ಈ ಬಾರಿ ನೇರವಾಗಿ ಮಂಡ್ಯ ಜನರನ್ನು ಕೆಣಕಿದ ನಾಗ ಚೈತನ್ಯ ಹಾಗೂ ಚಿತ್ರ ತಂಡ: ರೊಚ್ಚಿಗೆದ್ದ ಮಂಡ್ಯ ಜನರು. ಏನಾಗಿದೆ ಗೊತ್ತೇ??

16

Get real time updates directly on you device, subscribe now.

ನಟ ನಾಗಚೈತನ್ಯ ಸಮಂತಾ ಅವರಿಂದ ವಿಚ್ಛೇದನ ಪಡೆದ ನಂತರ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ. ಈ ವರ್ಷದ ಆರಂಭದಲ್ಲಿ ಬಂಗಾರ್ರಾಜು ಸಿನಿಮಾ ತೆರೆಕಂಡು ಯಶಸ್ವಿಯಾಯಿತು. ಅದಾದ ಬಳಿಕ ತೆರೆಕಂಡ ಸಿಂಗ್ ಚಡ್ಡಾ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಮಕಾಡೆ ಮಲಗಿತು. ಹಾಗಿದ್ದರೂ ಚೈತನ್ಯ ಅವರಿಗೆ ಸಿಗುತ್ತಿರುವ ಅವಕಾಶಗಳೇನು ಕಡಿಮೆ ಆಗುತ್ತಿಲ್ಲ. ಒಂದರ ಹಿಂದರಂತೆ ಮತ್ತೊಂದು ಸಾಲು ಸಾಲು ಚೈತನ್ಯ ಅವರನ್ನು ಹುಡುಕಿ ಬರುತ್ತಿವೆ. ಇದೀಗ ಚೈತನ್ಯ ಅವರ ಹೊಸ ಸಿನಿಮಾ ಮಂಡ್ಯದಲ್ಲಿ ನಡೆಯುತ್ತಿದ್ದು, ಚಿತ್ರತಂಡ ಎಡವಟ್ಟು ಮಾಡಿಕೊಂಡಿದೆ.

ಮಂಡ್ಯದ ಪಾಂಡವಪುರ ಬಳಿ ಇರುವ ಮೇಲುಕೋಟೆ ದೇವಸ್ಥಾನ ನಮ್ಮ ರಾಜ್ಯದ ಪುಣ್ಯ ಸ್ಥಳಗಳಲ್ಲಿ ಒಂದು, ಇದು ಕರ್ನಾಟಕದ ಧಾರ್ಮಿಕ ಸ್ಥಳ ಆಗಿದೆ. ಮೇಲುಕೋಟೆಯಲ್ಲಿ ಈ ಹಿಂದೆ ಹಲವು ಸಿನಿಮಾಗಳ ಚಿತ್ರೀಕರಣ ನಡೆದಿದೆ, ಇದೀಗ ಚೈತನ್ಯ ಅವರ ಹೊಸ ಸಿನಿಮಾ ಚಿತ್ರೀಕರಣಕ್ಕಾಗಿ ಮೇಲುಕೋಟೆಯಲ್ಲಿ ಒಂದು ಸೆಟ್ ಹಾಕಲಾಗಿದೆ, ಮೇಲುಕೋಟೆಯ ಪಾರಂಪರಿಕ ಸ್ಥಳ ರಾಯಗೋಪುರದಲ್ಲಿ ಚೈತನ್ಯ ಅವರ ಪ್ರೊಡಕ್ಷನ್ 10 ಸಿನಿಮಾಗಾಗಿ ಸೆಟ್ ಹಾಕಲಾಗಿದೆ, ಅದು ಪಾರ್ಟಿ ಸೆಟ್ ಆಗಿದ್ದು, ಸ್ಥಳದಲ್ಲಿ ಮದ್ಯಪಾನಗಳನ್ನು ಇಡಲಾಗಿದೆ. ಇದರಿಂದ ಸ್ಥಳೀಯರ ಧಾರ್ಮಿಕ ಭಾವನೆಗೆ ಧಕ್ಕೆಯಾಗಿದೆ ಎಂದು ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹಿಂದೊಮ್ಮೆ ಚೈತನ್ಯ ಅವರ ಸಿನಿಮಾ ಒಂದರ ಚಿತ್ರೀಕರಣ ಇದೇ ಸ್ಥಳದಲ್ಲಿ ಆಗಿತ್ತು, ಆಗ ಅಕ್ಕ ತಂಗಿ ಕೊಳವನ್ನು ಕಲುಷಿತ ಮಾಡಲಾಗಿತ್ತು, ಇದೀಗ ರಾಯಗೋಪುರದ ಬಳಿ ಹೀಗೆ ಮಾಡಿದ್ದಾರೆ. ಹಾಗೆಯೇ ಮೇಲುಕೋಟೆ ಕಲ್ಯಾಣಿ ಬಳಿ ತೆಲುಗು ಸಿನಿಮಾ ಶೂಟಿಂಗ್ ಸಮಯದಲ್ಲಿ ಕಿರಿಕಿರಿ ಉಂಟು ಮಾಡಿದ್ದರು. ಇತ್ತ ಜಿಲ್ಲಾಧಿಕಾರಿ ಅಶ್ವತಿ ಅವರು ಎರಡು ದಿನಗಳ ಕಾಲ ಶರತ್ತುಬದ್ಧ ಚಿತ್ರೀಕರಣಕ್ಕೆ ಅನುಮತಿ ನೀಡಿದ್ದರು ಎನ್ನಲಾಗಿದೆ, ಆದರೆ ಜೆಗ ಸ್ಥಳೀಯರು ಇನ್ನುಮುಂದೆ ಮೇಲುಕೋಟೆಯಲ್ಲಿ ಪರಭಾಷಾ ಸಿನಿಮಾಗಳ ಚಿತ್ರೀಕರಣಕ್ಕೆ ಅನುಮತಿ ಕೊಡಬಾರದು ಎನ್ನುತ್ತಿದ್ದಾರೆ.

Get real time updates directly on you device, subscribe now.