ಇದ್ದಕ್ಕಿದ್ದ ಹಾಗೆ ಧನುಷ್ ಹಾಗೂ ಐಶ್ವರ್ಯ ವಿಚ್ಚೇದನದ ನಿರ್ಧಾರ ಕೈ ಬಿಡಲು ಕಾರಣ ಏನಂತೆ ಗೊತ್ತೇ??
ಚಿತ್ರರಂಗದಲ್ಲಿ ಲವ್, ಬ್ರೇಕಪ್, ಮದುವೆ, ವಿಚ್ಛೇದನ ಇದೆಲ್ಲವು ಬಹಳ ಕಾಮನ್ ಎನ್ನುವ ಹಾಗೆ ಆಗಿದೆ. ನಟ ನಟಿಯರು ಪ್ರೀತಿಸಿ ಮದುವೆ ಆಗುವುದು, ಕೆಲ ಸಮಯದ ಬಳಿಕ ವಿಚ್ಛೇದನ ಪಡೆಯುವುದು ಅದೆಲ್ಲವೂ ಕಾಮನ್ ಆಗಿದೆ. ಇತ್ತೀಚಿಗೆ ಚಿತ್ರರಂಗದಲ್ಲಿ ನಟ ಆಮೀರ್ ಖಾನ್ ಪತ್ನಿಯಿಂದ ವಿಚ್ಛೇದನ ಪಡೆದರು, ನಟಿ ಸಮಂತಾ ಮತ್ತು ನಟ ನಾಗಚೈತನ್ಯ ದಂಪತಿ ವಿಚ್ಛೇದನ ಪಡೆದರು, ಈ ವರ್ಷದ ಆರಂಭದಲ್ಲಿ ನಟ ಧನುಷ್ ಅವರು ಸಹ ಪತ್ನಿ ಐಶ್ವರ್ಯ ಅವರಿಂದ ವಿಚ್ಛೇದನ ಪಡೆಯುತ್ತಿರುವ ವಿಚಾರ ತಿಳಿಸಿದರು, ಇವರಿಬ್ಬರು ಬೇರೆ ಜೋಡಿಗಳ ಹಾಗೆಯೇ ಎಂದು ಎಲ್ಲರೂ ಅಂದುಕೊಂಡಿರುವಾಗ ಧನುಷ್ ಐಶ್ವರ್ಯ ಜೋಡಿ ಬಗ್ಗೆ ಬೇರೆಯದೇ ಮಾತು ಕೇಳಿಬರುತ್ತಿದೆ.
ಐಶ್ವರ್ಯ ಅವರು ವಿಶ್ವದ ಅಪ್ರತಿಮ ನಟರಲ್ಲಿ ಒಬ್ಬರಾದ ಸೂಪರ್ ಸ್ಟಾರ್ ರಜನಿಕಾಂತ್ ಅವರ ಮೊದಲ ಮಗಳು, ಧನುಷ್ ಅವರನ್ನು ಪ್ರೀತಿಸಿ 2004ರಲ್ಲಿ ಇಬ್ಬರು ಕುಟುಂಬದವರ ಸಮ್ಮುಖದಲ್ಲಿ ಮದುವೆಯಾದರು. ಈ ಜೋಡಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ, ಯಾತ್ರಾ ಮತ್ತು ಲಿಂಗ. 18 ವರ್ಷಗಳ ಸುಂದರವಾದ ದಾಂಪತ್ಯ ಜೀವನ ನಡೆಸಿದ ಈ ಜೋಡಿ, ಈ ವರ್ಷ ಜನವರಿ ತಿಂಗಳಿನಲ್ಲಿ ತಾವಿಬ್ಬರು ಬೇರೆ ಆಗುತ್ತಿರುವ ವಿಚಾರ ಬಹಿರಂಗ ಪಡಿಸಿದರು, ಈ ಸುದ್ದಿ ತಿಳಿದು ಇವರಿಬ್ಬರ ಅಭಿಮಾನಿಗಳು ಸಹ ಬಹಳ ಶಾಕ್ ಆಗಿದ್ದರು. ನಂತರದ ದಿನಗಳಲ್ಲಿ ಇವರಿಬ್ಬರನ್ನು ಒಂದು ಮಾಡಲು ಕುಟುಂಬ ಪ್ರಯತ್ನ ಪಡುತ್ತಿದೆ ಎಂದು ಮಾಹಿತಿ ಸಿಕ್ಕಿತು, ಆದರೆ ಅದರ ಕುರಿತಾಗಿ ಯಾವುದೇ ಒಳ್ಳೆಯ ವಿಚಾರ ತಿಳಿದುಬಂದಿರಲಿಲ್ಲ.
ಆದರೆ ಈಗ ನಟ ಧನುಷ್ ಮತ್ತು ಅವರ ಪತ್ನಿ ಐಶ್ವರ್ಯ ಇಬ್ಬರು ಸಹ ಮಗನ ಶಾಲೆಯಲ್ಲಿ ನಡೆದ ಒಂದು ಸಮಾರಂಭದಲ್ಲಿ ಪಾಲ್ಗೊಂಡಿದ್ದಾರೆ ಎಂದು ತಿಳಿದುಬಂದಿದೆ. ಶಾಲೆಯಲ್ಲಿರುವ ಧನುಷ್ ಐಶ್ವರ್ಯ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಇದು ಈ ಜೋಡಿ ಮತ್ತೆ ಒಂದಾಗುವ ಮುನ್ಸೂಚನೆಯೇ ಎಂದು ನೆಟ್ಟಿಗರು ಹೇಳುತ್ತಿದ್ದು, ಧನುಷ್ ಐಶ್ವರ್ಯಾ ಮತ್ತೆ ಒಂದಾದರೆ ಚೆನ್ನಾಗಿರುತ್ತದೆ ಎನ್ನುವ ಅಭಿಪ್ರಾಯ ವ್ಯಕ್ತವಾಗಿದೆ. ಸಮಂತಾ ಚೈತನ್ಯ ಥರ ಆಗಬೇಡಿ, ನೀವಿಬ್ಬರೂ ಒಂದಾಗಿ, ಇವರಿಬ್ಬರು ಮತ್ತೆ ಒಂದಾದರೆ ಎಷ್ಟು ಚೆನ್ನಾಗಿರುತ್ತದೆ ಎನ್ನುತ್ತಿದ್ದಾರೆ ಅಭಿಮಾನಿಗಳು..