ನನಗೆ ಅಮೃತ ಎಂದು ಹೇಳಿ ವಿಷ ಕೊಟ್ಟರು ಕುಡಿದು ಬಿಡುತ್ತೇನೆ ಎಂದ ಮೇಘ ಶೆಟ್ಟಿ. ಹೀಗೆ ಹೇಳಿದ್ದು ಯಾಕೆ ಗೊತ್ತೇ??
ಜೊತೆ ಜೊತೆಯಲಿ ಧಾರವಾಹಿ ಮೂಲಕ ಕಿರುತೆರೆ ಲೋಕದಲ್ಲಿ ತಮ್ಮ ಜರ್ನಿ ಶುರುಮಾಡಿದ ಮೇಘಾ ಶೆಟ್ಟಿ ಅವರು ಈಗ ಧಾರವಾಹಿ ಜೊತೆಗೆ ಸಿನಿಮಾದಲ್ಲೂ ಬ್ಯುಸಿ ಆಗಿದ್ದಾರೆ. ಬ್ಯಾಕ್ ಟು ಬ್ಯಾಕ್ ಸಿನಿಮಾ ಅವಕಾಶಗಳನ್ನು ಪಡೆದುಕೊಳ್ಳುತ್ತಿದ್ದಾರೆ. ಮೇಘಾ ಶೆಟ್ಟಿ ಅವರು ಗಣೇಶ್ ಅವರೊಡನೇ ತ್ರಿಬಲ್ ರೈಡಿಂಗ್, ಡಾರ್ಲಿಂಗ್ ಕೃಷ್ಣ ಅವರೊಡನೇ ದಿಲ್ ಪಸಂದ್ ಹಾಗು ಮತ್ತೊಂದು ಪ್ಯಾನ್ ಇಂಡಿಯಾ ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ಇದೀಗ ಡಾರ್ಲಿಂಗ್ ಕೃಷ್ಣ ಅವರು ಅಭಿನಯಿಸಿರುವ ದಿಲ್ ಪಸಂದ್ ಸಿನಿಮಾದ ಟೀಸರ್ ಬಿಡುಗಡೆ ಆಗಿದ್ದು, ಈ ಸಿನಿಮಾದಲ್ಲಿ ಮೇಘಾ ಶೆಟ್ಟಿ ಮತ್ತು ನಿಷ್ವಿಕಾ ನಾಯ್ಡು ಇಬ್ಬರು ನಾಯಕಿಯರಿದ್ದಾರೆ.
ಮೇಘಾ ಶೆಟ್ಟಿ ಅವರು ಈ ಸಿನಿಮಾದಲ್ಲಿ ಎರಡು ರೀತಿಯ ಶೇಡ್ ಇರುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರಂತೆ. ಟೀಸರ್ ಬಿಡುಗಡೆಯ ಪ್ರೆಸ್ ಮೀಟ್ ನಲ್ಲಿ ಮಾತನಾಡಿದ ಮೇಘಾ ಶೆಟ್ಟಿ ಅವರು ಕೆಲವು ವಿಚಾರಗಳನ್ನು ರಿವೀಲ್ ಮಾಡಿದ್ದಾರೆ. “ಈ ಸಿನಿಮಾದಲ್ಲಿ ನನ್ನ ಪಾತ್ರ ತುಂಬಾ ಇನ್ನೊಸೆಂಟ್. ಇವರು ನನ್ನ ಹತ್ತಿರ ಬಂದು ವಿಷ ಕೊಟ್ಟು, ಇದು ಅಮೃತಾ ಇದನ್ನ ಕುಡಿ ಎಂದು ಹೇಳಿದ್ರೆ ಕುಡಿದು ಬಿಡುತ್ತೇನೆ, ಅಷ್ಟು ಇನ್ನೊಸೆಂಟ್ ಪಾತ್ರ ನನ್ನದು. ನೀವು ಸಿನಿಮಾ ಎಂಜಾಯ್ ಮಾಡುವ ಹಾಗೆ ನಾವು ಕೂಡ ಎಂಜಾಯ್ ಮಾಡುತ್ತಾ ಸಿನಿಮಾ ಚಿತ್ರೀಕರಣ ಮಾಡಿದ್ವಿ..ಇನ್ನೊಸೆಂಟ್ ಪಾತ್ರ ಆಗಿರುವುದರಿಂದ ಕೆಲವು ಸಂದರ್ಭಗಳು ಸ್ವಲ್ಪ ಕಷ್ಟ ಆಯ್ತು, ಅದು ಯಾವ ಸಂದರ್ಭ ಅಂತ ಈಗ ನಾನು ಹೇಳೋದಿಲ್ಲ, ಸಿನಿಮಾ ನೋಡಿದ ಮೇಲೆ ನಿಮಗೆ ಅರ್ಥವಾಗುತ್ತೆ.
ಸಿನಿಮಾದಲ್ಲಿ ನನ್ನ ಪಾತ್ರಕ್ಕೆ ಎರಡು ಶೇಡ್ ಇದೆ, ಒಂದು ತುಂಬಾ ಇನ್ನೊಸೆಂಟ್ ಇನ್ನೊಂದು ಯಾವ ಥರ ಅಂತ ನಾನು ರಿವೀಲ್ ಮಾಡುವ ಹಾಗಿಲ್ಲ, ಅದು ವೈಲೆಂಟ್ ಎಂದು ಹೇಳಬಹುದು. ಆದರೆ ಬೇರೆ ರೀತಿಯೇ ಇದೆ. ಟೀಸರ್ ನಲ್ಲಿ ಎರಡು ವಿಭಿನ್ನ ರೀತಿಯನ್ನು ನೋಡಬಹುದು. ಒಂದು ಮಾಡರ್ನ್ ಆದರೆ ಇನ್ನೊಂದು ಟ್ರಡಿಷನಲ್..” ಎಂದಿದ್ದಾರೆ ಮೇಘಾ ಶೆಟ್ಟಿ. ಇದೊಂದು ಅಪ್ಪಟ ತಮಾಷೆಯ ಭರಿತ ಲವ್ ಸ್ಟೋರಿ ಆಗಿದ್ದು, ಇಬ್ಬರು ನಾಯಕಿಯರಲ್ಲಿ ಡಾರ್ಲಿಂಗ್ ಕೃಷ್ಣ ಅವರ ದಿಲ್ ಪಸಂದ್ ಯಾರು ಎನ್ನುವುದೇ ಸಿನಿಮಾ ಕಥೆ, ನವೆಂಬರ್ 11ರಂದು ದಿಲ್ ಪಸಂದ್ ಸಿನಿಮಾ ಬಿಡುಗಡೆ ಆಗಲಿದೆ.