ಇನ್ನೇನು ಕಾರ್ತಿಕ ಮಾಸ ಬರುತ್ತಿದೆ, ಈ ಸಮಯದಲ್ಲಿ ಲಕ್ಷ್ಮಿ – ನಾರಾಯಣರ ಆಶೀರ್ವಾದ ಪಡೆಯಲು ಈ ಸುಲಭ ಕೆಲಸ ಮಾಡಿ ಸಾಕು.
ಹಿಂದೂ ಕ್ಯಾಲೆಂಡರ್ ಪ್ರಕಾರ ಪ್ರತಿವರ್ಷದ 8ನೇ ತಿಂಗಳನ್ನು ಕಾರ್ತಿಕಮಾಸ ಎಂದು ಕರೆಯುತ್ತಾರೆ. ಸಮಯದಲ್ಲಿ ಮಹಾವಿಷ್ಣು ಯೋಗ ನಿದ್ರೆಯಿಂದ 4 ತಿಂಗಳು ಎಚ್ಚರವಾಗಿರುತ್ತಾರೆ. ಈ ಸಮಯದಲ್ಲಿ ವಿಷ್ಣು ಮತ್ತು ತುಳಸಿಯ ಆರಾಧನೆಗೆ ಮಹತ್ವ ಇದೆ. ಈ ಸಮಯದಲ್ಲಿ ಮಹಾವಿಷ್ಣು ಮತ್ತು ಲಕ್ಷ್ಮಿಯನ್ನು ಒಳಿಸಿಕೊಳ್ಳಬಹುದು. ಈ ಸಾರಿ ಅಕ್ಟೋಬರ್ 10ರಿಂದ ಕಾರ್ತಿಕ ಮಾಸ ಶುರುವಾಗಲಿದೆ. ದೇವುತಾನಿ ಏಕಾದಶಿ ಇಂದ ಒಳ್ಳೆಯ ಕೆಲಸಗಳು ಶುರುವಾಗಲಿದ್ದು, ಈ ಸಮಯದಲ್ಲಿ ವಿಷ್ಣುದೇವರು ಮೀನಿನ ರೂಪದಲ್ಲಿ ನೀರಿನ ಒಳಗೆ ನೆಲೆಸುತ್ತಾರೆ, ಈ ಸಮಯದಲ್ಲಿ ಜನರು ಸುಲಭವಾದ 7 ಕೆಲಸಗಳನ್ನು ಮಾಡುವುದರಿಂದ ಮಹಾವಿಷ್ಣು ಮತ್ತು ಲಕ್ಷ್ಮೀದೇವಿಯ ಕೃಪೆಗೆ ಪಾತ್ರರಾಗಬಹುದು. ಕಾರ್ತಿಕ ಮಾಸದಲ್ಲಿ ಮಾಡಬೇಕಾದ ಆ ನಾಲ್ಕು ಕೆಲಸಗಳ ಬಗ್ಗೆ ತಿಳಿಸತ್ತೇವೆ ನೋಡಿ..
ದೀಪದಾನ :- ಈ ಮಾಸದಲ್ಲಿ ಮನೆಯಲ್ಲಿ ದೀಪ ಹಚ್ಚಿ ಲಕ್ಷ್ಮೀದೇವಿ ಮತ್ತು ವಿಷ್ಣುವಿನ ಪೂಜೆ ಮಾಡುವುದದಿಂದ ಆ ವ್ಯಕ್ತಿ ಕಷ್ಟಗಳಿಂದ ಮುಕ್ತಿ ಪಡೆಯುತ್ತಾನೆ, ಆ ವ್ಯಕ್ತಿಯ ಮನೆಯಲ್ಲಿ ಸಂತೋಷ ನೆಮ್ಮದಿ ನೆಲೆಸುತ್ತದೆ. ಹಾಗೂ ದೀಪವನ್ನು ನದಿಯಲ್ಲಿ ತೇಲಿಬಿಟ್ಟು ಪೂಜೆ ಮಾಡುವುದರಿಂದ ಮುಕ್ತಿ ಪಡೆಯಬಹುದು.
