ಬಾಡಿಗೆ ಮೂಲಕ ತಾಯಿಯಾದ ನಯನಾತಾರಾಗೆ ಮಗು ಬಂದ ಎರಡೇ ದಿನಕ್ಕೆ ಶಾಕ್: ಕಂಬಿ ಎಣಿಸುತ್ತಾರಾ ನಯನತಾರ. ಮಹಾ ಎಡವಟ್ಟು ಏನಾಗಿದೆ ಗೊತ್ತೇ??
ಕಾಲಿವುಡ್ ನಟಿ ನಯನತಾರ ಮತ್ತು ನಿರ್ದೇಶಕ ವಿಘ್ನೇಶ್ ಶಿವನ್ ನೋಡಿ ನಾಲ್ಕು ತಿಂಗಳ ಹಿಂದೆ ಮದುವೆಯಾಯಿತು, ಮೊನ್ನೆಯಷ್ಟೇ ಈ ಜೋಡಿ ತಾವಿಬ್ಬರು ಅವಳಿ ಗಂಡುಮಕ್ಕಳ ತಂದೆ ತಾಯಿ ಆಗಿರುವ ಸಂತೋಷದ ವಿಚಾರವನ್ನು ಶೇರ್ ಮಾಡಿಕೊಂಡಿದ್ದರು. ತಮ್ಮ ಮುದ್ದು ಮಕ್ಕಳಿಗೆ ಉಯಿರ್ ಉಲಗಂ ಎಂದು ಹೆಸರನ್ನು ಸಹ ಇಟ್ಟು, ಮಕ್ಕಳ ಮೇಲೆ ತಮ್ಮಿಬ್ಬರಿಗೆ ಎಷ್ಟು ಪ್ರೀತಿ ಇದೆ ಎಂದು ವ್ಯಕ್ತಪಡಿಸಿದ್ದರು. ಆದರೆ ಇದೀಗ ಈ ಜೋಡಿಗೆ ತಮಿಳು ನಾಡು ಸರ್ಕಾರ ಶಾಕ್ ಕೊಟ್ಟಿದೆ.
ನಯನತಾರ ಮತ್ತು ವಿಘ್ನೇಶ್ ಶಿವನ್ ದಂಪತಿ ಬಾಡಿಗೆ ತಾಯಿ ಮೂಲಕ ಮಗು ಪಡೆದಿದ್ದಾರೆ. ಕಳೆದ ವರ್ಷ ಸರ್ಕಾರವು ಬಾಡಿಗೆ ತಾಯ್ತನದ ವಿಚಾರವಾಗಿ ಕೆಲವು ನಿಯಮಗಳನ್ನು ಜಾರಿ ಮಾಡಿದೆ. ಬಾಡಿಗೆ ತಾಯಿ ಆಗುವ ಮಹಿಳೆ 21 ರಿಂದ 35 ವಯಸ್ಸಿನ ಒಳಗಿರಬೇಕು, ಬಾಡಿಗೆ ತಾಯಿ ಆಗುವವರು ಆರೋಗ್ಯವಾಗಿರಬೇಕು ಮತ್ತು ಬಾಡಿಗೆ ತಾಯ್ತನವನ್ನು ವಾಣಿಜ್ಯವಾಗಿ ಮಾಡಬಾರದು ಎಂದು ಸರ್ಕಾರ ನಿಯಮಗಳನ್ನು ಜಾರಿಗೆ ತಂದಿದ್ದು, ನಯನತಾರ ಮತ್ತು ವಿಘ್ನೇಶ್ ದಂಪತಿ ಜೋಡಿ ಈ ನಿಯಮಗಳನ್ನು ಪಾಲಿಸಿಲ್ಲ ಎನ್ನುವ ಅನುಮಾನ ತಮಿಳು ನಾಡು ಸರ್ಕಾರಕ್ಕೆ ಮೂಡಿದೆ.
ಹಾಗಾಗಿ ಈ ದಂಪತಿ ಮಗು ಪಡೆದಿರುವ ಬಗ್ಗೆ ತನಿಖೆ ನಡೆಸಬೇಕು ಎಂದು ತಮಿಳು ನಾಡು ವೈದ್ಯಕೀಯ ಸೇವೆಗಳ ನಿರ್ದೇಶನಾಲಯ ಆದೇಶ ನೀಡಿದೆ. ಇದರಿಂದ ನಯನತಾರ ವಿಘ್ನೇಶ್ ದಂಪತಿಗೆ ಶಾಕ್ ಆಗಿದೆ. ಅವಳಿ ಮಕ್ಕಳ ತಂದೆ ತಾಯಿ ಆದ ಖುಷಿಯಲ್ಲಿದ್ದ ದಂಪತಿಗೆ ಈಗ ಈ ವಿಚಾರದಲ್ಲಿ ಭಯ ಕಾಡುವುದಕ್ಕೆ ಶುರುವಾಗಿದೆ. ಸೋಷಿಯಲ್ ಮೀಡಿಯಾದಲ್ಲಿ ಈ ಜೋಡಿ ಜೈಲಿಗೆ ಹೋಗುವ ಹಾಗೆ ಆಗುತ್ತಾ ಎನ್ನುವ ಚರ್ಚೆ ಸಹ ನಡೆಯುತ್ತಿದೆ. ಒಟ್ಟಿನಲ್ಲಿ ತಮಿಳುನಾಡು ಸರ್ಕಾರ ವಿಧಿಸಿರುವ ತನಿಖೆ ಹೇಗೆ ನಡೆಯುತ್ತದೆ, ನಯನತಾರ ವಿಘ್ನೇಶ್ ಶಿವನ್ ದಂಪತಿ ಎಲ್ಲಾ ನಿಯಮಗಳನ್ನು ಪಾಲಿಸಿ ಮಕ್ಕಳನ್ನು ಪಡೆದಿದ್ದಾರಾ ಎನ್ನುವ ಪ್ರಶ್ನೆಗೆ ಉತ್ತರ ಮುಂದಿನ ದಿನಗಳಲ್ಲಿ ಸಿಗುತ್ತದೆ.