ಎಂತಹ ಪಾಪಗಳನ್ನು ಮಾಡಿದರೂ ಕೂಡ ಅಪ್ಪಿ ತಪ್ಪಿಯೂ ಇವುಗಳನ್ನು ಮಾಡಬೇಡಿ, ನರಕ ಫಿಕ್ಸ್ ಎನ್ನುತ್ತೆ ಗರುಡ ಪುರಾಣ. ಯಾವ್ಯಾವು ಗೊತ್ತೇ??

39

Get real time updates directly on you device, subscribe now.

ಪ್ರತಿಯೊಬ್ಬ ವ್ಯಕ್ತಿಯೂ ಜೀವನದಲ್ಲಿ ಮಾಡುವ ಕರ್ಮ ಅಥವಾ ಕಾರ್ಯಗಳು ಬಹಳ ಮುಖ್ಯ ಆಗುತ್ತದೆ. ಜೀವನದಲ್ಲಿ ಮಾಡುವ ಒಳ್ಳೆಯ ಅಥವಾ ಕೆಟ್ಟ ಕೆಲಸಗಳೆ, ಒಬ್ಬ ಮನುಷ್ಯ ಸತ್ತ ನಂತರ ನರಕಕ್ಕೆ ಹೋಗುತ್ತಾನಾ ಅಥವಾ ಸ್ವರ್ಗಕ್ಕೆ ಹೋಗುತ್ತಾನಾ ಎನ್ನುವುದನ್ನು ತೀರ್ಮಾನ ಮಾಡುತ್ತದೆ. ಒಳ್ಳೆಯ ಕೆಲಸಗಳನ್ನು ಮಾಡುವ ವ್ಯಕ್ತಿ ಸ್ವರ್ಗಕ್ಕೆ ಹೋಗುತ್ತಾನೆ, ಕೆಟ್ಟ ಕೆಲಸಗಳನ್ನು ಮಾಡುವ ವ್ಯಕ್ತಿ ನರಕಕ್ಕೆ ಹೋಗುತ್ತಾನೆ ಎಂದು ಗರುಡ ಪುರಾಣದಲ್ಲಿ ತಿಳಿಸಲಾಗಿದೆ. ಒಬ್ಬ ವ್ಯಕ್ತಿ ಸತ್ತ ಬಳಿಕ, ಅವರ ದೇಹವನ್ನು ಪ್ರಾಣ ತ್ಯಜಿಸಿ, ಪ್ರಯಾಣ ಬೆಳೆಸಲು ಶುರುಮಾಡುತ್ತದೆ, ಆತ್ಮವು ಮೂರು ದಾರಿಗಳಲ್ಲಿ ಪ್ರಯಾಣ ಮಾಡುತ್ತದೆ, ಒಂದು ಆರ್ಚಿ ದಾರಿ, ಎರಡನೆಯದು ಧೂಮ್ ದಾರಿ ಮೂರನೆಯದು ವಿನಾಶ ದಾರಿ. ದೇವಲೋಕ ಅಥವಾ ಬ್ರಹ್ಮಲೋಕದ ಮಾರ್ಗವನ್ನು ಆರ್ಚಿ ದಾರಿ ಎಂದು ಕರೆಯಲಾಗುತ್ತದೆ, ಪಿತೃಲೋಕವನ್ನು ಧೂಮ್ ದಾರಿ ಎಂದು ಕರೆಯಲಾಗುತ್ತದೆ, ನರಕವನ್ನು ವಿನಾಶ ದಾರಿ ಎಂದು ಕರೆಯಲಾಗುತ್ತದೆ. ಸತ್ತ ವ್ಯಕ್ತಿ ಯಾವ ದಾರಿಯಲ್ಲಿ ಹೋಗುತ್ತಾನೆ ಎನ್ನುವುದನ್ನು ನಿರ್ಧಾರ ಮಾಡುವುದು ಅವನು ಬದುಕಿದ್ದಾಗ ಮಾಡುಗ ಕೆಲಸಗಳು.

