ನಗು ಬರುವಂತಹ ವಿಚಿತ್ರ ಕಾರಣಗಳಿಗೆ ವಿಶ್ವಕಪ್ ನಿಂದ ಹೊರಗುಳಿದ ಟಾಪ್ 5 ಆಟಗಾರರು ಯಾರ್ಯಾರು ಗೊತ್ತೇ?? ಭಾರತೀಯನು ಲಿಸ್ಟ್ ನಲ್ಲಿ.
ವಿಶ್ವಕಪ್ ಪಂದ್ಯಗಳಲ್ಲಿ ಆಡಿ ತಮ್ಮ ದೇಶವನ್ನು ಪ್ರತಿನಿಧಿಸಬೇಕು ಎನ್ನುವುದು ಪ್ರತಿಯೊಬ್ಬ ಕ್ರಿಕೆಟಿಗರ ಕನಸಾಗಿರುತ್ತದೆ, ಈ ಟೂರ್ನಿಗಳಲ್ಲಿ ಕೆಲವು ಆಟಗಾರರಿಗೆ ಅವಕಾಶ ಸಿಗುತ್ತದೆ ಇನ್ನು ಕೆಲವರಿಗೆ ಅವಕಾಶ ಸಿಗುವುದಿಲ್ಲ. ಮತ್ತು ಕೆಲವು ಆಟಗಾರರಿಗೆ ಅವಕಾಶ ಸಿಗುವ ಹಾಗಿದ್ದರೂ ಅದೃಷ್ಟ ಕೈಕೊಟ್ಟು ವಿಚಿತ್ರವಾದ ಕೇಳಿದರೆ ನಗು ಬರುವಂಥ ಕಾರಣಗಳಿಂದ ವಿಶ್ವಕಪ್ ನಲ್ಲಿ ಆಡುವ ಅವಕಾಶ ಕಳೆದುಕೊಂಡಿದ್ದಾರೆ. ಈ ರೀತಿ ಈ ವರ್ಷ ವಿಶ್ವಕಪ್ ನಲ್ಲಿ ಸ್ಥಾನ ಕಳೆದುಕೊಂಡ ಐವರು ಆಟಗಾರರು ಯಾರ್ಯಾರು ಎಂದು ತಿಳಿಸುತ್ತೇವೆ ನೋಡಿ..
ಶ್ರೀಮಾನ್ ಹೇಟ್ಮೇಯರ್ :- ಇವರು ವೆಸ್ಟ್ ಇಂಡೀಸ್ ತಂಡದ ಸ್ಫೋಟಕ ಆಟಗಾರ, ಸರಿಯಾದ ಸಮಯಕ್ಕೆ ವಿಮಾನವನ್ನು ತಲುಪಲು ಸಾಧ್ಯವಾಗದ ಕಾರಣದಿಂದ ವಿಶ್ವಕಪ್ ಟೂರ್ನಿಯಿಂದ ಹೊರಬಿದ್ದಿದ್ದಾರೆ. ಕೌಟುಂಬಿಕ ಸಮಸ್ಯೆಗಳನ್ನು ತಿಳಿಸಿದ ಶ್ರೀಮಾನ್ ಹೇಟ್ಮೇಯರ್ ಅವರಿಗೆ ವೆಸ್ಟ್ ಇಂಡೀಸ್ ತಂಡ ಪ್ರತ್ಯೇಕ ವಿಮಾನದ ವ್ಯವಸ್ಥೆ ಮಾಡಿತು, ಆದರೆ ಸರಿಯಾದ ಸಮಯಕ್ಕೆ ಬಂದು ಆ ವಿಮಾನವನ್ನು ಹಿಡಿಯದ ಕಾರಣ ವೆಸ್ಟ್ ಇಂಡೀಸ್ ಕ್ರಿಕೆಟ್ ಮಂಡಳಿ ಇವರಃ ಮೇಲೆ ಕಠಿಣ ನಿರ್ಧಾರ ತೆಗೆದುಕೊಂಡು, ವಿಶ್ವಕಪ್ ತಂಡದಿಂದ ಇವರನ್ನು ಹೊರಹಾಕಿದೆ.
ರವೀಂದ್ರ ಜಡೇಜಾ :- ಭಾರತ ತಂಡದ ಆಕ್ರಮಣಕಾರಿ ಆಲ್ ರೌಂಡರ್ ರವೀಂದ್ರ ಜಡೇಜಾ ಅವರು ಗಾಯದ ಕಾರಣದಿಂದ ಏಷ್ಯಾಕಪ್ ಮತ್ತು ವಿಶ್ವಕಪ್ ಟೂರ್ನಿಯಿಂದ ಹೊರಗುಳಿದಿದರು. ಇವರಿಗೆ ಗಾಯ ಆಗಿದ್ದು ಯಾಕೆ ಎಂದು ತಿಳಿದುಬಂದರೆ, ಎಂಥಹ ವಿಪರ್ಯಾಸ ಎನ್ನಿಸುತ್ತದೆ. ಏಷ್ಯಾಕಪ್ ಟೂರ್ನಿ ನಡೆದದ್ದು ಯುಎಇ ನಲ್ಲಿ, ಅಲ್ಲಿನ ಕಡಲ ಕಿನಾರೆಯಲ್ಲಿ ವಾಟರ್ ಸ್ಪೋರ್ಟ್ಸ್ ಆಡಲು ಹೋಗಿ ಕಾಲಿಗೆ ಗಾಯ ಮಾಡಿಕೊಂಡರು ರವೀಂದ್ರ ಜಡೇಜಾ, ಇದರಿಂದ ಶಸ್ತ್ರಚಿಕಿತ್ಸೆಗೆ ಒಳಗಾಗಿ ವಿಶ್ರಾಂತಿ ಪಡೆಯಬೇಕಾಯಿತು. ಹಾಗು ವಿಶ್ವಕಪ್ ಇಂದಲೂ ಹೊರಗುಳಿಯುವ ಹಾಗಾಯಿತು.
