ಭಾಗ್ಯ ಲಕ್ಷ್ಮಿ ಧಾರಾವಾಹಿಯಲ್ಲಿ ಕಾಣಿಸಿಕೊಂಡಿರುವ ಪಾತ್ರದಾರಿ ಲಕ್ಷ್ಮಿ ರವರ ನಿಜವಾದ ಹೆಸರೇನು ಗೊತ್ತೇ?? ಲೈಫ್ ಸ್ಟೈಲ್ ಹೇಗಿದೆ ಗೊತ್ತೇ??
ಕಲರ್ಸ್ ಕನ್ನಡ ವಾಹಿನಿ ಕಿರುತೆರೆ ವೀಕ್ಷಕರಿಗೆ ಹೊಸ ಸೀರಿಯಲ್ ಮತ್ತು ಹೊಸ ಕಾರ್ಯಕ್ರಮಗಳ ಮೂಲಕ ಬಹಳಷ್ಟು ಮನರಂಜನೆ ನೀಡುತ್ತದೆ. ಈ ವಾರದಿಂದ ಅಂದರೆ ಆಕ್ಟೊಬರ್ 10ರಿಂದ ಕಲರ್ಸ್ ಕನ್ನಡ ವಾಹಿನಿಯಲ್ಲಿ ಭಾಗ್ಯಲಕ್ಷ್ಮೀ ಎನ್ನುವ ಹೊಸ ಧಾರವಾಹಿ ಶುರುವಾಗಿದೆ. ಈ ಧಾರವಾಹಿ ಮೂಲಕ ಸುಷ್ಮಾ ಅವರು ಬಹಳ ವರ್ಷಗಳ ನಂತರ ಆಕ್ಟಿಂಗ್ ಗೆ ಕಂಬ್ಯಾಕ್ ಮಾಡಿದ್ದಾರೆ. ಈ ಧಾರವಾಹಿ ಶುರುವಾದ ಬಳಿಕ ವೀಕ್ಷಕರಿಗೆ ಬಹಳ ಇಷ್ಟ ಆಗಿರುವದು ಲಕ್ಷ್ಮಿ ಪಾತ್ರ, ಈ ಲಕ್ಷ್ಮಿ ಪಾತ್ರದಲ್ಲಿ ಅಭಿನಯಿಸಿರುವ ಸುಂದರವಾದ ಮುದ್ದಾದ ನಟಿ ನಿಜಕ್ಕೂ ಯಾರು? ಅವರ ಹೆಸರೇನು ಗೊತ್ತಾ? ತಿಳಿಸುತ್ತೇವೆ ನೋಡಿ..
ಲಕ್ಷ್ಮಿ ಪಾತ್ರದಲ್ಲಿ ಬಹಳ ಮುಗ್ಧವಾಗಿ ಮತ್ತು ಕ್ಯೂಟ್ ಆಗಿ ಕಾಣಿಸಿಕೊಂಡಿರುವ ಈ ನಟಿಯ ನಿಜವಾದ ಹೆಸರು ಭೂಮಿಕ. ಇದಕ್ಕಿಂತ ಮೊದಲು ಕಲರ್ಸ್ ಕನ್ನಡ ವಾಹನಿಯಲ್ಲೇ ಡ್ಯಾನ್ಸಿಂಗ್ ಸ್ಟಾರ್ಸ್ ಜ್ಯೂನಿಯರ್ ಶೋನಲ್ಲಿ ಕಾಣಿಸಿಕೊಂಡಿದ್ದರು. ಅದಾದ ಬಳಿಕ ಗ್ಯಾಪ್ ನ ನಂತರ ಮತ್ತೆ ಕಲರ್ಸ್ ಕನ್ನಡ ವಹಿನಿಯಲ್ಲೇ ಭಾಗ್ಯಲಕ್ಷ್ಮಿ ಸೀರಿಯಲ್ ನಲ್ಲಿ ಅಭಿನಯಿಸುವ ಅವಕಾಶ ಸಿಕ್ಕಿದೆ. ಭೂಮಿಕಾ ಅವರು ಡ್ಯಾನ್ಸರ್ ಆಗಿದ್ದು, ಭರತನಾಟ್ಯ ಮತ್ತು ವೆಸ್ಟರ್ನ್ ಎರಡು ರೀತಿಯ ಡ್ಯಾನ್ಸ್ ಅನ್ನು ಅಚ್ಚುಕಟ್ಟಾಗಿ ಮಾಡುತ್ತಾರೆ. ಭೂಮಿಕಾ ಅವರು ಈಗ ಪ್ರಥಮ ವರ್ಷದ ಬಿಸಿಎ ಓದುತ್ತಿದ್ದು, ವಿದ್ಯಾಭ್ಯಾಸಕ್ಕೆ ತೊಂದರೆ ಆಗಬಾರದು ಎನ್ನುವ ಭಯ ಅವರಿಗಿದೆ.

