ಯುವಕರು ಪ್ರೀತಿ ಸಿಗದೇ ಸಿಂಗಲ್ ಆಗಿರಲು ಕಾರಣವೇನು ಗೊತ್ತೇ?? ಅದೊಂದು ಕಾರಣದಿಂದ ಎಲ್ಲರೂ ಸಿಂಗಲ್ ಹೇ.
ಜೀವನದಲ್ಲಿ ಸಂಗಾತಿ ಬಹಳ ಮುಖ್ಯ. ಪ್ರತಿಯೊಬ್ಬರ ಜೀವನದಲ್ಲಿ ಭಾವನೆ ಹಂಚಿಕೊಳ್ಳಲು ಒಬ್ಬ ಸಂಗಾತಿ ಇರಿಬೇಕು ಎಂದು ಬಯಸುತ್ತಾರೆ. ಆದರೆ ಹಲವು ಬಾರಿ, ಎಲ್ಲರಿಗು ನಿಜವಾದ ಪ್ರೀತಿ ಸಿಗುವುದಿಲ್ಲ. ಅಂಥವರು ಒಂಟಿಯಾಗಿಯೇ ಜೀವನ ಕಳೆಯುತ್ತಾರೆ. ಹುಡುಗರು ಹುಡುಗಿಯರು ಈ ರೀತಿ ಒಂಟಿಯಾಗಿರುವುದು ಹೆಚ್ಚು, ಆದರೆ ಒಂಟಿಯಾಗಿರುವವರಲ್ಲಿ ಹುಡುಗರ ಸಂಖ್ಯೆ ಹೆಚ್ಚು ಎಂದು ಮಾಹಿತಿ ಸಿಕ್ಕಿದೆ. ತಮಗೊಬ್ಬ ಸಂಗಾತಿ ಬೇಕು ಎಂದು ಹುಡುಗರು ಬಯಸಿದರು ಕೂಡ, ಅದನ್ನು ವ್ಯಕ್ತಪಡಿಸದೆ ಒಂಟಿಯಾಗಿಯೇ ಇದ್ದು ಬಿಡುತ್ತಾರೆ, ಕೆಲವರಿಗೆ ಹಿಂದಿನ ಜೀವನದಲ್ಲಿ ನಡೆದ ಅನುಭವಗಳಿಂದ ತಾವು ಒಂಟಿಯಾಗಿದ್ದರೆ ಸಂತೋಷವಾಗಿರಬಹುದು ಎಂದುಕೊಳ್ಳುತ್ತಾರೆ. ಇನ್ನು ಕೆಲವರಿಗೆ ಬೇರೆಯದೇ ಕಾರಣ ಇರಬಹುದು. ಹಾಗಿದ್ದರೆ ಹುಡುಗರು ಯಾವ ಕಾರಣದಿಂದ ಒಂಟಿಯಾಗಿರುತ್ತಾರೆ ಎಂದು ತಿಳಿಸುತ್ತೇವೆ ನೋಡಿ..
ಹಿಂದಿನ ರಿಲೇಶನ್ಷಿಪ್ ನ ಕೆಟ್ಟ ಅನುಭವಗಳು :- ಹಿಂದಿನ ಸಂಬಂಧದಲ್ಲಿ ಆದ ನೋವು, ದ್ರೋಹ, ಪುರುಷರ ಮನಸ್ಸಿಗೆ ಗಾಯ ಮಾಡಿಬಿಡುತ್ತದೆ. ಎಷ್ಟೇ ಸ್ಟ್ರಾಂಗ್ ಆಗಿದ್ದರು ಸಹ, ಹಿಂದಿನ ಸಂಬಂಧದಿಂದ ಆಗಿರುವ ನೋವುಗಳಿಂದ ಹೊರಬರಲು ಸಾಧ್ಯವಾಗದೆ ಒಂಟಿಯಾಗಿಯೇ ಇದ್ದುಬಿಡಬೇಕು ಎಂದು ಅಂದುಕೊಳ್ಳುತ್ತಾರೆ. ಕೆಟ್ಟ ಅನುಭವದಿಂದ ಹೊರಬರಲು ಕಷ್ಟಪಡುತ್ತಾರೆ.
ಸ್ವಾಭಿಮಾನದ ಕೊರತೆ :- ಕೆಲವು ಹುಡುವರಿಗೆ ಸ್ವಾಭಿಮಾನದ ಕೊರತೆ ಇರುತ್ತದೆ. ಇದರಿಂದಾಗಿ ಅವರು ಹುಡುಗಿಯರ ಜೊತೆ ಹೆಚ್ಚು ಬೆರೆಯಲು ಆಗುವುದಿಲ್ಲ. ಹುಡುಗಿಯರು ತಮ್ಮನ್ನು ಇಷ್ಟಪಡುತ್ತಾರೋ ಇಲ್ಲವೋ ಎಂದು ಯೋಚಿಸುತ್ತಾರೆ. ಆದರೆ ಹುಡುಗಿಯರು ಸ್ವಾಭಿಮಾನದಿಂದ ಇರುವ ಹುಡುಗರ ಕಡೆಗೆ ಬೇಗ ಆಕರ್ಷಣೆಗೆ ಒಳಗಾಗುತ್ತಾರೆ. ಸ್ವಾಭಿಮಾನದ ಕೊರತೆ ಇರುವ ಹುಡುಗರು ಒಂಟಿಯಾಗಿ ಉಳಿಯುವುದು ಹೆಚ್ಚು.
