ಬಿಗ್ ಬಾಸ್ ನಲ್ಲಿ ಮತ್ತೊಂದು ಟ್ವಿಸ್ಟ್: ನಟಿ ಸಾನ್ಯ ರವರಿಗೆ ಮತ್ತೊಂದು ಶಾಕ್. ಮತ್ತೊಬ್ಬರ ನಟಿಯ ಹಿಂದೆ ಹೋದ ರೂಪೇಶ್. ಏನಾಗಿದೆ ಗೊತ್ತೇ??
ಬಿಗ್ ಬಾಸ್ ಮನೆಯಲ್ಲಿ ಲವ್ ಸ್ಟೋರಿಗಳು ಬಹಳ ಕಾಮನ್..ಪ್ರತಿ ಸೀಸನ್ ನಲ್ಲು ಲವ್ ಸ್ಟೋರಿ ಗಳನ್ನು ನೋಡುತ್ತೇವೆ. ಈ ವರ್ಷ ಬಿಗ್ ಬಾಸ್ ಓಟಿಟಿ ಸೀಸನ್ ನಲ್ಲಿ ಸಹ ಒಂದು ಹೊಸ ಲವ್ ಸ್ಟೋರಿ ಶುರುವಾಗಿದೆ, ಇವರಿಬ್ಬರು ಕೂಡ ತಮ್ಮ ನಡುವೆ ಅಂಥದ್ದೇನು ಇಲ್ಲ ಎಂದು ಹೇಳಿದರು ವಾಹ, ನೋಡುಗರಿಗೆ ಇವರಿಬ್ಬರ ನಡುವೆ ಏನೋ ಇದೆ ಎಂದು ಅನ್ನಿಸುತ್ತಿತ್ತು. ಇದೀಗ ಈ ಜೋಡಿ ಬಿಗ್ ಬಾಸ್ ಓಟಿಟಿ ಇಂದ ಟಿವಿ ಸೀಸನ್ ಗೆ ಬಂದಿದ್ದು, ಈಗ ಇವರಿಬ್ಬರ ನಡುವೆ ಏನೋ ಸರಿ ಇಲ್ಲ ಎಂದು ಇಡೀ ಮನೆ ಗಾಸಿಪ್ ಮಾಡುವ ಹಾಗೆ ಆಗಿದೆ.
ಹೌದು.. ನಾವೀಗ ಹೇಳುತ್ತಿರುವುದು ಸಾನ್ಯಾ ಅಯ್ಯರ್ ಹಾಗೂ ರೂಪೇಶ್ ಶೆಟ್ಟಿ ಜೋಡಿಯ ಬಗ್ಗೆ. ಆರಂಭದಿಂದಲೂ ಸಾನ್ಯಾ ಅಯ್ಯರ್ ರೂಪೇಶ್ ಶಟ್ಟಿ ಅವರ ಜೊತೆಗೆ ಬಹಳ ಆತ್ಮೀಯವಾಗಿದ್ದಾರೆ. ಇವರಿಬ್ಬರು ಬೆಸ್ಟ್ ಫ್ರೆಂಡ್ಸ್ ಎಂದು ಹೇಳಿಕೊಂಡು, ಅನ್ಯೋನ್ಯವಾಗಿದ್ದರು ಜೊತೆಯಾಗಿ ಹೆಚ್ಚು ಸಮಯ ಕಳೆಯುತ್ತಿದ್ದರು. ಬಿಗ್ ಬಾಸ್ ಟಿವಿ ಸೀಸನ್ ಗೆ ಬಂದ ನಂತರ ಇವರಿಬ್ಬರ ನಡುವೆ ಏನೋ ಆಗಿದೆ ಎಂದು ಅನ್ನಿಸುತ್ತಿದೆ. ಏಕೆಂದರೆ ಈಗ ರೂಪೇಶ್ ಶೆಟ್ಟಿ ಅವರು ಹೆಚ್ಚಾಗಿ ಮಂಗಳಗೌರಿ ಮದುವೆ ಧಾರವಾಹಿ ಖ್ಯಾತಿಯ ಕಾವ್ಯಶ್ರೀ ಗೌಡ ಅವರ ಜೊತೆಗೆ ಹೆಚ್ಚು ಮಾತನಾಡುತ್ತಾ ಸಮಯ ಕಳೆಯುತ್ತಿದ್ದಾರೆ.
ಸಾನ್ಯಾ ಅಯ್ಯರ್ ಸಹ ಆಗಾಗ ಇವರಿಬ್ಬರನ್ನು ನೋಡಿ ಉರಿದುಕೊಳ್ಳುತ್ತಿದ್ದಾರೆ ಎಂದು ಗೊತ್ತಾಗಿದ್ದು, ಅದನ್ನು ನೋಡಿ ಮನೆಯವರೆಲ್ಲರೂ ಚರ್ಚೆ ಮಾಡಿದ್ದಾರೆ. ಆರ್ಯವರ್ಧನ್ ಗುರುಜಿ, ದರ್ಶ್ ಚಂದ್ರಪ್ಪ ಈ ವಿಚಾರದ ಬಗ್ಗೆ ಗಾಸಿಪ್ ಮಾಡುತ್ತಿದ್ದರು, ಸಾನ್ಯಾ ಗೆ ಬೇಸರ ಆಗಿದೆ, ಉರಿಕೊಂಡಿದ್ದಾರೆ ಎಂದು ಹೇಳುವಾಯ, ಅಲ್ಲಿಯೇ ಇದ್ದ ನೇಹಾ ಗೌಡ ಸಾನ್ಯಾ ಏನಾದ್ರು ಬೇಜಾರಾಗಿದೆ ಅಂತ ಹೇಳಿದ್ರ ಎಂದು ಕೇಳಿದ್ದಾರೆ. ಆಗ ಅಲ್ಲಿಯೇ ಇದ್ದ ಕಾವ್ಯಶ್ರೀಗೌಡ, ಹೌದು, ಸಾನ್ಯಾ ಗೆ ಬೇಸರ ಆಗಿರಬಹುದು, ನಮ್ಮನ್ನೆಲ್ಲ ಮರೆತೇಬಿಟ್ಟಿದ್ದೀರಾ, ಈವಾಗ ನೆನಪಾದ್ನ ಎಂದು ಮಾತನಾಡಿದ್ದರು ಎಂದು ಕಾವ್ಯಶ್ರೀ ಗೌಡ ಸಹ ಹೇಳಿದ್ದು, ಇದೀಗ ಸಾನ್ಯಾ ರೂಪೇಶ್ ವಿಚಾರ ಈಗ ಜೋರಾಗಿಯೇ ಚರ್ಚೆಯಾಗುತ್ತಿದೆ.