ಇಂಜುರಿ ಇಂದ ಬುಮ್ರಾ ಹೊರ ಹೋದ ಬಳಿಕ ಅವರ ಸ್ಥಾನವನ್ನು ತುಂಬಬಲ್ಲ ಇಬ್ಬರೇ ಇಬ್ಬರು ಯಾರು ಗೊತ್ತೇ?? ಇವರು ಬಿಟ್ಟರೆ ಮತ್ಯಾರು ಸೂಕ್ತವಲ್ಲ.

15

Get real time updates directly on you device, subscribe now.

ಭಾರತದ ಸ್ಟಾರ್ ಆಟಗಾರ ಜಸ್ಪ್ರೀತ್ ಬುಮ್ರ ಅವರು ತೀವ್ರವಾದ ಬೆನ್ನು ನೋವಿನ ಕಾರಣ ವಿಶ್ವಕಪ್ ಇಂದ ಹೊರಗುಳಿಯುತ್ತಾರೆ ಎಂದು ಮಾಹಿತಿ ಸಿಕ್ಕಿದೆ, ಬುಮ್ರ ಅವರಿಗೆ ಯಾವುದೇ ಶಸ್ತ್ರ ಚಿಕಿತ್ಸೆ ಮಾಡಿಲ್ಲ, ಹಾಗಿದ್ದರೂ ಸಹ ಬುಮ್ರ ಅವರಿಗೆ ವೈದ್ಯರು ಚಿಕಿತ್ಸೆ ನೀಡಿದ ಬಳಿಕ 4 ರಿಂದ 6 ತಿಂಗಳ ಬೆಡ್ ರೆಸ್ಟ್ ಅವಶ್ಯಕತೆ ಇದೆ ಎಂದು ತಿಳಿಸಿದ್ದಾರೆ. ಈ ವಿಚಾರದ ಬಗ್ಗೆ ಈಗ ಚರ್ಚೆ ಆಗುತ್ತಿದ್ದು, ಬುಮ್ರ ಅವರ ಸ್ಥಾನ ತುಂಬಿ ಅವರ ಹಾಗೆ ಬೌಲಿಂಗ್ ಮಾಡುವ ಸಾಮರ್ಥ್ಯ ಹೊಂದಿರುವ ಆಟಗಾರನನ್ನು ವಿಶ್ವಕಪ್ ಗೆ ಭಾರತ ತಂಡ ಆಯ್ಕೆ ಮಾಡಬೇಕು..

ಆ ಸ್ಥಾನಕ್ಕೆ ಈಗ ಇಬ್ಬರು ಪೈಪೋಟಿಯಲ್ಲಿದ್ದಾರೆ., ಒಬ್ಬರು ಹಿರಿಯ ಆಟಗಾರ ಅನುಭವಿ ಮೊಹಮ್ಮದ್ ಶಮಿ ಅವರು ಮತ್ತು ಯುವ ಆಟಗಾರ ದೀಪಕ್ ಚಾಹರ್. ಇವರಿಬ್ಬರಲ್ಲಿ ತಂಡಕ್ಕೆ ಯಾರನ್ನು ಸೇರಿಸಿಕೊಳ್ಳಬಹುದು ಎನ್ನುವ ಕುತೂಹಲ ಎಲ್ಲರಲ್ಲು ಶುರುವಾಗಿದೆ. ಮೊಹಮ್ಮದ್ ಶಮಿ ಅವರಿಗೆ ಉತ್ತಮ ಅನುಭವ ಇದೆ, ಅನುಭವಿ ಆಟಗಾರರು ಆಗಿದ್ದಾರೆ, ಚೆಂಡಿನ ಮೂಲಕ ರನ್ಸ್ ನೀಡದೆ ವಿಕೆಟ್ಸ್ ಪಡೆಯುವ ಸಾಮರ್ಥ್ಯ ಇವರಿಗೆ ಇದೆ. ಇತ್ತ ದೀಪಕ್ ಚಾಹರ್ ಅವರು ಹೊಸ ಚೆಂಡಿನ ಜೊತೆಗೆ ಅದ್ಭುತವಾದ ಪ್ರದರ್ಶನ ನೀಡುಟ್ಟಿದ್ದಾರೆ. ವಿಕೆಟ್ಸ್ ಪಡೆಯುವಲ್ಲಿ ಯಶಸ್ವಿಯಾಗುತ್ತಿದ್ದಾರೆ. ಸೌತ್ ಆಫ್ರಿಕಾ ತಂಡದ ವಿರುದ್ಧ ವಿಕೆಟ್ಸ್ ಪಡೆಯುವಲ್ಲಿ ಚಾಹರ್ ಉತ್ತಮ ಪ್ರದರ್ಶನ ನೀಡಿದರು.

ಅಷ್ಟೇ ಅಲ್ಲದೆ,ಬ್ಯಾಟಿಂಗ್ ನಲ್ಲಿ ಸಹ ದೀಪಕ್ ಚಾಹರ್ ಅವರು ಸಹಾಯಕ್ಕೆ ಬರುತ್ತಾರೆ. ಆದರೆ ಇವರಿಬ್ಬರಲ್ಲಿ ಸಧ್ಯಕ್ಕೆ ತಂಡಕ್ಕೆ ಬೇಕಾಗಿರುವುದು ಒಬ್ಬ ಮಾತ್ರ, ಭಾರತದಲ್ಲಿ ಬೌಲಿಂಗ್ ಲೈನಪ್ ಚೆನ್ನಾಗಿಲ್ಲದೆ ಇರುವ ಕಾರಣ, ಮೊಹಮ್ಮದ್ ಶಮಿ ಅವರಿಗೆ ಅವಕಾಶ ನೀಡುವ ಸಾಧ್ಯತೆ ಹೆಚ್ಚಿದೆ ಎಂದು ಹೇಳಲಾಗುತ್ತಿದೆ. ಏಕೆಂದರೆ, ಮೊಹಮ್ಮದ್ ಅವರ ಅನುಭವ ಆಸ್ಟ್ರೇಲಿಯಾ ಪಿಚ್ ನಲ್ಲಿ ಸಹಾಯಕವಾಗುತ್ತದೆ ಎಂದು ಬಿಸಿಸಿಐ ಗೆ ನಂಬಿಕೆ ಇದೆ. ಹಾಗಾಗಿ ಬಿಸಿಸಿಐ ಇವರಿಬ್ಬರಲ್ಲಿ ವಿಶ್ವಕಪ್ ಗೆ ಯಾರನ್ನು ಆಯ್ಕೆ ಮಾಡುತ್ತದೆ ಎಂದು ಕಾದು ನೋಡಬೇಕಿದೆ.

Get real time updates directly on you device, subscribe now.