ಶುಕ್ರದೇವ ಮತ್ತು ತಾಯಿ ಲಕ್ಷ್ಮಿ ಒಟ್ಟಾರೆ ಈ 4 ರಾಶಿಚಕ್ರದ ಚಿಹ್ನೆಗಳಿಗೆ ಅದೃಷ್ಟವನ್ನು ಹೊತ್ತು ತರುತ್ತಿದ್ದಾರೆ. ಇನ್ನು ನಿಮ್ಮನ್ನು ತಡೆಯಲು ಆಗಲ್ಲ.

25

Get real time updates directly on you device, subscribe now.

ಲಕ್ಷ್ಮೀದೇವಿ ಸಂಪತ್ತಿನ ದೇವತೆ ಎಂದು ಕರೆಯುತ್ತಾರೆ. ಲಕ್ಷ್ಮೀದೇವಿಯ ಕೃಪೆಯನ್ನು ಪಡೆದ. ವ್ಯಕ್ತಿಯ ಜೀವನ ಬಹಳ ಚೆನ್ನಾಗಿರುತ್ತದೆ, ಆರ್ಥಿಕವಾಗಿ ಲಾಭಗಳು ಆಗುತ್ತದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಗ್ರಹಗಳ ಬದಲಾವಣೆ ಸಹ ಲಕ್ಷ್ಮೀದೇವಿಯ ಕೃಪೆ ತರಬಹುದು. ಜ್ಯೋತಿಷ್ಯದಲ್ಲಿ ಸೆಪ್ಟೆಂಬರ್ 24ರಂದು ಶುಕ್ರ ಗ್ರಹವು ಕನ್ಯಾರಾಶಿಯನ್ನು ಪ್ರವೇಶಿಸಿ, ಶುಕ್ರ ಗ್ರಹದ ಚಲನೆ ಶುರುವಾಗಿದೆ. ಇದರಿಂದಾಗಿ ಕೆಲವು ರಾಶಿಗಳ ಮೇಲೆ ಒಳ್ಳೆಯ ಪರಿಣಾಮ ಉಂಟಾಗಲಿದ್ದು, ಲಕ್ಷ್ಮೀದೇವಿಯ ಕೃಪೆ ಸಿಗಲಿದ್ದು, ಆರ್ಥಿಕ ಸಮಸ್ಯೆಗಳು ದೂರವಾಗುತ್ತದೆ ಹಾಗು ಅದೃಷ್ಟ ಬರುತ್ತದೆ, ಆ ರಾಶಿಗಳು ಯಾವುವು ಎಂದು ತಿಳಿಸುತ್ತೇವೆ ನೋಡಿ..

ಮಿಥುನ ರಾಶಿ :- ಈ ರಾಶಿಯವರಿಗೆ ಒಳ್ಳೆಯ ದಿನಗಳು ಶುರುವಾಗಲಿದೆ. ಈ ರಾಶಿಯವರು ಖಂಡಿತವಾಗಿ ಆರ್ಥಿಕ ಲಾಭ ಪಡೆಯುತ್ತಾರೆ, ಇದು ಯಾವುದೇ ರೂಪದಲ್ಲಿ ಆದರು ಬರಬಹುದು. ಉದ್ಯೋಗದಲ್ಲಿ ಬಡ್ತಿ ಸಿಗುವ ಮೂಲಕ ಅಥವಾ ದೊಡ್ಡ ಕಂಪನಿಯಲ್ಲಿ ಉತ್ತಮ ಸಂಬಳದ ಪ್ಯಾಕೇಜ್ ಸಿಗಬಹುದು. ವ್ಯಾಪಾರ ಮಾಡಿದರೆ ಲಾಭ ಎರಡು ಪಟ್ಟು ಹೆಚ್ಚಾಗಬಹುದು. ನಿರುದ್ಯೋಗಿಗಳಿಗೆ ಹೊಸ ಉದ್ಯೋಗ ಸಿಗಬಹುದು. ಇಷ್ಟೇ ಅಲ್ಲದೆ, ಆರ್ಧಕ್ಕೇ ನಿಂತಿರುವ ಹಣ ಹಿಂಪಡೆಯಬಹುದು. ಹಣದ ಹೂಡಿಕೆ ಮಾಡಿದರೆ, ಲಾಭ ಪಡೆಯುವ ಸಾಧ್ಯತೆ ಹೆಚ್ಚಿದೆ. ಸಂಬಂಧಿಕರಿಂದ ಆರ್ಥಿಕ ಸಹಾಯ ಸಿಗಬಹುದು.

