ಸ್ಟಾರ್ ಹೀರೋ ಜೊತೆ ಸಿನೆಮಾಗ ಬರಲು ಸಿದ್ದವಾದ ಸ್ಟಾರ್ ನಟಿಯ ಮಗಳು. ಈಕೆ ಅಷ್ಟಕ್ಕೂ ಯಾರು ಗೊತ್ತೇ?? ಪಾದಾರ್ಪಣೆ ಮಾಡುತ್ತಿರುವುದು ಯಾರ ಜೊತೆ ಗೊತ್ತೆ?
ಚಿತ್ರರಂಗದಲ್ಲಿ ವಾರಸತ್ವ ಎನ್ನುವುದು ನಡೆಯುತ್ತಲೇ ಇರುತ್ತದೆ. ಬಹಳಷ್ಟು ಸಿನಿಮಾ ನಟ ನಟಿಯರು ತಮ್ಮ ಮಕ್ಳಳು ಚಿತ್ರರಂಗಕ್ಕೆ ಕರೆತರುತ್ತಾರೆ. ಮೆಗಾಸ್ಟಾರ್, ದಗ್ಗುಬಾಟಿ, ಅಕ್ಕಿನೇನಿ ಕುಟುಂಬಕ್ಕೆ ಸೇರಿದ ಹಲವರು ಚಿತ್ರರಂಗಕ್ಕೆ ಕಾಲಿಟ್ಟಿದ್ದಾರೆ. ಈಗಿನ ದಿನಗಳಲ್ಲಿ ಕಲಾವಿದರ ಗಂಡುಮಕ್ಕಳು ಮಾತ್ರವಲ್ಲ, ಹೆಣ್ಣುಮಕ್ಕಳು ಸಹ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ತೆಲುಗಿನಲ್ಲಿ ಎಲ್ಲರಿಗು ಪರಿಚಯ ಇರುವ ಮೆಗಾಸ್ಟಾರ್ ಕುಟುಂಬದಿಂದ ನಾಗಬಾಬು ಅವರ ಮಗಳು ಹೀರೋಯಿನ್ ಆಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ವಿಚಾರ ಗೊತ್ತೇ ಇದೆ.
ಇದೀಗ ಖ್ಯಾತ ಸೀನಿಯರ್ ನಟಿ, ವೈಸಿಪಿ ನಾಯಕಿ, ಎಪಿ ಮಂತ್ರಿ ರೋಜಾ ಅವರು ತಮ್ಮ ಮಗಳನ್ನು ಚಿತ್ರರಂಗಕ್ಕೆ ನಾಯಕಿಯಾಗಿ ಲಾಂಚ್ ಮಾಡುತ್ತಾರೆ ಎನ್ನುವ ವಿಷಯ ಭಾರಿ ಸುದ್ದಿಯಾಗುತ್ತಿದೆ. ಶೀಘ್ರದಲ್ಲೇ ಒಬ್ಬ ಖ್ಯಾತ ಹೀರೋ ಜೊತೆಗೆ ಬೆಳ್ಳಿತೆರೆಗೆ ಎಂಟ್ರಿ ಕೊಡುತ್ತಾರೆ ಎನ್ನಲಾಗುತ್ತಿದೆ. ನಟಿ ರೋಜಾ ಅವರ ಮಗಳು ಅನ್ಶು ಮಲ್ಲಿಕಾ ಇತ್ತೀಚೆಗೆ 18ನೇ ವರ್ಷ ಪೂರೈಸಿ, 19ನೇ ವಯಸ್ಸಿಗೆ ಕಾಲಿಟ್ಟಿದ್ದಾರೆ. ಈ ನಡುವೆ ಹೊಸ ಫೋಟೋಶೂಟ್ ಗಳಿಂದ ಎಲ್ಲರ ದೃಷ್ಟಿ ಅನ್ಶು ಅವದ ಮೇಲಿದೆ.
ರೋಜಾ ಹಾಗೂ ಅವರ ಮಗಳನ್ನು ನೋಡಿದ ಜನರು, ಶೀಘ್ರದಲ್ಲೇ ಚಿತ್ರರಂಗಕ್ಕೆ ಮತ್ತೊಬ್ಬ ಹೀರೋಯಿನ್ ಎಂಟ್ರಿ ಆಗಲಿದೆ ಎಂದು ಹೇಳುತ್ತಿದ್ದಾರೆ. ಶೀಘ್ರದಲ್ಲೇ ಒಬ್ಬ ಸ್ಟಾರ್ ಹೀರೋಗೆ ನಾಯಕಿಯಾಗಿ ರೋಜಾ ಅವರ ಮಗಳು ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಾರಂತೆ. ರೋಜಾ ಅವರ ಮಗಳು ಅನ್ಶು ಮಲ್ಲಿಕಾ ಅವರು ಖ್ಯಾತ ತಮಿಳು ನಟ ಚಿಯಾನ್ ವಿಕ್ರಂ ಅವರ ಮಗ ಧ್ರುವ ವಿಕ್ರಂ ಅವರು ತೆಲುಗು ಚಿತ್ರರಂಗಕ್ಕೆ ಎಂಟ್ರಿ ಕೊಡಲಿರುವ ಹೊಸ ಸಿನಿಮಾಗೆ ನಾಯಕಿಯಾಗಿ ಅಯ್ಕೆಯಾಗಿದ್ದಾರೆ ಎನ್ನುವ ಮಾತು ಕೇಳಿಬರುತ್ತಿದೆ. ಅರ್ಜುನ್ ರೆಡ್ಡಿ ತಮಿಳ್ ರಿಮೇಕ್ ಮೂಲಕ ಧ್ರುವ ನಾಯಕನಾಗಿ ಎಂಟ್ರಿ ಕೊಟ್ಟರು, ಈಗ ರೋಜಾ ಅವರ ಮಗಳ ಲಾಂಚ್ ಸಿನಿಮಾಗೆ ನಾಯಕನಾಗುತ್ತಾರೆ ಎನ್ನಲಾಗುತ್ತಿದೆ. ರೋಜಾ ಅವರ ಮಗಳು ಚಿತ್ರರಂಗದಲ್ಲಿ ಹೇಗೆ ಮೋಡಿ ಮಾಡುತ್ತಾರೆ ಎಂದು ಕಾದು ನೋಡಬೇಕಿದೆ.