ರೋಹಿತ್ ಹಾಗೂ ಕೊಹ್ಲಿ ರವರಿಗಿಂತ ಕಡಿಮೆ ಇಲ್ಲದಂತೆ ಆಸ್ತಿ ಹೊಂದಿರುವ ಚಾಹಲ್ ಆಸ್ತಿ, ಜೀವನ ಶೈಲಿ ಹೇಗಿದೆ ಗೊತ್ತೇ??
ಭಾರತ ಕ್ರಿಕೆಟ್ ತಂಡದ ಅದ್ಭುತವಾದ ಬೌಲರ್ ಗಳಲ್ಲಿ ಚಾಹಲ್ ಸಹ ಒಬ್ಬರು. ರಾಷ್ಟ್ರೀಯ ಅಂತಾರಾಷ್ಟ್ರೀಯ ಪಂದ್ಯಗಳ ಮೂಲಕ ಚಾಹಲ್ ಅವರು ಗುರುತಿಸಿಕೊಂಡಿದ್ದಾರೆ. ಇವರು ಚೆಸ್ ಆಟಗಾರ ಸಹ ಹೌದು. ಕ್ರಿಕೆಟ್ ಲೋಕದಲ್ಲಿ ಸ್ಪಿನ್ನರ್ ಆಗಿ ತಮ್ಮದೇ ಆದ ಶೈಲಿಯಲ್ಲಿ ಛಾಪು ಮೂಡಿಸಿದ್ದಾರೆ. ಭಾರತ ತಂಡಕ್ಕೆ ಎಂಟ್ರಿ ಕೊಟ್ಟ ಬಳಿಕ ತಮ್ಮದೇ ಆದ ಶೈಲಿಯಲ್ಲಿ ಬೌಲಿಂಗ್ ಮಾಡಿ, ತಾವು ಅತ್ಯುತ್ತಮ ಆಟಗಾರ ಎಂದು ಪ್ರೂವ್ ಮಾಡಿಕೊಂಡಿದ್ದಾರೆ ಚಾಹಲ್, ಚಾಹಲ್ ಅವರ ಜೀವನ ಹೇಗಿದೆ, ಅವರ ಒಟ್ಟು ಆಸ್ತಿ ಎಷ್ಟು, ಇದೆಲ್ಲದರ ಬಗ್ಗೆ ಇಂದು ನಿಮಗೆ ತಿಳಿಸಿಕೊಡುತ್ತೇವೆ.1990ರ ಜುಲೈ 23ರಂದು, ಹರಿಯಾಣದ ಜಿಂದ್ ನ ಮಧ್ಯಮ ವರ್ಗದ ಕುಟುಂಬದಲ್ಲಿ ಚಾಹಲ್ ಅವರು ಜನಿಸಿದರು. ಇವರ ತಂದೆ ಕೆಕೆ ಚಾಹಲ್ ವಕೀಲರು, ತಾಯಿ ಗೃಹಿಣಿ ಆಗಿದ್ದಾರೆ.
