ಮೆರೆಯುತ್ತಿರುವ ಅಕ್ಕಿನೇನಿ ಕುಟುಂಬದ ಎಲ್ಲಾ ಸತ್ಯಗಳನ್ನು ಹೊರಗೆ ಇಡಲು ಸಿದ್ದವಾದ ಸಮಂತಾ. ಕಾಯುತ್ತಿರುವುದು ಯಾಕೆ ಗೊತ್ತೇ??

35

Get real time updates directly on you device, subscribe now.

ಕೆಲ ದಿನಗಳ ಹಿಂದೆ ತೆಲುಗು ಚಿತ್ರರಂಗದ ಸುಂದರವಾದ ಜೋಡಿ ಎಂದರೆ ಸಮಂತಾ ಮತ್ತು ನಾಗಚೈತನ್ಯ ಎಂದು ಹೇಳುತ್ತಿದ್ದರು. ಆದರೆ ಈಗ ಆ ರೀತಿ ಹೇಳಲು ಸಾಧ್ಯವಾಗುವುದಿಲ್ಲ. ಇವರಿಬ್ಬರು ಈಗ ಬೇರೆ ಬೇರೆ ಆಗಿಜ್ ವಿಚ್ಛೇದನ ಪಡೆದಿದ್ದಾರೆ. ನಾಲ್ಕು ವರ್ಷಗಳ ಕಾಲ ಸಂಸಾರ ನಡೆಸಿದ್ದಾರೆ ಎಂದರೆ ಅವರಿಬ್ಬರ ನಡುವೆ ಬಹಳಷ್ಟು ವಿಚಾರಗಳು ನಡೆದಿರುತ್ತದೆ. ದೂರವಾಗಿರುವುದಕ್ಕೆ ಬಲವಾದ ಕಾರಣ ಇರಬಹುದು, ಆದರೆ ಆ ಕಾರಣ ಏನು ಎಂದು ಇಂದಿಗು ಯಾರಿಗು ಸರಿಯಾಗಿ ತಿಳಿದುಬಂದಿಲ್ಲ.

ಕೆಲವು ಶೋಗಳಲ್ಲಿ ಮಾತ್ರ ಆಗಾಗ ಸಮಂತಾ ಅವರು ಈ ವಿಷಯದ ಬಗ್ಗೆ ಕೋಪವನ್ನು ಹೊರಹಾಕುತ್ತಾರೆ. ಇತ್ತ ನಾಗಚೈತನ್ಯ ಮಾತ್ರ ಬಹಳ ಕೂಲ್ ಆಗಿ ಸಮಂತಾ ಅವರ ಬಗ್ಗೆ ಕಮೆಂಟ್ ಮಾಡುತ್ತಾರೆ. ಇದರಿಂದ ಸಮಂತಾ ಅವರ ಬಗ್ಗೆ ಜನರಲ್ಲಿ ಬೇರೆಯದೇ ಅಭಿಪ್ರಾಯ ಮೂಡುತ್ತಿದೆ. ಇನ್ನು ವಿಚ್ಛೇದನ ಪಡೆದ ನಂತರ ಸಮಂತಾ ಅವರು ಹೆಚ್ಚಾಗಿ ಗ್ಲಾಮರಸ್ ಆಗಿ ಹಾಟ್ ಆಗಿ ಎಕ್ಸ್ಪೋಸ್ ಮಾಡುತ್ತಿರುವುದು ಅಕ್ಕಿನೇನಿ ಅಭಿಮಾನಿಗಳಿಗೆ ಆಕ್ರೋಶ ಮೂಡಿಸಿದೆ. ಇದೆಲ್ಲ ನಡೆಯುತ್ತಿರುವುದರ ಜೊತೆಗೆ ಸಮಂತಾ ಅವರು ಒಂದು ಪಾಪ್ಯುಲರ್ ಶೋಗೆ ಗೆಸ್ಟ್ ಆಗಿ ಬರಲಿದ್ದಾರೆ.

ಬಾಲಯ್ಯ ಅವರು ಹೋಸ್ಟ್ ಮಾಡುತ್ತಿರುವ ಅನ್ ಸ್ಟಾಪೆಬಲ್ ಎರಡನೇ ಸೀಸನ್ ಶೀಘ್ರದಲ್ಲೇ ಶುರುವಾಗಲಿದೆ. ಈ ಶೋಗೆ ಮೊದಲ ಗೆಸ್ಟ್ ಆಗಿ ಸಮಂತಾ ಬರುತ್ತಾರೆ ಎನ್ನುವ ಸುದ್ದಿ ಈಗ ಕೇಳಿ ಬರುತ್ತಿದೆ. ಈ ಶೋ ಬಹಳ ಕುತೂಹಲಭರಿತವಾಗಿರಲಿದೆ ಏಕೆಂದರೆ ಸಮಂತಾ ಅವರು ವಿಚ್ಛೇದನದ ಬಳಿಕ ತೆಲುಗು ಶೋ ಒಂದಕ್ಕೆ ಬರುತ್ತಿರುವುದು ಇದೇ ಮೊದಲು. ಹಾಗಾಗಿ ಈ ಶೋನಲ್ಲಿ ಪರ್ಸನಲ್ ವಿಚಾರದ ಬಗ್ಗೆ ಕೇಳಿದರೆ, ಅಕ್ಕಿನೇನಿ ಕುಟುಂಬದ ಬಗ್ಗೆ ಸಮಂತಾ ಅವರು ಯಾರು ಊಹಿಸದ ಕಮೆಂಟ್ಸ್ ಮಾಡುವ ಅವಕಾಶ ಇದೆ ಎನ್ನಲಾಗುತ್ತಿದೆ. ಈ ಶೋನಲ್ಲಿ ಸಮಂತಾ ಏನು ಹೇಳುತ್ತಾರೆ ಎಂದು ಎಲ್ಲರೂ ಕುತೂಹಲದಿಂದ ಕಾಯುತ್ತಿದ್ದಾರೆ. ಈ ಶೋ ಇಂದ ಅಕ್ಕಿನೇನಿ ಕುಟುಂಬ ಮತ್ತೊಮ್ಮ ಸಮಂತಾ ಅವರನ್ನು ಟಾರ್ಗೆಟ್ ಮಾಡುವ ಲಕ್ಷಣಗಳು ಕಾಣಿಸುತ್ತಿವೆ.

Get real time updates directly on you device, subscribe now.