ಒಂದು ಕಾಲದ ಟಾಪ್ ನಟ ಸುಮನ್ ರವರ ಮಗಳು ಹೇಗಿದ್ದಾರೆ ಗೊತ್ತೇ?? ಯಾವುದೇ ಬಾಲಿವುಡ್ ನಟಿಯರಿಗೂ ಕಡಿಮೆ ಇಲ್ಲ. ನೋಡಲು ಎರಡು ಕಣ್ಣು ಸಾಲದು.
ದಕ್ಷಿಣ ಭಾರತ ಚಿತ್ರರಂಗದ ಖ್ಯಾತ ನಟನಾಗಿ ಗುರುತಿಸಿಕೊಂಡವರಲ್ಲಿ ಸುಮನ್ ಸಹ ಒಬ್ಬರು. ಮೂಲತಃ ತೆಲುಗಿನವರಾದರು ಕನ್ನಡದಲ್ಲಿ ಸಹ ಇವರಿಗೆ ಬೇಡಿಕೆ ಇತ್ತು. ಕನ್ನಡದಲ್ಲೂ ಹಲವು ಸೂಪರ್ ಹಿಟ್ ಸಿನಿಮಾಗಳಲ್ಲಿ ನಾಯಕನಾಗಿ ಕಾಣಿಸಿಕೊಂಡಿದ್ದಾರೆ. ಈಗಲೂ ಸಹ ಇವರು ಅಭಿನಯಿಸಿದರೆ ಸಿನಿಮಾ ಬ್ಲಾಕ್ ಬಸ್ಟರ್ ಆಗುವುದು ಖಂಡಿತ. ಸುಮನ್ ಅವರು ಒಂದು ಕೇಸ್ ಇಂದ ಜೈಲಿಗೆ ಹೋಗಿ ಬಂದರು, ಹಾಗಿದ್ದರು ಸುಮನ್ ಅವರು ಸಿನಿಮಾ ಗಳಲ್ಲಿ ನಟಿಸುತ್ತಿದ್ದರು. ಸಂದರ್ಶನ ಒಂದರಲ್ಲಿ ಮಾತನಾಡಿದ್ದ ಸುಮನ್ ಅವರು ಒಬ್ಬ ರಾಜಕಾರಣಿಯ ಷಡ್ಯಂತ್ರದಿಂದ ತಮಗೆ ಈ ರೀತಿ ಆಯಿತು ಎಂದು ಹೇಳಿಕೊಂಡಿದ್ದರು.
ಜೈಲು ಪ್ರಕರಣದ ಬಳಿಕ ಸುಮನ್ ಅವರು ನಟನೆಯನ್ನು ಬಿಟ್ಟಿರಲಿಲ್ಲ. ಆದರೆ ಸುಮನ್ ಅವರಿಗೆ ಹೇಳಿಕೊಳ್ಳುವಂಥ ದೊಡ್ಡ ಅವಕಾಶಗಳು ಸಿಗುತ್ತಿರಲಿಲ್ಲ, ಅವರು ನಟಿಸಿದ ಸಿನಿಮಾಗಳು ನಿರೀಕ್ಷಿಸಿದ ಹಾಗೆ ದೊಡ್ಡ ಮಟ್ಟದಲ್ಲಿ ಯಶಸ್ಸು ಪಡೆಯುವಲ್ಲಿ ವಿಫಲವಾಗುತ್ತಿದ್ದವು. ಜೈಲಿಗೆ ಹೋಗಿ ಬಂದ ಬಳಿಕ ನಾಯಕನಾಗಿ ಹೆಚ್ಚು ಅವಕಾಶಗಳು ಸಿಗದ ಕಾರಣ ಕ್ಯಾರೆಕ್ಟರ್ ಆರ್ಟಿಸ್ಟ್ ಆಗಿ ನಟಿಸಲು ಶುರು ಮಾಡಿದರು. ಪಾಸಿಟಿವ್ ಆದ ಪಾತ್ರಗಳು ಮತ್ತು ನೆಗಟಿವ್ ಶೇಡ್ ಇರುವ ಪಾತ್ರಗಳು ಎರಡರಲ್ಲು ಸುಮನ್ ಅವರು ನಟಿಸಿದ್ದಾರೆ. ಈಗ ಸುಮನ್ ಅವರು ಹಲವು ಸಿನಿಮಾಗಳಲ್ಲಿ ಪ್ರಮುಖವಾದ ಪಾತ್ರಗಳಲ್ಲಿ ನಟಿಸುತ್ತಾ ಬ್ಯುಸಿ ಆಗಿದ್ದಾರೆ. ಸುಮನ್ ಅವರ ವೈಯಕ್ತಿಕ ಜೀವನದ ಬಗ್ಗೆ ಹಲವರಿಗೆ ಗೊತ್ತಿಲ್ಲ, ಇವರು ಪ್ರಸ್ತಿದ್ಧ ಸಾಹಿತಿ ಡಿವಿ ನರಸರಾಜು ಅವರ ಮೊಮ್ಮಗಳು ಶಿರಿತಾ ತಳವಾರ ಅವರೊಡನೆ ಮದುವೆ ಆಗಿದ್ದಾರೆ.

ಸುಮನ್ ಶಿರೀತಾ ಜೋಡಿಗೆ ಒಬ್ಬರು ಮುದ್ದಾದ ಮಗಳಿದ್ದಾರೆ ಎನ್ನುವ ವಿಷಯ ಹಲವರಿಗೆ ಈಗಲೂ ಗೊತ್ತಿಲ್ಲ. ಸುಮನ್ ಅವರ ಮಗಳ ಹೆಸರು ಅಖಿಲಜ ಪ್ರತ್ಯುಶ, ಇವರು ಸಹ ಕಲಾವಿದೆಯಾಗಿ ಗುರುತಿಸಿಕೊಂಡಿದ್ದಾರೆ. ಸುಮನ್ ಅವರ ಮಗಳು ಯಾವುದೇ ಸಿನಿಮಾ ನಾಯಕಿಗೆ ಕಡಿಮೆ ಇಲ್ಲ ಎನ್ನುವಷ್ಟು ಸುಂದರವಾಗಿದ್ದರೆ. ಭಾರತನಾಟ್ಯಮ್ ಕಲಿತಿರುವ ಇವರು, ಹಲವು ಕಾರ್ಯಕ್ರಮಗಳಲ್ಲಿ ನೃತ್ಯ ಪ್ರದರ್ಶನ ನೀಡಿದ್ದಾರೆ. ಪ್ರತ್ಯುಶ ಅವರಿಗೆ ಸಿನಿಮಾದಲ್ಲಿ ನಟಿಸಲು ಹಲವು ಬಾರಿ ಅವಕಾಶಗಳು ಬಂದಿವೆ, ಆದರೆ ಸಿನಿಮಾದಲ್ಲಿ ನಟಿಸಲು ಆಸಕ್ತಿ ಇಲ್ಲದ ಕಾರಣ ಇವರು ನಟನೆಯಿಂದ ದೂರವೇ ಉಳಿದಿದ್ದಾರೆ.
