ಈ ಬಾರಿಯ ವಿಶ್ವಕಪ್ ತಂಡದ ಕುರಿತು ಕೊನೆಗೂ ಮಾತನಾಡಿದ ಧೋನಿ ಹೇಳಿದ್ದೇನು ಗೊತ್ತೇ??

36

Get real time updates directly on you device, subscribe now.

ಟಿ20 ವಿಶ್ವಕಪ್ ಪಂದ್ಯಗಳು ಇನ್ನೇನು ಶುರುವಾಗಲಿದೆ. ಪಂದ್ಯಗಳು ಶುರುವಾಗುವ ಎರಡು ವಾರಗಳ ಮೊದಲೇ ಭಾರತ ತಂಡವು ಆಸ್ಟ್ರೇಲಿಯಾ ತಲುಪಿ ಅಭ್ಯಾಸ ಶುರು ಮಾಡುಕೊಂಡಿದೆ. ಒಂದು ಪ್ರಾಕ್ಟೀಸ್ ಪಂದ್ಯ ಸಹ ಆಡಿ ಗೆದ್ದಿದೆ. ಭಾರತ ತಂಡದಲ್ಲಿ ಈಗ ಪ್ರಮುಖವಾದ ಇಬ್ಬರು ಆಟಗಾರರಿಲ್ಲ, ಜಸ್ಪ್ರೀತ್ ಬುಮ್ರ ಮತ್ತು ರವೀಂದ್ರ ಜಡೇಜಾ ಇಬ್ಬರು ಸಹ ಇಲ್ಲ. ಸ್ಟ್ಯಾಂಡ್ ಬೈ ಆಟಗಾರನಿಗಿದ್ದ ದೀಪಕ್ ಚಹರ್ ಅವರು ಸಹ ತಂಡದಿಂದ ಹೊರಗುಳಿದಿದ್ದಾರೆ.

ಪರಿಸ್ಥಿತಿ ಹೀಗಿದ್ದರೂ ಸಹ, ತಂಡದಲ್ಲಿ ಈಗಿರುವ ಸದಸ್ಯರು ಸಹ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಇನ್ನು ವಿಶ್ವಕಪ್ ಗೆ ಆಯ್ಕೆಯಾಗಿರುವ ಆಟಗಾರರ ಬಗ್ಗೆ ಈಗಾಗಲೇ ಹಲವು ಆಟಗಾರರು ಮತ್ತು ಕ್ರಿಕೆಟ್ ತಜ್ಞರು ಪ್ರತಿಕ್ರಿಯೆ ವ್ಯಕ್ತಪಡಿಸಿದದ್ದು, ಇದೀಗ ಮೊದಲ ಬಾರಿಗೆ ಕ್ಯಾಪ್ಟನ್ ಕೂಲ್, ಧೋನಿ ಅವರು ವಿಶ್ವಕಪ್ ಗೆ ಆಯ್ಕೆಯಾಗಿರುವ ತಂಡದ ಬಗ್ಗೆ ಮಾತನಾಡಿದ್ದಾರೆ. ಬೆಂಗಳೂರಿಗೆ ಧೋನಿ ಅವರು ಬಂದಿದ್ದಾಗ ವಿಶ್ವಕಪ್ ತಂಡದ ಬಗ್ಗೆ ಪ್ರಶ್ನೆ ಕೇಳಲಾಗಿದ್ದು, ಧೋನಿ ಅವರು ಉತ್ತರ ಕೊಟ್ಟಿದ್ದು ಹೀಗೆ.. “10 ನಿಮಿಷ, 15 ನಿಮಿಷಗಳಲ್ಲಿ ಗೇಮ್ ನಿಮ್ಮ ಕೈಬಿಟ್ಟು ಹೋಗಹುದು, ಅದು ಗೇಮ್ ನಲ್ಲಿ ಆಗುತ್ತದೆ. ನೀವು ಯಾವಾಗಲೂ ನಿಮ್ಮ ಬೆಸ್ಟ್ ನೀಡಬೇಕು.

ಎಲ್ಲಾ ತಂಡಗಳು ಅದೇ ಪ್ರಯತ್ನದಲ್ಲಿರುತ್ತವೆ. ಐದಾರು ತಂಡಗಳು ಬಲಿಷ್ಠವಾಗಿದೆ, ಆ ದಿನ ನೀವು ಹೇಗೆ ಆಡುತ್ತೀರಿ ಎನ್ನುವುದು ಮಾತ್ರ ತುಂಬಾ ಮುಖ್ಯವಾಗುತ್ತದೆ. ಟೀಮ್ ಬಗ್ಗೆ ಹೇಳುವುದಾದರೆ ತುಂಬಾ ಒಳ್ಳೆಯ ಟೀಮ್ ಆಗಿದೆ, ಬಹಳ ಚೆನ್ನಾಗಿ ಆಡುತ್ತಿದ್ದಾರೆ. ನನ್ನ ಮನಸ್ಸಿನಲ್ಲಿ ಏನು ಇರುತ್ತದೆ ಎಂದರೆ, ಪ್ರತಿ ಮ್ಯಾಚ್ ನಲ್ಲು ಅವರು ತಮ್ಮ ಎಫರ್ಟ್ಸ್ ಹಾಕಿ, 80 ರಿಂದ 90% ರಷ್ಟು ಚೆನ್ನಾಗಿ ಆಡಬೇಕು. ಬೇರೆ ತಂಡಗಳು ಸಹ ಅವರ ಸಾಮರ್ಥ್ಯಕ್ಕೆ ಚೆನ್ನಾಗಿ ಆಡಬೇಕು, ಆಗ ಪೈಪೋಟಿಯು ಇರುತ್ತದೆ. ನೀವು ಗೆಲ್ಲಲು ಅಪೋಸಿಟ್ ತಂಡದಲ್ಲಿ ಬಲಿಷ್ಠ ಪ್ಲೇಯರ್ ಗಳು ಇದ್ದಾರೆ ಎಂದು ಯೋಚಿಸಬಾರದು. ನಮ್ಮ ಬೆಸ್ಟ್ ನಾವು ಕೊಟ್ಟರೆ, ಎಲ್ಲವೂ ಒಳ್ಳೆಯ ದಾರಿಯಲ್ಲಿ ಹೋಗುತ್ತದೆ..” ಎಂದಿದ್ದಾರೆ ಎಂ.ಎಸ್.ಧೋನಿ ಅವರು.

Get real time updates directly on you device, subscribe now.