ಸಿಂಹ ರಾಶಿ :- ಸಂತೋಷ ನಿಮ್ಮ ಬಳಿಗೆ ಬರುತ್ತದೆ. ಕುಟುಂಬದಲ್ಲಿ ದೊಡ್ಡ ಮಟ್ಟದಲ್ಲಿ ಹಣಕಾಸಿನ ಲಾಭ ಆಗುತ್ತದೆ. ಕೆಲಸದ ವಿಚಾರದಲ್ಲಿ ಹೊಸ ಕೊಡುಗೆಗಳು ಸಿಗಲಿದೆ. ಸಮಾಜದಲ್ಲಿ ಗೌರವ ಹೆಚ್ಚಾಗುತ್ತದೆ. ದಾಂಪತ್ಯ ಜೀವನದಲ್ಲಿ ಅನ್ಯೋನ್ಯತೆ ಹೆಚ್ಚಾಗುತ್ತದೆ, ಮಗುವಿನ ಕಡೆಯಿಂದ ಒಳ್ಳೆಯ ಸುದ್ದಿ ಪಡೆಯುತ್ತೀರಿ. ಮನೆಯಲ್ಲಿ ಸಂತೋಷ ಇರುತ್ತದೆ. ಸ್ನೇಹಿತರನ್ನು ಭೇಟಿ ಮಾಡುವುದರಿಂದ ಪ್ರಯೋಜನವಾಗುತ್ತದೆ. ಅದೃಷ್ಟದ ಅನುಕೂಲ ಸಿಗುತ್ತದೆ, ಒಳ್ಳೆಯ ಕೆಲಸಗಳಿಗೆ ಪ್ರಯಾಣ ಮಾಡಬಹುದು. ಮನೆಯಲ್ಲಿ ಶುಭ ಕಾರ್ಯ ನಡೆಯುತ್ತದೆ.

ತುಲಾ ರಾಶಿ :- ನಿಮ್ಮ ಜೀವನದಲ್ಲಿ ಒಳ್ಳೆಯ ಸುದ್ದಿ ಕೇಳುತ್ತೀರಿ, ಅದರಿಂದ ಜೀವನದಲ್ಲಿ ಬದಲಾವಣೆಯನ್ನು ಉಂಟಾಗುತ್ತದೆ. ಇದು ಒಳ್ಳೆಯ ಬದಲಾವಣೆ ಆಗಿರಲಿದೆ. ನಿಮ್ಮ ಮನೆಯಲ್ಲಿ ಸಂತೋಷ ಹೆಚ್ಚಾಗುತ್ತದೆ. ಪ್ರೀತಿಪಾತ್ರರಿಂದ ಪ್ರೀತಿ ಮತ್ತು ಬೆಂಬಲ ಸಿಗುತ್ತದೆ. ನ್ಯಾಯಾಲಯದ ಪ್ರಕರಣಗಳಿಂದ ದೂರವಾಗುತ್ತೀರಿ. ರಿಯಲ್ ಎಸ್ಟೇಟ್ ವಿಷಯಗಳು ನಿಮ್ಮ ಕಡೆಗೆ ಆಗುತ್ತದೆ. ಪೋಷಕರಿಂದ ಧನಲಾಭ ಆಗುತ್ತಾರೆ. ವೃತ್ತಿಯಲ್ಲಿ ನಿಮ್ಮ ಕೆಲಸಕ್ಕೆ ಪ್ರಶಂಸೆ ಸಿಗುತ್ತದೆ. ವ್ಯವಹಾರ ವಿಚಾರದಲ್ಲಿ ದೊಡ್ಡ ವ್ಯವಹಾರವನ್ನು ಫಿಕ್ಸ್ ಆಗಬಹುದು. ಹೊಸ ವ್ಯಾಪಾರ ಅಥವಾ ಹೊಸ ಕೆಲಸ ಶುರು ಮಾಡಲು ಬಯಸಿದರೆ ಇದು ಸರಿಯಾದ ಸಮಯ ಆಗಿದೆ.

ವೃಶ್ಚಿಕ ರಾಶಿ :- ಶುಕ್ರನು ಸ್ಥಾನ ಬದಲಾವಣೆ ಇಂದ, ವೃಶ್ಚಿಕ ರಾಶಿಯ ಜನರ ಅದೃಷ್ಟವು ಶುರುವಾಗುತ್ತದೆ. ಈ ಸಮಯ ನಿಮಗೆ ವರದಾನ ಎಂದರೆ ತಪ್ಪಲ್ಲ. ಹಲವು ಮಂಗಳಕರ ಮತ್ತು ಧಾರ್ಮಿಕ ಕಾರ್ಯಗಳ ಭಾಗವಾಗುತ್ತೀರಿ. ವಿದೇಶ ಪ್ರವಾಸದ ಅವಕಾಶ ಸಿಗಬಹುದು. ಒಂಟಿಯಾಗಿ ಇರುವವರಿಗೆ ಕಂಕಣಬಲ ಕೂಡಿಬರುತ್ತದೆ. ಹಣ ಬರುವಿಕೆ ಹೆಚ್ಚಾಗುತ್ತದೆ. ಲಕ್ಷ್ಮೀದೇವಿಯ ಆಶೀರ್ವಾದವನ್ನು ನಿಮ್ಮ ಮೇಲೆ ಧಾರೆಯೆರೆಯುತ್ತಾಳೆ. ಪ್ರಾಮಾಣಿಕತೆ ಮತ್ತು ಕಠಿಣ ಪರಿಶ್ರಮವನ್ನು ಎಂದಿಗು ಬಿಡಬೇಡಿ. ಈ ರೀತಿ ಮಾಡಿದಾಗ, ಹಣ ಹೇಗೆ ಬರುತ್ತದೆ ಎಂದು ನೀವು ಗಮನಿಸಬಹುದು. ಇದರಿಂದ ಬಡತನ ದೂರವಾಗುತ್ತದೆ ಮತ್ತು ನಿಮ್ಮ ಆರೋಗ್ಯ ಸುಧಾರಿಸುತ್ತದೆ.

Get real time updates directly on you device, subscribe now.