ಬುಮ್ರಾ ಗೆ ದೇಶಕ್ಕಿಂತ ಹಣ ಮುಕ್ಯವಾಯಿತೇ?? ಐಪಿಎಲ್ ಹಾಗೂ ಭಾರತ ತಂಡಕ್ಕೆ ಹೋಲಿಕೆ ಮಾಡಿದರೆ ತಿಳಿದುಬರುತ್ತಿರುವುದೇನು ಗೊತ್ತೇ??

15

Get real time updates directly on you device, subscribe now.

ಭಾರತ ತಂಡದ ವೇಗಿ, ಯಾರ್ಕರ್ ಕಿಂಗ್ ಜಸ್ಪ್ರೀತ್ ಬುಮ್ರ ಅವರು ವಿಶ್ವಕಪ್ ಪಂದ್ಯಗಳಲ್ಲಿ ಆಡುವುದಿಲ್ಲ ಎನ್ನುವ ಮಾಹಿತಿ ಈಗ ಅಧಿಕೃತವಾಗಿ ತಿಳಿದುಬಂದಿದೆ. ಇವರ ಬದಲಾಗಿ ಆಡುವ ಆಟಗಾರ ಯಾರು ಎನ್ನುವ ಚರ್ಚೆ ಸಹ ಶುರುವಾಗಿದೆ. ಬ್ಯಾಕ್ ಸ್ಟ್ರೆಸ್ ಇಂಜುರಿ ಇಂದ ಬಳಲುತ್ತಿದ್ದ ಜಸ್ಪ್ರೀತ್ ಬುಮ್ರ ಏಷ್ಯಾಕಪ್ ಟೂರ್ನಿಯಿಂದ ಹೊರಗುಳಿದಿದ್ದರು, ಇದರಲ್ಲಿ ಭಾರತ ತಂಡ ಸಹ ಗೆಲ್ಲಲಿಲ್ಲ. ಬಳಿಕ ಆಸ್ಟ್ರೇಲಿಯಾ ವಿರುದ್ಧದ 3 ಟಿ20 ಪಂದ್ಯಗಳ ಸೀರೀಸ್ ನ ಎರಡನೇ ಪಂದ್ಯಕ್ಕೆ ಬಂದ ಬುಮ್ರ ಅವರು, ಎರಡು ಪಂದ್ಯಗಳನ್ನಾಡಿದ ಬಳಿಕ ಮತ್ತೆ ಅವರಲ್ಲಿ ಬೆನ್ನು ನೋವು ಕಾಣಿಸಿಕೊಂಡಿತು.

ವೈದ್ಯರು ಹೇಳಿದ ಪ್ರಕಾರ, ಬುಮ್ರ ಅವರಿಗೆ ಶಸ್ತ್ರಚಿಕಿತ್ಸೆ ಅವಶ್ಯಕತೆ ಇಲ್ಲದೆ ಹೋದರು ಸಹ, 4 ರಿಂದ 6 ತಿಂಗಳು ವಿಶ್ರಾಂತಿ ಬೇಕಿದೆ ಎಂದು ತಿಳಿಸಿದ್ದಾರೆ. ಹಾಗಾಗಿ ಬುಮ್ರ ಅವರು ಟಿ20 ವಿಶ್ವಕಪ್ ಸೀರೀಸ್ ನಲ್ಲಿ ಭಾಗವಹಿಸಲು ಆಗುವುದಿಲ್ಲ. ಈ ವಿಚಾರ ಹೊರಬರುತ್ತಿದ್ದ ಹಾಗೆ ಬುಮ್ರ ಅವರ ಬಗ್ಗೆ ಮತ್ತೊಂದು ವಿಚಾರ ಕೇಳಿಬರುತ್ತಿದೆ. 2016ರಿಂದ ಈ ವರ್ಷದವರೆಗೂ ಬುಮ್ರ ಅವರು ಆಡಿರುವ ಐಪಿಎಲ್ ಪಂದ್ಯಗಳನ್ನು ನೋಡಿದರೆ, ಒಟ್ಟಾರೆಯಾಗಿ 59 ಪಂದ್ಯಗಳನ್ನಾಡಿದ್ದಾರೆ, ಒಂದು ಪಂದ್ಯ ಮಾತ್ರ ಆಡದೆ ರೆಸ್ಟ್ ಪಡೆದಿದ್ದರು, ಅದು ಎಂಐ ತಂಡ ಪ್ಲೇ ಆಫ್ಸ್ ಗೆ ಹೋಗುವಾಗ ಒಂದು ಪಂದ್ಯವನ್ನಾಡದೆ ರೆಸ್ಟ್ ಪಡೆದಿದ್ದರು.

ಆದರೆ 2019 ರಿಂದ ಬುಮ್ರ ಅವರು ಭಾರತಕ್ಕಾಗಿ ಎಷ್ಟು ಪಂದ್ಯಗಳನ್ನಾಡಿದ್ದಾರೆ ಎಂದು ನೋಡುವುದಾದರೆ, 2019ರ ನಂತರ ಭಾರತ ತಂಡವು 73 ಟಿ20 ಪಂದ್ಯಗಳನ್ನಾಡಿದ್ದು, ಬುಮ್ರ ಅವರು ಕಾಣಿಸಿಕೊಂಡಿರುವುದು ಕೇವಲ 20 ಪಂದ್ಯಗಳಲ್ಲಿ ಮಾತ್ರ. ಭಾರತದ ಪರವಾಗಿ, ಶೇ.27ರಷ್ಟು ಪಂದ್ಯಗಳಲ್ಲಿ ಮಾತ್ರ ಬುಮ್ರ ಅವರು ಆಡಿದ್ದಾರೆ, ಈ ಅಂಕಿ ಅಂಶ ಈಗ ಹೊಸ ಚರ್ಚೆಗೆ ಕಾರಣವಾಗಿದ್ದು, ಬುಮ್ರ ಅವರಿಗೆ ಹಣವೇ ಮುಖ್ಯವಾಯಿತೆ, ಐಪಿಎಲ್ ಗೆ ಹೆಚ್ಚು ಮಹತ್ವ ನೀಡಿ, ಪಂದ್ಯಗಳನ್ನಾಡಿ, ಭಾರತದ ಪರವಾಗಿ ಪಂದ್ಯವನ್ನಾಡುವ ಸಮಯ ಬಂದಾಗ, ಅನಾರೋಗ್ಯಕ್ಕೆ ಒಳಗಾಗುತ್ತಿದ್ದಾರೆ ಎನ್ನುವ ಮಾತುಗಳು ಈಗ ಕೇಳಿಬರುತ್ತಿದೆ.

Get real time updates directly on you device, subscribe now.