ವಿರಾಟ್ ಕೊಹ್ಲಿ ಹೇರ್ ಕಟ್ ಮಾಡಿಸಿಕೊಳ್ಳಲು ಎಂದು ಸಲೂನ್ ಹೋಗಿ ನೀಡಿದ ಹಣ ಎಷ್ಟು ಗೊತ್ತೇ?? ತಿಂಗಳೆಲ್ಲ ದುಡಿದರೂ ಇಷ್ಟು ಬರಲ್ಲ ಸ್ವಾಮಿ.
ಟೀಮ್ ಇಂಡಿಯಾದ ಮಾಜಿ ಕ್ಯಾಪ್ಟನ್ ವಿರಾಟ್ ಕೋಹ್ಲಿ ಅವರು ಕ್ರಿಕೆಟ್ ನ ಬ್ರ್ಯಾಂಡ್ ಅಂಬಾಸಿಡರ್ ಎಂದರೆ ತಪ್ಪಾಗುವುದಿಲ್ಲ. ಇನ್ಸ್ಟಾಗ್ರಾಮ್ ಅತಿ ಹೆಚ್ಚು ಫಾಲೋವರ್ಸ್ ಹೊಂದಿರುವ ಮೂರನೇ ಸೆಲೆಬ್ರಿಟಿ ಇವರು. ಮೈದಾನದಲ್ಲಿ ಅದ್ಭುತ ಪರ್ಫಾರ್ಮೆನ್ಸ್ ಜೊತೆಗೆ, ಮೈದಾನದ ಹೊರಗೆ ಸ್ಟೈಲ್ ಐಕಾನ್ ಆಗಿದ್ದಾರೆ. ವಿರಾಟ್ ಕೋಹ್ಲಿ ಅವರು ತಮ್ಮ ಲುಕ್ಸ್ ಬಗ್ಗೆ ಹೆಚ್ಚು ಗಮನ ಕೊಡುತ್ತಾರೆ. ಆಗಾಗ ದುಬಾರಿ ಬಟ್ಟೆಗಳು ಮತ್ತು ಶೂ ಧರಿಸುವುದನ್ನು ನೋಡಿದ್ದೇವೆ.
ಈ ಕಾರಣಗಳಿಂದ ಇದೀಗ ವಿರಾಟ್ ಕೋಹ್ಲಿ ಅವರ ಹೊಸ ಹೇರ್ ಕಟ್ ಬಗ್ಗೆ ಚರ್ಚೆ ಶುರುವಾಗಿದೆ, ಫೇಮಸ್ ಸ್ಟೈಲಿಸ್ಟ್ ಆಗಿರುವ ರಶೀದ್ ಸಲ್ಮಾನಿ ಅವರಿಂದ ವಿರಾಟ್ ಕೋಹ್ಲಿ ಅವರು ಹೊಸ ಹೇರ್ ಸ್ಟೈಲ್ ಮಾಡಿಸಿಕೊಂಡಿದ್ದು, ಇದಕ್ಕೆ ಬರೋಬ್ಬರಿ ₹80,000 ರೂಪಾಯಿ ಖರ್ಚು ಮಾಡಿದ್ದಾರೆ ಎಂದು ಮಾಹಿತಿ ಸಿಕ್ಕಿದೆ. ವಿರಾಟ್ ಅವರು ಗ್ರೂಮ್ ಆಗಿರುವ ರೀತಿ ನೋಡಿದರೆ, ಇದು ಸತ್ಯವೇ ಇರಬಹುದು ಎನ್ನಿಸುತ್ತದೆ. ಹೌದು, ಕೋಹ್ಲಿ ಅವರು ಈ ಹೇರ್ ಕಟ್ ಮಾಡಿಸಿಕೊಳ್ಳಲು ಮತ್ತು ಹೇರ್ ಕಟ್ ಸಂಬಂಧಿಸಿದ ಇನ್ನು ಕೆಲವು ಸೌಲಭ್ಯ ಪಡೆಯಲು ಅಷ್ಟು ದುಬಾರಿ ಮೊತ್ತ ಖರ್ಚು ಮಾಡಿದ್ದರು ಮಾಡಿರಬಹುದು. ಆದರೆ ದೆಹಲಿಯ ಯಾವುದೇ ಅತ್ಯಂತ ಐಷಾರಾಮಿ ಸಲೂನ್ ಗಳಲ್ಲಿ ಇಷ್ಟು ಹಣ ಚಾರ್ಜ್ ಮಾಡುವುದಿಲ್ಲ.
ಕೋಹ್ಲಿ ಅವರ ಸ್ಟೈಲಿಶ್ ಹೇರ್ ಕಟ್ ಅನ್ನು ಅಂಡರ್ ಕಟ್ ಎಂದು ಕರೆಯಲಾಗುತ್ತದೆ. ತಲೆಯ ಸೈಡ್ ನಲ್ಲಿ ಮತ್ತು ಹಿಂಭಾಗದಲ್ಲಿ ಕೂದಲನ್ನು ಚಿಕ್ಕದಾಗಿ ಕಟ್ ಮಾಡಲಾಗಿರುತ್ತದೆ, ಮೇಲ್ಭಾಗದಲ್ಲಿ ದೊಡ್ಡದಾಗಿ ಬಿಟ್ಟಿರುತ್ತಾರೆ. ವಿರಾಟ್ ಕೋಹ್ಲಿ ಅವರು ಹೇರ್ ಕಟ್ ಮಾಡಿಸಿರುವ ಈ ಸಲೂನ್ ಹೆಸರು ಸ್ಟುಡಿಯೋ 17, ಇದು ದೆಹಲಿಯ ಅಶೋಕ್ ವಿಹಾರ್ ಏರಿಯಾದಲ್ಲಿದೆ. ಹೇರ್ ಸ್ಟೈಲಿಸ್ಟ್ ಸಲ್ಮಾನಿ ಅವರು ಈ ಮೊದಲು, ಹಾರ್ದಿಕ್ ಪಾಂಡ್ಯ, ಶ್ರೇಯಸ್ ಅಯ್ಯರ್, ನಿತೀಶ್ ರಾಣಾ, ರಿಷಬ್ ಅವರಿಗೆಲ್ಲಾ ಹೇರ್ ಸ್ಟೈಲ್ ಮಾಡಿದ್ದಾರೆ.