ಡೆವೊನ್ ಕಾನ್ವೇ :- ನ್ಯೂಜಿಲೆಂಡ್ ತಂಡದ ಆಟಗಾರ ಡೆವೊನ್ ಕಾನ್ವೇ ಅವರು ಕಳೆದ ವರ್ಷ ಯುಎಇ ನಲ್ಲಿ ಬೆರಳನ್ನು ಮುರಿದುಕೊಂಡರು. ಅಸ್ಟ್ರೇಲಿಯಾ ವಿರುದ್ಧ ನಡೆದ ಮ್ಯಾಚ್ ನಲ್ಲಿ ಔಟ್ ಆದಾಗ ನಿರಾಶೆಯಲ್ಲಿ ಜೋರಾಗಿ ಬ್ಯಾಟ್ ಗೆ ಗುದ್ದಿದ ಕಾರಣ ಕೈ ಬೆರಳಿನ ಮೂಳೆ ಮುರಿಯಿತು, ಇದರಿಂದಾಗಿ ಡೆವೊನ್ ಕಾನ್ವೇ ಅವರು ಆಸ್ಟ್ರೇಲಿಯಾ ವಿರುದ್ಧ ಫೈನಲ್ಸ್ ಪಂದ್ಯದಲ್ಲಿ ಆಡುವ ಅವಕಾಶ ಕಳೆದುಕೊಂಡರು. ಜೊತೆಗೆ ಈ ವರ್ಷವೂ ವಿಶ್ವಕಪ್ ಇಂದ ದೂರ ಉಳಿದಿದ್ದಾರೆ.
ಜಾನಿ ಬೈರ್ ಸ್ಟೋವ್ :- ಇವರೊಬ್ಬ ಅದ್ಭುತವಾದ ಆಟಗಾರ, ಇತ್ತೀಚಿನ ದಿನಗಳಲ್ಲಿ ಅದ್ಭುತವಾದ ಫಾರ್ಮ್ ನಲ್ಲಿದ್ದರು. ಇಂಗ್ಲೆಂಡ್ ಪರವಾಗಿ ಹಲವು ಮ್ಯಾಚ್ ವಿನ್ನಿಂಗ್ ಇನ್ನಿಂಗ್ಸ್ ಆಡಿರುವ ಜಾನಿ ಬೈರ್ ಸ್ಟೋವ್ ಅವರು, ವಿಶ್ವಕಪ್ ಪಂದ್ಯಗಳು ಶುರುವಾಗುವ ಕೆಲವು ತಿಂಗಳುಗಳ ಮುಂಚೆ, ಗಾಲ್ಫ್ ಆಡುವಾಗ ತೀವ್ರವಾದ ಗಾಯಕ್ಕೆ ಒಳಗಾಗಿ ಇವರಿಗೆ ಕೆಲವು ತಿಂಗಳುಗಳ ವಿಶ್ರಾಂತಿ ಬೇಕು ಎಂದು ವೈದ್ಯರು ತಿಳಿಸಿದರು. ಹಾಗಾಗಿ ವಿಶ್ವಕಪ್ ಇಂದ ದೂರವಿದ್ದಾರೆ.
ಜೋಫ್ರಾ ಆರ್ಚರ್ :- ಇವರು ಸಹ ಇಂಗ್ಲೆಂಡ್ ತಂಡದ ಅದ್ಭುತವಾದ ವೇಗಿ ಬೌಲರ್ ಗಳಲ್ಲಿ ಒಬ್ಬರು. ಕಳೆದ ವರ್ಷ ವಿಶ್ವಕಪ್ ಶುರುವಾಗುವ ಮೊದಲು ನಡೆದ ಒಂದು ಘಟನೆಯಿಂದ ಕ್ರಿಕೆಟ್ ಇಂದ ಬಹಳ ಸಮಯ ದೂರ ಉಳಿಯುವ ಹಾಗೆ ಆಗಿದೆ. ಕಳೆದ ವರ್ಷ ವಿಶ್ವಕಪ್ ಗೆ ಇವರು ಆಯ್ಕೆಯಾಗಲಿಲ್ಲ, ಅದಾದ ಬಳಿಕ ಮನೆಯಲ್ಲಿ ಫಿಶ್ ಟ್ಯಾಂಕ್ ಕ್ಲೀನ್ ಮಾಡುವಾಗ, ಎಚ್ಚರ ತಪ್ಪಿ ಗಾಯಕ್ಕೆ ಒಳಗಾಗಿದ್ದಾರೆ. ಈ ಗಾಯದಿಂದ ಜೋಫ್ರಾ ಅರ್ಚರ್ ಅವರು ಬಹಳ ಸಮಯ ಕ್ರಿಕೆಟ್ ಇಂದ ಹೊರಗುಳಿಯುವ ಹಾಗೆ ಆಯಿತು.