ಪವಿತ್ರ ನದಿ ಸ್ನಾನ :- ಈ ಮಾಸವು ಪವಿತ್ರನದಿ ಸ್ನಾನಕ್ಕೆ ಮಹತ್ವ ನೀಡುತ್ತದೆ, ನದಿಯಲ್ಲಿ ಸ್ನಾನ ಮಾಡಲು ಆಗದೆ ಇದ್ದರೆ, ಮನೆಯಲ್ಲಿ ನೀರಿಗೆ ಗಂಗಾಜಲ ಬಳಸಿ ಸ್ನಾನ ಮಾಡಬಹುದು. ಈ ರೀತಿ ಸ್ನಾನ ಮಾಡುವುದು ಹಾಲಿನಲ್ಲಿ ಸ್ನಾನ ಮಾಡುವುದಕ್ಕೆ ಸಮವಾಗಿದೆ.
ಲಕ್ಷ್ಮಿ ಸ್ತೋತ್ರ ಪಠಣೆ :- ಈ ಮಾಸದಲ್ಲಿ ಲಕ್ಷ್ಮೀ ಸ್ತೋತ್ರ ಪಠಣೆ ಮಾಡುವುದಕ್ಕೆ ವಿಶೇಷ ಮಹತ್ವ ಇದೆ. ಕನಕಧಾರಾ ಸ್ತೋತ್ರ, ಲಕ್ಷ್ಮಿ ಸ್ತೋತ್ರ ಮತ್ತು ವಿಷ್ಣುಸ್ತೋತ್ರ ಪಠಿಸುವುದರಿಂದ ವಿಶೇಷ ಫಲ ಪಡೆದು ಸಾವಿನ ನಂತರ ಆ ವ್ಯಕ್ತಿ ಸ್ವರ್ಗಕ್ಕೆ ಸೇರುತ್ತಾನೆ, ಬದುಕಿರುವಾಗ ಮನೆಯಲ್ಲಿ ಸುಖ ಶಾಂತಿ ನೆಮ್ಮದಿ, ಸಮೃದ್ಧಿ ಇರುತ್ತದೆ. ಕಾರ್ತಿಕ ಮಾಸದಲ್ಲಿ ಈ ನಿಯಮಗಳನ್ನು ಪಾಲನೇ ಮಾಡುವುದರಿಂದ ಮುಂದಿನ ಜನ್ಮದಲ್ಲಿ ಒಳ್ಳೆಯ ಕುಟುಂಬ ಸಿಗುತ್ತದೆ.
ನೀರಿನಲ್ಲಿ ಹಾಲು ಬೆರೆಸಿ ಅರ್ಪಿಸಿ :- ತುಳಸಿಯನ್ನು ನೀರಿನಲ್ಲಿ ಬೆರೆಸಿದ ಹಾಲಿನ ಜೊತೆಗೆ ಅರ್ಪಣೆ ಮಾಡುವುದರಿಂದ ಲಕ್ಷ್ಮೀದೇವಿ ನಿಮಗೆ ಆಶೀರ್ವಾದ ನೀಡುತ್ತಾರೆ. ಬೆಳಗ್ಗೆ ಮತ್ತು ಸಾಯಂಕಾಲ ತುಪ್ಪದ ದೀಪ ಹಚ್ಚಿ, ಹಾಗು ಮಹಾವಿಷ್ಣುವಿಗೆ ಅರ್ಪಣೆ ಮಾಡುವ ನೈವೇದ್ಯದಲ್ಲಿ ತುಳಸಿಯನ್ನು ಸೇರಿಸಬೇಕು..ಜೊತೆಗೆ ಕಾರ್ತಿಕ ಮಾಸದಲ್ಲಿ ಬರುವ ದೇವಪ್ರಭೋದಿನಿ ಏಕಾದಶಿಯ ದಿನ ತುಳಸಿ ವಿವಾಹ ಮಾಡುವುದು ಅತ್ಯಂತ ಒಳ್ಳೆಯ ಪ್ರತಿಫಲ ನೀಡುತ್ತದೆ ಎಂದು ತಿಳಿದುಬಂದಿದೆ.