ಹೆಚ್ಚು ನಿರೀಕ್ಷೆ ಮತ್ತು ಮೆಚ್ಚುಗೆ ಹೊಂದಿರುವ ವ್ಯಕ್ತಿ :- ಕೆಲವು ಪುರುಷರು ತಮ್ಮ ಸಂಗಾತಿಗಳ ಬಗ್ಗೆ ಹೆಚ್ಚು ನಿರೀಕ್ಷೆ ಇಟ್ಟುಕೊಂಡಿರುತ್ತಾರೆ, ಇಂಥದ್ದೇ ಗುಣ ಸ್ವಭಾವ ಇರಬೇಕು ಎಂದು ಬಯಸುತ್ತಾರೆ. ಮದುವೆಯ ವಿಚಾರದಲ್ಲಿ ಹೆಚ್ಚು ಆಸೆ ಇಟ್ಟುಕೊಳ್ಳಬಾರದು, ಆಗ ಸಿಗುವ ಸಂಗಾತಿಯ ಜೊತೆಗೆ ಸಂತೋಷವಾಗಿ ಇರಲು ಆಗುವುದಿಲ್ಲ. ಇದರಿಂದ ಒಂಟಿಯಾಗಿ ಇರಬೇಕಾಗುತ್ತದೆ.
ನಾಚಿಕೆ ಸ್ವಭಾವ :- ಹೆಚ್ಚಾಗಿ ನಾಚಿಕೆ ಮತ್ತು ಮುಜುಗರದ ಸ್ವಭಾವ ಇರುವ ಹುಡುಗರು ಹುಡುಗಿಯರ ಜೊತೆಗೆ ಹೆಚ್ಚು ಬೆರೆಯುವುದಿಲ್ಲ. ಬೆರೆಯಲು ಚೆನ್ನಾಗಿ ಮಾತನಾಡಲು ಕಷ್ಟಪಡುತ್ತಾರೆ. ಇದರಿಂದ ಒಂಟಿಯಾಗಿರುವ ಹಾಗೆ ಆಗಬಹುದು.
ಕಳಪೆ ಫ್ಲರ್ಟಿಂಗ್ ಕ್ವಾಲಿಟಿ :-ಹುಡುಗಿಯರ ಜೊತೆಗೆ ಚೆನ್ನಾಗಿ ಆಕರ್ಷಕವಾಫಿ ಫ್ಲರ್ಟ್ ಮಾಡಲು ಬರದೆ ಇರುವ ವ್ಯಕ್ತಿ ಸಹ ಒಂಟಿಯಾಗಿಯೇ ಇರುವ ಹಾಗೆ ಆಗುತ್ತದೆ. ಮಹಿಳೆಯರನ್ನು ತಮ್ಮ ಕಡೆಗೆ ಹೇಗೆ ಆಕರ್ಷಿತರಾಗುವ ಹಾಗೆ ಮಾಡಿಕೊಳ್ಳಬೇಕು ಎಂದು ಇವರಿಗೆ ಗೊತ್ತಾಗುವುದಿಲ್ಲ. ಇದರಿಂದಾಗಿ ಮಹಿಳೆಯರಿಗೆ ಇವರ ಮೇಲೆ ಆಸಕ್ತಿ ಬೆಳೆಯದೆ ಇರಬಹುದು.
ಸ್ವಯಂ ಕಾಳಜಿ ವಹಿಸದೆ ಇರುವುದು :- ಹುಡುಗರು ತಮ್ಮ ಬಗ್ಗೆ, ತಮ್ಮ ಲುಕ್ಸ್ ಬಗ್ಗೆ ಕಾಳಜಿ ವಹಿಸುವವರು ಮಹಿಳೆಯರಿಗೆ ಇಷ್ಟವಾಗುತ್ತಾರೆ. ಏಕೆಂದರೆ ಮಹಿಳೆಯರು ಸಹ ತಮ್ಮ ಲುಕ್ಸ್ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತಾರೆ. ಹಾಗಾಗಿ ತಮ್ಮ ಬಗ್ಗೆ ತಾವು ಕಾಳಜಿ ವಹಿಸದೆ ಇರುವ ಹುಡುಗರು ಹುಡುಗಿಯರಿಗೆ ಇಷ್ಟ ಆಗುವುದಿಲ್ಲ.