ಬಾರಿ ಸದ್ದು ಮಾಡುತ್ತಿರುವ ಸಂಜು ಸ್ಯಾಮ್ಸನ್ ಐಷಾರಾಮಿ ಅರಮನೆ ಹೇಗಿದೆ ಗೊತ್ತೇ?? ಕುಟುಂಬದ ಜೊತೆ ವಾಸಿಸುವ ಮನೆ ಹೇಗಿದೆ ಗೊತ್ತೇ??
2008ರ ಐಪಿಎಲ್ ನಲ್ಲಿ ರಾಜಸ್ತಾನ್ ರಾಯಲ್ಸ್ ತಂಡ ಟ್ರೋಫಿ ಗೆದ್ದಾಗ, ಈಗಿನ ಕ್ಯಾಪ್ಟನ್ ಸಂಜು ಸ್ಯಾಮ್ಸನ್ ಅವರು 13 ವರ್ಷದ ಹುಡುಗ ಆಗಿದ್ದರು. ಶೇನ್ ವಾರ್ನ್ ಮತ್ತು ಪಾಕಿಸ್ತಾನ್ ಆಟಗಾರ ಸೊಹೈಲ್ ತಂವೀರ್ ಆರ್.ಆರ್ ತಂಡವನ್ನು ಫೈನಲ್ಸ್ ನಲ್ಲಿ ಗೆಲ್ಲಿಸುವ ಕಾರ್ಯದಲ್ಲಿ ನಿರತರಾಗಿದ್ದಾಗ, ಸಂಜು ಸ್ಯಾಮ್ಸನ್ ಕೇರಳದಲ್ಲಿ ಅಂಡರ್ 16 ತಂಡದಲ್ಲಿ ಕ್ರಿಕೆಟ್ ಮ್ಯಾಚ್ ಆಡುತ್ತಿದ್ದರು. ಸಂದರ್ಶನ ಒಂದರಲ್ಲಿ ಸ್ವತಃ ಸಂಜು ಅವರೇ ಹೇಳಿದ ಹಾಗೆ, “ರಾಜಸ್ತಾನ್ ರಾಯಲ್ಸ್ ತಂಡ ಮೊದಲ ಬಾರಿಗೆ ಐಪಿಎಲ್ ಕಪ್ ಗೆದ್ದಾಗ ನಾನು ಕೇರಳ ದಲ್ಲಿ ಎಲ್ಲೋ ಅಂಡರ್ 16 ನ ಫಿನಾಲೆ ಪಂದ್ಯವನ್ನಾಡುತ್ತಿದ್ದ3..”ಎಂದಿದ್ದರು ಸಂಜು.
ಮುಂದುವರೆದು ಮಾತನಾಡಿದ್ದ ಸಂಜು ಅವರು “ಆಗ ನಾನು ಶೇನ್ ವಾರ್ನ್ ಹಾಗು ಸೊಹೈಲ್ ಅವರು ತಂಡವನ್ನು ಗೆಲ್ಲಿಸಿದ ಮ್ಯಾಚ್ ನೋಡಿದ್ದೇ. ರಾತ್ರಿ ಸಮಯದಲ್ಲಿ ಪಂದ್ಯ ನಡೆಯುವುದರಿಂದ ಇಬ್ಬನಿ ಇರುವುದರಿಂದ, ಪಂದ್ಯದ ಆರಂಭದ ಟಾಸ್ಕ್ ಇಡೀ ಪಂದ್ಯದಲ್ಲಿ ಬಹಳ ಮುಖ್ಯವಾದ ಪಾತ್ರ ವಹಿಸುತ್ತದೆ..” ಎಂದು ಒಪ್ಪಿಕೊಂಡಿದ್ದರು ಸಂಜು. 27 ವರ್ಷದ ಸಂಜು ಈ ಪಂದ್ಯಗಳಲ್ಲಿ ತಮ್ಮ ಅನುಭವ ಕಠಿಣವಾದದ್ದು ಏರಿಳಿತಗಳಿಂದ ಕೂಡಿತ್ತು ಎಂದು ಸಹ ಹೇಳಿದ್ದಾರೆ. 14 ವರ್ಷಗಳ ಬಳಿಕ, ಎಂಎಸ್ ಧೋನಿ ನಾಯಕತ್ವದ ಸಿ.ಎಸ್.ಕೆ ವಿರುದ್ಧ ಆರ್.ಆರ್ ಮೂರು ವಿಕೆಟ್‌ಗಳ ಜಯ ದಾಖಲಿಸಿ ನೆನಪುಗಳನ್ನು ಜ್ಞಾಪಿಸಿಕೊಂಡರು ಸಂಜು ಸ್ಯಾಮ್ಸನ್. ಎರಡು ತಂಡಗಳ ನಡುವಿನ ಫೈನಲ್ ಪಂದ್ಯವು ಜೂನ್ 2008 ರಂದು DY ಪಾಟೀಲ್ ಕ್ರೀಡಾಂಗಣದಲ್ಲಿ ನಡೆಯಿತು.

2008ರಲ್ಲಿ ಆರ್.ಆರ್ ಸಿ.ಎಸ್.ಕೆ ಫೈನಲ್ ನಡೆದಾಗ ಕೇರಳದಲ್ಲಿ ಅಂಡರ್-16 ಪಂದ್ಯ ಆಡುತ್ತಿದ್ದೆ ಎಂದು ಸಂಜು ಸ್ಯಾಮ್ಸನ್ ಹೇಳಿದ್ದಾರೆ. ಮುಂದೊಂದು ದಿನ ಆರ್.ಆರ್ ತಂಡವನ್ನು ಸ್ವತಃ ಸಂಜು ಐ.ಪಿ.ಎಲ್ ನ ಫೈನಲ್ ಗೆ ಕೊಂಡೊಯ್ಯುತ್ತಾರೆ ಎಂದು ಅವರು ಊಹಿಸಿರಲಿಲ್ಲ. ಇನ್ನು ಸಂಜು ಅವರ ವೈಯಕ್ತಿಕ ಜೀವನದ ಬಗ್ಗೆ ಹೇಳುವುದಾದರೆ, ಸಂಜು ಸ್ಯಾಮ್ಸನ್ ಅವರ ಒಟ್ಟು ಆಸ್ತಿ ಮೌಲ್ಯ ಸುಮಾರು 67 ಕೋಟಿ ರೂಪಾಯಿಗಳು. ಕೇರಳ ಮೂಲದ ಸಂಜು ಅವರು ಅಲ್ಲೇ ಮನೆ ಮಾಡಿ ವಾಸವಿದ್ದಾರೆ. ಸಂಜು ಅವರ ಪತ್ನಿ ಚಾರುಲತಾ ರಮೇಶ್ ಆಗಾಗ್ ತಮ್ಮ ಸುಂದರವಾದ ಮನೆಯ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳುತ್ತಾರೆ. ಮುಂಬೈ, ಹೈದರಾಬಾದ್ ಮತ್ತು ಬೆಂಗಳೂರಿನಲ್ಲಿ ಸಹ ಸಂಜು ಅವರಿಗೆ ಮನೆ ಇದೆ ಆದರೆ ಅವರಿಗೆ ಕೇರಳದ ಮನೆ ಹೆಚ್ಚು ಇಷ್ಟ, ಹಾಗಾಗಿ ಅಲ್ಲಿಯೇ ಇದ್ದಾರೆ.