ಚಾಹಲ್ ಅವರ ಅಕ್ಕ ಆಸ್ಟ್ರೇಲಿಯಾದಲ್ಲಿ ನೆಲೆಸಿದ್ದಾರೆ. ಚಾಹಲ್ ಅವರು ಜಿಂದ್ ನ ಡಿಎವಿಸಿ ಪಬ್ಲಿಕ್ ಸ್ಕೂಲ್ ನಲ್ಲಿ ಓದಿದರು, ಆಗಿನಿಂದಲೂ ಚಾಹಲ್ ಅವರಿಗೆ ಓದಿನಲ್ಲಿ ಹೆಚ್ಚಿನ ಆಸಕ್ತಿ ಇರಲಿಲ್ಲ, 7ನೇ ತರಗತಿಯಿಂದ ಚೆಸ್ ಆಡಲು ಶುರು ಮಾಡಿದರು. ಅದೇ ಸಮಯದಲ್ಲಿ ಕ್ರಿಕೆಟ್ ಕಲಿಕೆ ಸಹ ಶುರು ಮಾಡಿದರು. ಚೆಸ್ ನಲ್ಲಿ ಅದ್ಭುತವಾಗಿದ್ದ ಚಾಹಲ್ ಅವರು, 10ನೇ ತರಗತಿ ಓದುವಾಗ ರಾಷ್ಟ್ರೀಯ ಮಟ್ಟದ ಮಕ್ಕಳ ಚೆಸ್ ಸ್ಪರ್ಧೆ ಗೆದ್ದರು, ರಾಷ್ಟ್ರೀಯಮಟ್ಟದಲ್ಲಿ ಚಾಂಪಿಯನ್ಶಿಪ್ ಗೆದ್ದು, ಟ್ರೋಫಿ ಪಡೆದರು, ಇದು ಚಾಹಲ್ ಅವರು ಗೆದ್ದ ಮೊದಲ ಟ್ರೋಫಿ ಆಗಿದೆ. ಚೆಸ್ ನಲ್ಲಿ ಅಂಡರ್ 16 ತಂಡದಲ್ಲಿದ್ದರು ಚಾಹಲ್. ಗ್ರೀಸ್ ನಲ್ಲಿ ನಡೆದ ಜ್ಯೂನಿಯರ್ ವಿಶ್ವ ಚೆಸ್ ಚಾಂಪಿಯನ್ಶಿಪ್ ನಲ್ಲಿ ಆಡುವ ಅವಕಾಶವನ್ನು ಸಹ ಪಡೆದರು ಚಾಹಲ್. 2006ರಲ್ಲಿ ಚೆಸ್ ವಿಚಾರದಲ್ಲಿ ಚಾಹಲ್ ಅವರು ಕೆಟ್ಟ ಹಂತ ಅನುಭವಿಸಿದರು, ಚೆಸ್ ಗಾಗಿ ವರ್ಷಕ್ಕೆ 50 ರಿಂದ 60 ಸಾವಿರ ರೂಪಾಯಿ ಬೇಕಿತ್ತು.
ಅದನ್ನು ಹೊಂದಿಸಲು ಅವರ ಬಳಿ ಹಣ ಮತ್ತು ಸ್ಪಾನ್ಸರ್ಶಿಪ್ ಎರಡು ಸಹ ಇರಲಿಲ್ಲ. ಹಾಗಾಗಿ ಚಾಹಲ್ ಅವರು ಇನ್ನುಮುಂದೆ ಚೆಸ್ ಆಡುವುದಿಲ್ಲ ಎಂದು ನಿರ್ಧಾರ ಮಾಡಿದರು. ನಂತರ ಚಾಹಲ್ ಅವರು ಕ್ರಿಕೆಟ್ ಮೇಲೆ ಗಮನ ಹರಿಸಿದರು ಬಹಳ ಕಷ್ಟಪಟ್ಟು, ಕ್ರಿಕೆಟ್ ಅಭ್ಯಾಸ ಮಾಡಿದರು ಚಾಹಲ್, ಐಪಿಎಲ್ ಇವರಿಗೆ ಉತ್ತಮವಾದ ಅವಕಾಶ ನೀಡಿತು, 2011ರಲ್ಲಿ ಚಾಹಲ್ ಅವರನ್ನು ಮುಂಬೈ ಇಂಡಿಯನ್ಸ್ ತಂಡ ಖರೀದಿ ಮಾಡಿತು. 2011ರಲ್ಲಿ ಐಪಿಎಲ್ ನಲ್ಲಿ ಚಾಹಲ್ ಅವರಿಗೆ ಹೆಚ್ಚಾಗಿ ಆಡುವ ಅವಕಾಶ ಸಿಗಲಿಲ್ಲ. ಚಾಹಲ್ ಅವರು ಒಂದೇ ಒಂದು ಪಂದ್ಯಗಳಲ್ಲಿ ಕಾಣಿಸಿಕೊಂಡರು, ಇವರನ್ನು ರಿಸರ್ವ್ ಆರ್ಮ್ ಸ್ಪಿನ್ ಬೌಲರ್ ಆಗಿ ಆಯ್ಕೆಮಾಡಿಕೊಳ್ಳಲಾಗಿತ್ತು. ಬಳಿಕ ಚಾಹಲ್ ಅವರು ತಮ್ಮ ಛಲ ಬಿಡದೆ ಸತತವಾಗಿ ಕ್ರಿಕೆಟ್ ಆಡಲು ಶುರು ಮಾಡಿದರು, ಆಟವನ್ನು ಇನ್ನು ಚೆನ್ನಾಗಿ ಕಲಿತರು.
