ಕಾಂತಾರ ಸಿನಿಮಾ ಬಗ್ಗೆ ಮಾತನಾಡಿ, ದೈವಕ್ಕೆ ಅವಮಾನ ಮಾಡದಿರಲು ರಿಷಬ್ ಶೆಟ್ಟಿ ಮನವಿ. ಮಾಡಿದ ಮನವಿ ಏನು ಗೊತ್ತೇ?

31

Get real time updates directly on you device, subscribe now.

ಕಾಂತಾರ ಸಿನಿಮಾ ಬಗ್ಗೆ ಈಗ ಎಲ್ಲೆಡೆ ಚರ್ಚೆ ಆಗುತ್ತಿದೆ, ವಿಶ್ವಮಟ್ಟದಲ್ಲಿ ಮತ್ತೊಂದು ಕನ್ನಡ ಸಿನಿಮಾ ಸದ್ದು ಮಾಡುತ್ತಿದೆ. ಕೆಜಿಎಫ್ ಸಿನಿಮಾ ನಿರ್ಮಾಣ ಮಾಡಿ, ಹೊಂಬಾಳೆ ಸಂಸ್ಥೆ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತ್ತು, ಇದೀಗ ಕಾಂತಾರ ಸಿನಿಮಾವನ್ನು ನಿರ್ಮಾಣ ಮಾಡಿರುವುದು ಅವರ ಕೀರ್ತಿಯನ್ನು ಮತ್ತಷ್ಟು ಹೆಚ್ಚಿಸಿದೆ, ಜೊತೆಗೆ ರಿಷಬ್ ಶೆಟ್ಟಿ ಅವರಿಗೆ ದೊಡ್ಡ ಮಟ್ಟದಲ್ಲಿ ಹೆಸರು ತಂದುಕೊಟ್ಟಿದೆ. ಕಾಂತಾರ ಸಿನಿಮಾ ರಿಷಬ್ ಶೆಟ್ಟಿ ಅವರ ಇಡೀ ಕೆರಿಯರ್ ನ ದೊಡ್ಡ ಸಿನಿಮಾ ಆಗಿದೆ. ಈ ಸಿನಿಮಾ ಮೂಲಕ ರಿಷಬ್ ಅವರು ತಾವು ಎಂಥಹ ಅದ್ಭುತವಾದ ಕಲಾವಿದ ಎನ್ನುವುದನ್ನು ಸಾಬೀತು ಮಾಡಿದ್ದಾರೆ.

ರಿಷಬ್ ಅವರು ಇಂತಹ ಒಂದು ಪಾತ್ರದಲ್ಲಿ ಈ ಹಿಂದಿನ ಯಾವುದೇ ಸಿನಿಮಾಗಳಲ್ಲೂ ಕಾಣಿಸಿಕೊಂಡಿಲ್ಲ. ಮಂಗಳೂರಿನ ಸಂಸ್ಕೃತಿ, ಆಚರಣೆ, ಸಂಪ್ರದಾಯ ಎಲ್ಲವನ್ನು ಕಾಂತಾರ ಸಿನಿಮಾದಲ್ಲಿ ಅಚ್ಚುಕಟ್ಟಾಗಿ ತೋರಿಸಿದ್ದಾರೆ, ಈ ಸಿನಿಮಾದಲ್ಲಿ ದೈವ ನರ್ತನ ಮಾಡಿದ್ದಾರೆ, ಸಿನಿಮಾದ ಕೊನೆಯ 20 ನಿಮಿಷ ನೋಡಿ ರಿಷಬ್ ಶೆಟ್ಟಿ ಅವರ ಅಭಿನಯಕ್ಕೆ ಫಿದಾ ಆಗದವರಿಲ್ಲ. ಎಲ್ಲರೂ ರಿಷಬ್ ಅವರ ಅಭಿನಯದ ಬಗ್ಗೆ ಮಾತನಾಡಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಮೂರನೇ ದಿನ ಕೂಡ ಕಾಂತಾರ ಸಿನಿಮಾ ಭರ್ಜರಿಯಾಗಿ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ. ಈ ಸಿನಿಮಾ ನೋಡಿ ಹೊರಬಂದವರ ತಲೆಯಲ್ಲಿ ಓ ಎನ್ನುವ ಪದ ಉಳಿದುಕೊಳ್ಳುವುದು ಖಂಡಿತ. ಆ ಪದ ದೈವದ ಭಾಷೆ ಆಗಿದ್ದು, ಜನರು ಸಿನಿಮಾ ನೋಡಿದ ಬಳಿಕ ಈ ಪದ ಬಳಸುತ್ತಿದ್ದಾರೆ.

ರಿಷಬ್ ಶೆಟ್ಟಿ ಅವರು ಇದರ ಬಗ್ಗೆ ಮನವಿ ಮಾಡಿದ್ದು ಆ ಪದಕ್ಕೆ ತನ್ನದೇ ಆದ ಮಹತ್ವ ಇದೆ, ಹೇಗೆಂದರೆ ಹಾಗೆ, ಆ ಪದವನ್ನು ಬಳಸಬಾರದು ಎಂದಿದ್ದಾರೆ. “ದೈವ ಆರಾಧನೆ ಎನ್ನುವುದು ನಮ್ಮ ಸಂಸ್ಕೃತಿ, ಆಚರಣೆ ಸಂಪ್ರದಾಯ. ಇದು ನಮ್ಮ ಮಣ್ಣಿನ ಸೊಗಡಿನ ಕಥೆ, ಈಗಿನ ಮಕ್ಕಳಿಗೆ ಈ ಕಥೆ ತಲುಪಬೇಕು. ನಿಮ್ಮ ಮಕ್ಕಳ ಜೊತೆಗೆ ಸಿನಿಮಾಗೆ ಬನ್ನಿ, ಇದು ಬರೀ ಸೌತ್ ಸಿನಿಮಾ ಮಾತ್ರ ಅಲ್ಲ, ಎಲ್ಲರನ್ನು ಈ ಸಿನಿಮಾ ತಲುಪಬೇಕು. ಸಿನಿಮಾ ನೋಡಿದ ನಂತರ ಓ ಎನ್ನುವ ಪದವನ್ನು ಎಲ್ಲರೂ ಬೇರೆ ರೀತಿಯಲ್ಲಿ ಬಳಸುತ್ತಿದ್ದಾರೆ ಸುಮ್ ಸುಮ್ನೆ ಆ ಪದ ಬಳಸಬಾರದು, ಈ ರೀತಿ ಮಾಡಬೇಡಿ. ಮಾಮೂಲಿ ಸಿನಿಮಾ ಡೈಲಾಗ್ ಹಾಗಲ್ಲ ಅದು, ಆ ಪದಕ್ಕೆ ಒಂದು ಬೆಲೆ ಇದೆ…” ಎಂದು ಇನ್ಸ್ಟಾಗ್ರಾಮ್ ಲೈವ್ ನಲ್ಲಿ ಹೇಳಿದ್ದಾರೆ ರಿಷಬ್ ಶೆಟ್ಟಿ ಅವರು.

Get real time updates directly on you device, subscribe now.