ನಿಮ್ಮ ಮನೆಯಲ್ಲಿ ಹಣದ ಸಮಸ್ಯೆ ಇದೆಯೇ?? ಹಾಗಿದ್ದರೆ ಬೆಳ್ಳುಳ್ಳಿಯ ಜೊತೆ ಈ ಚಿಕ್ಕ ಕೆಲಸ ಮಾಡಿ ಸಾಕು. ಎಲ್ಲದಕ್ಕೂ ಶಾಶ್ವತ ಪರಿಹಾರ.
ಪ್ರತಿದಿನ ನಮ್ಮ ಮನೆಯ ಅಡುಗೆ ಮನೆಯಲ್ಲಿ ಅಡುಗೆ ಮಾಡಲು ಬಳಸುವ ಪದಾರ್ಥಗಳಲ್ಲಿ ಬೆಳ್ಳುಳ್ಳಿ ಸಹ ಒಂದು. ಬೆಳ್ಳುಳ್ಳಿಯಿಂದ ಅಡುಗೆ ಮಾಡುವುದು ಮಾತ್ರವಲ್ಲದೆ ಅದರಿಂದ ಅನೇಕ ರೀತಿಯ ಪ್ರಯೋಜನಗಳು ಸಹ ಇದೆ. ಬೆಳ್ಳುಳ್ಳಿಯ ಬಗ್ಗೆ ಹಿಂದಿನ ಕಾಲದಲ್ಲಿ 700 ರಿಂದ 800 BC ಯಲ್ಲಿ ಬರೆದಿರುವ ಚರಕಸಂಹಿತೆ ಪುಸ್ತಕದಲ್ಲಿ ಉಲ್ಲೇಖ ಮಾಡಲಾಗಿದೆ. ಇದನ್ನು ಕುಷ್ಠರೋಗ ನಾಶಕ ಎಂದು ಕರೆದಿದ್ದಾರೆ. ಒಗ್ಗರಣೆ ಮತ್ತು ಸಾಂಬಾರ್ ಮಾಡಲು ಬೆಳ್ಳುಳ್ಳಿಯನ್ನು ಹೆಚ್ಚಾಗಿ ಬಳಸುತ್ತಾರೆ, ಕೆಲವರು ಇದನ್ನು ಮಸಾಲಾ ಪದಾರ್ಥ ಎಂದರೆ ಇನ್ನು ಕೆಲವರು ತರಕಾರಿ ಎಂದು ಕರೆಯುತ್ತಾರೆ. ಅಡುಗೆಯಲ್ಲಿ ಬೆಳ್ಳುಳ್ಳಿಗೆ ತನ್ನದೇ ಆದ ಸ್ಥಾನ ಇದೆ.
ಬೆಳ್ಳುಳ್ಳಿಯು ಅಡುಗೆಯಲ್ಲಿ ಸಹಾಯ ಮಾಡುವುದು ಮಾತ್ರವಲ್ಲದೆ, ಆರೋಗ್ಯಕ್ಕು ಸಹಾಯ ಮಾಡುತ್ತದೆ. ಇದರಿಂದ ದೇಹದ ತೂಕ ಕಡಿಮೆ ಆಗುತ್ತದೆ, ಕೂದಲು ಉದುರುವುವಿಕೆಯನ್ನು ಸಹ ಕಡಿಮೆ ಮಾಡುತ್ತದೆ. ವಾಸ್ತು ಶಾಸ್ತ್ರದಲ್ಲಿ ತಿಳಿಸಿರುವ ಪ್ರಕಾರ, ಬೆಳ್ಳುಳ್ಳಿ ನಿಮ್ಮನ್ನು ಶ್ರೀಮಂತರನ್ನಾಗಿ ಮಾಡುವ ಶಕ್ತಿಯನ್ನು ಹೊಂದಿದೆ. ನೀವು ಹಣ ಗಳಿಸುತ್ತಿದ್ದರು ಹಣ ಉಳಿಸಲು ಸಾಧ್ಯವಾಗುತ್ತಿಲ್ಲ ಎನ್ನುವುದಾದರೆ, ತಿಂಗಳ ಶುರುವಿನಲ್ಲಿ ಕೈಗೆ ಬರುವ ಹಣ ತಿಂಗಳ ಕೊನೆಯಲ್ಲಿ ಖಾಲಿ ಆಗುತ್ತಿದೆ ಎಂದು ಅನ್ನಿಸುತ್ತಿದ್ದರೆ, ಈ ಪರಿಹಾರವನ್ನು ಪಾಲಿಸಿ. ಎರಡು ಎಸಳು ಬೆಳ್ಳುಳ್ಳಿ ತೆಗೆದುಕೊಳ್ಳಿ, ಅದನ್ನು ಕೆಂಪು ಬಟ್ಟೆಯಲ್ಲಿ ಕಟ್ಟಿ, ಹೂತು ಇಡಿ. ಹೀಗೆ ಮಾಡಿದ ಸ್ವಲ್ಪ ಸಮಯದಲ್ಲಿ ನಿಮ್ಮ ಗಳಿಕೆ ಹೆಚ್ಚಾಗುವುದನ್ನು ನೀವು ನೋಡಬಹುದು.

ನೀವು ಹಣ ಉಳಿಸಲು ಸಾಧ್ಯವಾಗುತ್ತದೆ. ಒಂದು ವೇಳೆ ನಿಮ್ಮ ವ್ಯಾಪಾರ ಚೆನ್ನಾಗಿ ನಡೆಯುತ್ತಾ ಇಲ್ಲದೆ ಹೋದರೆ, ನಷ್ಟವನ್ನು ನೀವು ಅನುಭವಿಸುತ್ತಿದ್ದರೆ, 5 ರಿಂದ 7 ಲವಂಗ ಮತ್ತು ಬೆಳ್ಳುಳ್ಳಿ ತೆಗೆದುಕೊಂಡು ಅದನ್ನು ಒಂದು ಬಟ್ಟೆಯಲ್ಲಿ ಕಟ್ಟಿ, ನಂತರ ಅದನ್ನು ನೀವು ವ್ಯಾಪಾರ ಮಾಡುವ ಆಫೀಸ್ ನ ಬಾಗಿಲಿನ ಮೇಲೆ ನೇತು ಹಾಕಿ, ಈ ರೀತಿ ಮಾಡುವುದರಿಂದ ಕೆಲವೇ ಸಮಯದಲ್ಲಿ ನಿಮ್ಮ ವ್ಯಾಪಾರ ಅಭಿವೃದ್ಧಿ ಆಗುತ್ತದೆ, ನಿಮ್ಮ ಬ್ಯಾಂಕ್ ಅಕೌಂಟ್ ಗೆ ಹೆಚ್ಚು ಹಣ ಬರುತ್ತದೆ. ಇದರಿಂದ ನೀವು ಹಣ ಉಳಿಸುತ್ತೀರಿ ಹಾಗೂ ಖರ್ಚು ಕೂಡ ಕಡಿಮೆ ಆಗುತ್ತದೆ. ನೀವು ಹಣ ಇಡುವ ಕಪಾಟಿನಲ್ಲಿ ಬೆಳ್ಳುಳ್ಳಿ ಎಸಳನ್ನು ಇರಿಸಿ, ಇದರಿಂದ ಅನಗತ್ಯ ಖರ್ಚುಗಳು ಕಡಿಮೆ ಆಗುತ್ತದೆ. ಹಾಗು ಬೇರೆ ಬೇರೆ ಮೂಲಗಳಿಂದ ಹಣ ಗಳಿಸುತ್ತೀರಿ.