ಇದರಿಂದ ಚಾಂಪಿಯನ್ ಲೀಗ್ 20-20 ಯಲ್ಲಿ ಆಡುವ ಅವಕಾಶ ಪಡೆದು, ಎಲ್ಲಾ ಪಂದ್ಯಗಳಲ್ಲು ಆಡಿದರು. ಹರ್ಭಜನ್ ಸಿಂಗ ಅವರಿಂದ ಸಾಕಷ್ಟು ಕಲಿತರು ಚಾಹಲ್. ಈ ಲೀಗ್ ನ ಫೈನಲ್ ನಲ್ಲಿ ಚಾಹಲ್ ಅವರು 3 ಓವರ್ ಗಳಲ್ಲಿ 9 ರನ್ ನೀಡಿ, 2 ವಿಕೆಟ್ಸ್ ಪಡೆದರು. ನಂತತ 2014ರ ಐಪಿಎಲ್ ನಲ್ಲಿ ಆರ್.ಸಿ.ಬಿ ತಂಡ 10 ಲಕ್ಷ ಕೊಟ್ಟು ಚಾಹಲ್ ಅವರನ್ನು ಖರೀದಿ ಮಾಡಿತು. ಆರ್.ಸಿ.ಬಿ ಪರವಾಗಿ ಉತ್ತಮವಾದ ಪ್ರದರ್ಶನ ನೀಡಿದರು ಚಾಹಲ್, 2016ರಲ್ಲಿ ಜಿಂಬಾಬ್ವೆ ವಿರುದ್ಧ ಭಾರತದ ಪರವಾಗಿ ಆಡುವ ಅವಕಾಶ ಪಡೆದು, ಅತ್ಯುತ್ತಮವಾದ ಪ್ರದರ್ಶನ ನೀಡಿದರು. 2016ರ ಐಪಿಎಲ್ ನಲ್ಲಿ 21 ವಿಕೆಟ್ಸ್ ಕಬಳಿಸಿದರು. ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಸಹ ಚಾಹಲ್ ಅವರು ಉತ್ತಮ ಪ್ರದರ್ಶನ ನೀಡುತ್ತಿದ್ದು ಭಾರತ ತಂಡ ಮುಖ್ಯ ಆಟಗಾರ ಎನ್ನಿಸಿಕೊಂಡಿದ್ದಾರೆ. ಇಂತಹ ಕಠಿಣ ಪರಿಶ್ರಮದಿಂದ 10 ಕೋಟಿಗಿಂತ ಹೆಚ್ಚು ಆಸ್ತಿ ಗಳಿಸಿದ್ದಾರೆ ಚಾಹಲ್, ಕ್ರಿಕೆಟ್ ಮೂಲಕವೇ ಇಷ್ಟು ಹಣ ಸಂಪಾದನೆ ಮಾಡಿದ್ದಾರೆ. ಇತ್ತೀಚೆಗೆ ಟಿಕ್ ಟಾಕ್ ಸ್ಟಾರ್ ಮತ್ತು ದಂತ ವೈದ್ಯೆ ಧನಶ್ರೀ ಅವರೊಡನೆ ಮದುವೆಯಾದರು.