ಪ್ರತಿ ವ್ಯಕ್ತಿಯು ಬದುಕಿದ್ದಾಗ ಇಂದು ನಾವು ತಿಳಿಸುವ ಕೆಲವು ಕೆಲಸಗಳನ್ನು ಮಾಡಿದರೆ, ನರಕಕ್ಕೆ ಹೋಗೋದು ಗ್ಯಾರಂಟಿ ಎಂದು ಗರುಡ ಪುರಾಣದಲ್ಲಿ ಹೇಳಲಾಗಿದೆ. ಹಾಗಿದ್ದರೆ ಆ ಕೆಲಸಗಳು ಯಾವುವು ಎಂದು ತಿಳಿಸುತ್ತೇವೆ ನೋಡಿ..
*ನೀರು ಹಾಳು ಮಾಡುವ ವ್ಯಕ್ತಿ :- ಯಾವ ವ್ಯಕ್ತಿ ಕುಡಿಯುವ ನೀರು, ಬಾವಿ ಅಥವಾ ನೀರಿನ ಮೂಲಗಳನ್ನು ಹಾಳು ಮಾಡುತ್ತಾನೋ ಆತ ನರಕಕ್ಕೆ ಹೋಗುವುದು ಫಿಕ್ಸ್ ಎಂದು ಹೇಳಲಾಗುತ್ತದೆ. ನೀರು ಸಿಗುವ ಜಾಗಕ್ಕೆ ಗೌರವ ಕೊಡಬೇಕು ಎಂದು ಹೇಳಲಾಗುತ್ತದೆ. ಹಾಗಾಗಿ ನೀರಿಗೆ ಅವಮಾನ ಮಾಡುವ ವ್ಯಕ್ತಿ ನರಕಕ್ಕೆ ಹೋಗುತ್ತಾನೆ ಎಂದು ಗರುಡ ಪುರಾಣದಲ್ಲಿ ಹೇಳಲಾಗಿದೆ.
*ದುರಾಸೆ ಸ್ವಭಾವ :- ಯಾವಾಗಲೂ ದುರಾಸೆಯಿಂದ ಬೇರೆಯವರ ಆಸ್ತಿ ಹಣಕ್ಕಾಗಿ ಆಸೆ ಪಡುವ ವ್ಯಕ್ತಿ, ಬೇರೆಯವರ ಗುಣಗಳಲ್ಲಿ ತಪ್ಪು ಕಂಡುಹಿಡಿಯುವ ವ್ಯಕ್ತಿ ನರಕಕ್ಕೆ ಹೋಗುತ್ತಾನೆ. ಬ್ರಾಹ್ಮಣರಿಗೆ, ಸಾಧುಗಳಿಗೆ ಮತ್ತು ಧಾರ್ಮಿಕ ಗ್ರಂಥಗಳನ್ನು ಅವಮಾಣಿಸಿ ಟೀಕೆ ಮಾಡುವ ವ್ಯಕ್ತಿ ಸಹ ನರಕಕ್ಕೆ ಹೋಗುತ್ತಾನೆ.

*ಸೇವೆ ಮಾಡದ ವ್ಯಕ್ತಿ :- ಅನಾಥ ಮಗುವಿಗೆ ಗೌರವ ನೀಡದೆ ಇರುವ ವ್ಯಕ್ತಿ, ಹಿರಿಯರಿಗೆ ಗೌರವ ಸಲ್ಲಿಸದೆ ಇರುವ ವ್ಯಕ್ತಿ, ವೃದ್ಧಾರ ಸೇವೆ ಮಾಡದ ವ್ಯಕ್ತಿ, ಅವರಿಗೆ ಕರುಣೆ ತೋರಿಸದ ವ್ಯಕ್ತಿ, ನರಕಕ್ಕೆ ಹೋಗುತ್ತಾನೆ.
*ಪೂಜೆ ಮಾಡದ ವ್ಯಕ್ತಿ :- ಪತ್ನಿ, ಮಕ್ಕಳು, ಸೇವಕರು ಮತ್ತು ಅತಿಥಿಗಳಿಗೆ ಆಹಾರ ನೀಡದ ವ್ಯಕ್ತಿ ಹಾಗೂ ಹಿರಿಯರ ಮತ್ತು ದೇವರ ಪೂಜೆಯನ್ನು ಮಾಡದೆ ನಿಲ್ಲಿಸುವ ವ್ಯಕ್ತಿ ನರಕದಲ್ಲಿ ಸ್ಥಾನ ಪಡೆಯುತ್ತಾನೆ ಎಂದು ಗರುಡ ಪುರಾಣದಲ್ಲಿ ಹೇಳಲಾಗಿದೆ.

*ದಣಿದವರಿಗೆ ಸಹಾಯ ಮಾಡಿ ;- ಇಡೀ ದಿನ ಕಷ್ಟಪಟ್ಟು ಕೆಲಸ ಮಾಡಿ, ಸುಸ್ತಾಗಿ ನಿಮ್ಮ ಮನೆಗೆ ಬರುವ ವ್ಯಕ್ತಿಗೆ ಸಹಾಯ ಮಾಡಿ. ಅವರ ಹಸಿವು ಮತ್ತು ಬಾಯಾರಿಕೆ ಕಡಿಮೆ ಆಗುವ ಹಾಗೆ ಮಾಡಿ, ಅದನ್ನು ಬಿಟ್ಟು ಅವರಿಗೆ ಅವಮಾನ ಮಾಡುವುದು, ಟೀಕೆ ಮಾಡುವುದು ಮಾಡಿದರೆ ನರಕದಲ್ಲಿ ಶಿಕ್ಷೆಗೆ ಗುರಿಯಾಗುತ್ತೀರಿ.
*ಪಾಪದ ಕೆಲಸಗಳು ;- ಆತ್ಮಹತ್ಯೆ ಮಾಡಿಕೊಂಡರೆ, ಸ್ತ್ರೀಹತ್ಯೆ ಮಾಡಿದರೆ, ಗರ್ಭಪಾತ ಮಾಡಿದರೆ, ಮತ್ತೊಬ್ಬರ ವಿರುದ್ಧ ಸುಳ್ಳು ಸಾಕ್ಷಿ ಹೇಳಿದರೆ, ಅಂತಹ ವ್ಯಕ್ತಿಗೆ ನರಕದಲ್ಲಿ ಸ್ಥಾನ ಖಾಯಂ. ಹೆಣ್ಣುಮಕ್ಕಳನ್ನು ಮಾರಾಟ ಮಾಡುವವರು, ಸುಳ್ಳು ಹೇಳುವವರನ್ನು ಕೂಡ ನರಕಕ್ಕೆ ಕಳಿಸಲಾಗುತ್ತದೆ.

Get real time updates directly on you device, subscribe now.