ಈ ಬಗ್ಗೆ ಒಂದೆರಡು ಸಾರಿ ಮಾತನಾಡಿದ್ದರು, ಆದರೆ ಈ ಸಿನಿಮಾ ಬಗ್ಗೆ ಅಧಿಕೃತವಾಗಿ ಯಶ್ ಅವರಿಂದ ಯಾವುದೇ ಹೊಸ ಅಪ್ಡೇಟ್ ಸಿಕ್ಕಿಲ್ಲ. ಈ ಬಗ್ಗೆ ಕೇಳಿ ಬರುತ್ತಿರುವ ಹೊಸ ಗಾಸಿಪ್ ಏನೆಂದರೆ, ನರ್ತನ್ ಅವರು ಸಿನಿಮಾ ಕಥೆಯನ್ನು ಮೆಗಾಸ್ಟಾರ್ ಚಿರಂಜೀವಿ ಅವರ ಬಳಿ ಸಹ ಡಿಸ್ಕಸ್ ಮಾಡಿದ್ದು, ಚಿರು ಅವರಿಗೆ ಕಥೆ ತುಂಬಾ ಇಷ್ಟವಾಗಿ ಕಥೆಯನ್ನು ಲಾಕ್ ಮಾಡಿದ್ದಾರೆ ಎನ್ನಲಾಗಿದೆ.
ಹಾಗಾಗಿ ಈ ಸಿನಿಮಾದಲ್ಲಿ ಯಶ್ ಅವರು ಮತ್ತು ರಾಮ್ ಚರಣ್ ಅವರು ಜೊತೆಯಾಗಿ ನಟಿಸುತ್ತಾರೆ ಎನ್ನಲಾಗುತ್ತಿದೆ. ರಾಮ್ ಚರಣ್ ಅವರು ಆರ್.ಆರ್.ಆರ್ ಬಳಿಕ ಖ್ಯಾತ ನಿರ್ದೇಶಕ ಶಂಕರ್ ಅವರೊಡನೇ ಸಿನಿಮಾ ಮಾಡುತ್ತಿದ್ದಾರೆ. ಇದು ಕೂಡ ಪ್ಯಾನ್ ಇಂಡಿಯಾ ಸಿನಿಮಾ ಆಗಿರಲಿದೆ. ಅದರ ನಡುವೆಯೇ ಮಫ್ತಿ ಸಿನಿಮಾ ಖ್ಯಾತಿಯ ನರ್ತನ್ ಅವರೊಡನೆ ಮುಂದಿನ ಸಿನಿಮಾ ಮಾಡುತ್ತಾರೆ, ಇದರಲ್ಲಿ ಯಶ್ ಸಹ ಇರಲಿದ್ದಾರೆ, ಇಬ್ಬರು ಪ್ಯಾನ್ ಇಂಡಿಯಾ ಸ್ಟಾರ್ ಗಳ ಸಂಗಮ ಒಂದೇ ಸಿನಿಮಾದಲ್ಲಿ ಆಗುತ್ತದೆ ಎನ್ನುವ ಮಾತುಗಳು ಕೇಳುಬರುತ್ತಿದ್ದು, ಈ ಸುದ್ದಿ ಕೇಳಿದ ಇಬ್ಬರು ನಟರ ಅಭಿಮಾನಿಗಳು ಥ್ರಿಲ್ ಆಗಿದ್ದಾರೆ. ಈ ಸುದ್ದಿ ನಿಜವೇ ಎಂದು ತಿಳಿಯಲು ಇನ್ನು ಕೆಲ ಸಮಯ ಕಾಯಬೇಕಿದೆ.