ಆದರೆ ಭೂಮಿಕಾ ಅವರ ತಂದೆ ತಾಯಿ ಇಂಥಾ ಅವಕಾಶ ಎಲ್ಲರಿಗೂ ಸಿಗುವುದಿಲ್ಲ. ಧಾರಾವಾಹಿಯ ಅವಕಾಶವನ್ನು ಒಪ್ಪಿಕೊ ಎಂದು ಹೇಳಿದ್ದರಂತೆ, ಭೂಮಿಕಾ ಅವರ ತಂದೆ ತಾಯಿಗೆ ಮಗಳನ್ನು ಡ್ಯಾನ್ಸರ್ ಆಗಿ ಜೊತೆಗೆ ನಟಿಯಾಗಿ ಸಹ ನೋಡಬೇಕು ಎಂದು ಆಸೆ ಇತ್ತು, ಇದೀಗ ಭಾಗ್ಯಲಕ್ಷ್ಮಿ ಧಾರವಾಹಿ ಮೂಲಕ ಅದು ನೆರವೇರಿದೆ. ಭೂಮಿಕಾ ಅವರು ವಿದ್ಯಾಭ್ಯಾಸಕ್ಕೆ ತೊಂದರೆ ಆಗಬಾರದು ಎಂದು ತಂಡದ ಜೊತೆಗೆ ಮಾತನಾಡಿದ್ದು ಬಿಸಿಎ ನಲ್ಲಿ ಬರುವ ಪ್ರಾಕ್ಟಿಕಲ್ ಕ್ಲಾಸ್ ಗಳನ್ನು ಅಟೆಂಡ್ ಮಾಡಲು ಅವಕಾಶ ಕೊಡುವುದಾಗಿ ಹೇಳಿದ್ದಾರಂತೆ. ಇನ್ನು ಭೂಮಿಕ ಅವರಿಗೆ ನಟನೆಯ ಬಗ್ಗೆ ಏನು ಗೊತ್ತಿರಲಿಲ್ಲ, ಭರತನಾಟ್ಯ ಕಲಿತಿರುವ ಕಾರಣ, ಅವರ ಮುಖದ ಮೇಲೆ ಭಾವನೆಯನ್ನು ಚೆನ್ನಾಗಿ ವ್ಯಕ್ತಪಡಿಸುತ್ತಾರೆ, ಹಾಗಾಗಿ ಇವರನ್ನು ಸೆಲೆಕ್ಟ್ ಮಾಡಿ, ಧಾರವಾಹಿ ಚಿತ್ರೀಕರಣ ಶುರು ಆಗುವುದಕ್ಕಿಂತ ಮೊದಲು ಕೆಲವು ದಿನಗಳ ಕಾಲ ಟ್ರೇನಿಂಗ್ ಸಹ ನೀಡಲಾಗಿದೆಯಂತೆ.