ಎಲ್ಲರ ರೆಕಾರ್ಡ್ ಗಳನ್ನು ಕುಟ್ಟಿ ಪುಡಿ ಪುಡಿ ಮಾಡಿದ ಕೊಹ್ಲಿ: ಒಂದು ಇನ್ಸ್ಟಾಗ್ರಾಮ್ ಪೋಸ್ಟ್ ಗೆ ಕೊಹ್ಲಿ ಈಗ ಪಡೆಯುವುದು ಎಷ್ಟು ಕೋಟಿ ಗೊತ್ತೇ??
ವಿರಾಟ್ ಕೋಹ್ಲಿ ಅವರು ಕಿಂಗ್ ಕೋಹ್ಲಿ, ರನ್ ಮಷಿನ್ ಎಂದೇ ಹೆಸರು ಪಡೆದಿದ್ದಾರೆ. ಮೈದಾನದಲ್ಲಿ ಹಲವು ವಿಶ್ವದಾಖಲೆಗಳು ಮತ್ತು ಹೆಸರು ಮಾಡಿ, ವಿಶ್ವದ ಶ್ರೇಷ್ಠ ಬ್ಯಾಟ್ಸ್ಮನ್ ಗಳಲ್ಲಿ ಒಬ್ಬರು ಎಂದು ಕೋಹ್ಲಿ ಅವರು ಹೆಸರು ಪಡೆದಿದ್ದು, ಮೈದಾನದಿಂದ ಹೊರಗೆ ಕೂಡ ಇಂಥದ್ದೇ ಅನೇಕ ದಾಖಲೆಗಳನ್ನು ಮಾಡುತ್ತಿದ್ದಾರೆ ಕೋಹ್ಲಿ. ಇವರಿಗೆ ಇಡೀ ಪ್ರಪಂಚದಲ್ಲಿ ಎಷ್ಟು ದೊಡ್ಡ ಅಭಿಮಾನಿ ಬಳಗ ಇದೆ ಎಂದು ಎಲ್ಲರಿಗು ಗೊತ್ತಿದೆ. ವಿಶ್ವಾದ್ಯಂತ ಅತಿ ದೊಡ್ಡ ಅಭಿಮಾನಿ ಬಳಗ ಹೊಂದಿರುವ ಸೆಲೆಬ್ರಿಟಿಗಳಲ್ಲಿ ವಿರಾಟ್ ಕೋಹ್ಲಿ ಟಾಪ್ 20 ಒಳಗೆ ಬರುತ್ತಾರೆ..
ಇವರಿಗೆ ಟ್ವಿಟರ್ ನಲ್ಲಿ 50 ಮಿಲಿಯನ್ ಫಾಲೋವರ್ಸ್, ಇನ್ಸ್ಟಾಗ್ರಾಮ್ ನಲ್ಲಿ 219 ಮಿಲಿಯನ್ ಫಾಲೋವರ್ಸ್ ಮತ್ತು ಫೇಸ್ ಬುಕ್ ನಲ್ಲಿ 49 ಮಿಲಿಯನ್ ಪೇಜ್ ಲೈಕ್ಸ್ ಹೊಂದಿದ್ದಾರೆ ಕೋಹ್ಲಿ. ಇದರಿಂದಾಗಿ ಕೋಹ್ಲಿ ಅವರು ಸಾಕಷ್ಟು ಲಾಭ ಗಳಿಸುತ್ತಿದ್ದಾರೆ ಎನ್ನುವುದು ತಿಳಿದುಕೊಳ್ಳಬೇಕಾದ ವಿಚಾರ. ಇನ್ಸ್ಟಾಗ್ರಾಮ್ ನಲ್ಲಿ ಒಂದು ಪೋಸ್ಟ್ ಮಾಡಲು ಕೋಹ್ಲಿ ಅವರು ಬರೊಬ್ಬರಿ 8 ಕೋಟಿ ಚಾರ್ಜ್ ಮಾಡುತ್ತಾರೆ. ಅತಿ ಹೆಚ್ಚು ಫಾಲೋವರ್ಸಾ ಹೊಂದಿರುವ ಮತ್ತು ಅತಿಹೆಚ್ಚು ಚಾರ್ಜ್ ಮಾಡುವ ಪ್ರಪಂಚದ 4ನೇ ವ್ಯಕ್ತಿ ಆಗಿದ್ದಾರೆ ಕೋಹ್ಲಿ. ಮೊದಲ ಸ್ಥಾನದಲ್ಲಿ 400 ಮಿಲಿಯನ್ ಫಾಲೋವರ್ಸ್ ಇರುವ ಫುಟ್ ಬಾಲ್ ಆಟಗಾರ ಕ್ರಿಸ್ಟಿಯಾನೋ ರೋನಾಲ್ಡೊ ಇದ್ದಾರೆ, ಇವರು ಒಂದು ಪೋಸ್ಟ್ ಗೆ 19 ಕೋಟಿ ಚಾರ್ಜ್ ಮಾಡುತ್ತಾರೆ.
ನಂತರ 3ನೇ ಸ್ಥಾನದಲ್ಲಿ ಲಿಯೊನೆಲ್ ಮೆಸ್ಸಿ ಅವರಿದ್ದು, ಇವರು ಒಂದು ಪೋಸ್ಟ್ ಗೆ 14 ಕೋಟಿ ಚಾರ್ಜ್ ಮಾಡುತ್ತಾರೆ. ಈ ಲಿಸ್ಟ್ ನ ಟಾಪ್ 20 ಯಲ್ಲಿರುವ ಏಷಿಯಾದ ಒಬ್ಬರೇ ವ್ಯಕ್ತಿ ವಿರಾಟ್ ಕೋಹ್ಲಿ ಅವರು, 27ನೇ ಸ್ಥಾನದಲ್ಲಿ ಬಾಲಿವುಡ್ ನಟಿ ಪ್ರಿಯಾಂಕ ಚೋಪ್ರಾ ಇದ್ದಾರೆ. ಈ ಲಿಸ್ಟ್ ನಲ್ಲಿರುವ ಒಬ್ಬರೇ ಕ್ರಿಕೆಟಿಗ ವಿರಾಟ್ ಕೋಹ್ಲಿ. ಒಂದು ಪೋಸ್ಟ್ ಗೆ ಕೋಹ್ಲಿ ಇಷ್ಟೆಲ್ಲಾ ಚಾರ್ಜ್ ಮಾಡುತ್ತಾರಾ ಎಂದು ಕೆಲವರು ಆಶ್ಚರ್ಯ ಪಟ್ಟರೆ, ಇನ್ನು ಕೆಲವರು ಕಿಂಗ್ ಕೋಹ್ಲಿ ಹೆಸರಿನಲ್ಲಿ ಮತ್ತೊಂದು ದಾಖಲೆ ಎಂದು ಸಂತೋಷಪಡುತ್ತಿದ್ದಾರೆ. ಒಟ್ಟಿನಲ್ಲಿ ಕಿಂಗ್ ಕೋಹ್ಲಿ ಮೈದಾನದಿಂದ ಹೊರಗಡೆ ಸಹ ಇಂಥ ದಾಖಲೆ ಬರೆದಿರುವುದು ಹೆಮ್ಮೆಯ ವಿಚಾರವೇ ಆಗಿದೆ.