ಮತ್ತದೇ ಟೆನ್ಶನ್: ಆಸ್ಟ್ರೇಲಿಯಾ ಸರಣಿ ಮುಗಿದು ದಕ್ಷಿಣ ಆಫ್ರಿಕಾ ಸರಣಿಗೂ ಮುನ್ನವೇ ಭಾರತಕ್ಕೆ ಬಿಗ್ ಶಾಕ್. ಸ್ಟಾರ್ ಆಟಗಾರ ಔಟ್. ಯಾರು ಗೊತ್ತೇ??
ಭಾರತ ತಂಡದ ಬೌಲಿಂಗ್ ನಲ್ಲಿ ಸಮಸ್ಯೆ ಇದೆ, ನಿರೀಕ್ಷೆಯ ಮಟ್ಟದಲ್ಲಿ ಚಾಣಾಕ್ಷವಾಗಿ ಬೌಲಿಂಗ್ ಮಾಡುವ ಬೌಲರ್ ಗಳ ಕೊರತೆ ಕಾಡುತ್ತಿದೆ. ಈಗ. ತಂಡದಲ್ಲಿ ಇರುವ ಬೌಲರ್ ಗಳು ಫಾರ್ಮ್ ಕಳೆದುಕೊಂಡಿದ್ದಾರೆ. ಹರ್ಷಲ್ ಪಟೇಲ್, ಭುವನೇಶ್ವರ್ ಕುಮಾರ್ ಹಾಗೂ ಯುಜವೇಂದ್ರ ಚಾಹಲ್ ಮೂವರು ಸಹ ದುಬಾರಿಯಾಗುತ್ತಿದ್ದಾರೆ. ಜಸ್ಪ್ರೀತ್ ಬುಮ್ರ ಅವರು ಸಹ ನಿರೀಕ್ಷೆಯ ಮಟ್ಟದ ಪ್ರದರ್ಶನ ನೀಡಲು ಹಿನ್ನಡೆ ಕಾಣುತ್ತಿದ್ದಾರೆ.
ಮೊಹಮ್ಮದ್ ಶಮಿ ಅವರನ್ನು ಆಸ್ಟ್ರೇಲಿಯಾ ಮತ್ತು ಸೌತ್ ಆಫ್ರಿಕಾ ತಂಡಗಳ ಸರಣಿ ಪಂದ್ಯಕ್ಕೆ ಆಯ್ಕೆ ಮಾಡಿಕೊಳ್ಳಲಾಗಿತ್ತು, ಈ ಸರಣಿಗಳಲ್ಲಿ ಅವರು ಉತ್ತಮ ಪ್ರದರ್ಶನ ನೀಡಿದರೆ, ವಿಶ್ವಕಪ್ ನಲ್ಲಿ ಪ್ಲೇಯಿಂಗ್ 11 ನಲ್ಲಿ ಆಡುವ ಅವಕಾಶ ಸಿಗುತ್ತಿತ್ತು, ಆದರೆ ಶಮಿ ಅವರಿಗೆ ಕೋವಿಡ್ ಸೋಂಕು ಪಾಸಿಟಿವ್ ಬಂದ ಕಾರಣ ಅವರು ಆಸ್ಟ್ರೇಲಿಯಾ ಸೀರೀಸ್ ಇಂದ ದೂರ ಉಳಿದಿದ್ದರು. ಶಮಿ ಅವರು ಹುಷಾರಾಗಿ ಬಂದ ಬಳಿಕ ಸೌತ್ ಆಫ್ರಿಕಾ ಸೀರೀಸ್ ನಲ್ಲಿ ತಂಡಕ್ಕೆ ವಾಪಸ್ ಬರುತ್ತಾರೆ ಎನ್ನಲಾಗಿತ್ತು. ಆದರೆ ಈಗ ಅದು ಡೌಟ್ ಎನ್ನಲಾಗುತ್ತಿದೆ.
ಏಕೆಂದರೆ ಶಮಿ ಅವರ ಆರೋಗ್ಯದ ಬಗ್ಗೆ ಹಾಗೂ ಅವರ ಫಿಟ್ನೆಸ್ ಬಗ್ಗೆ ಇನ್ನೂ ಮಾಹಿತಿ ಸಿಕ್ಕಿಲ್ಲ. ಹಾಗಾಗಿ ಶಮಿ ಅವರು ಸೌತ್ ಆಫ್ರಿಕಾ ಸೀರೀಸ್ ಪಂದ್ಯಗಳಲ್ಲೂ ಪಾಲ್ಗೊಳ್ಳುವುದು ಖಚಿತವಾಗಿ ತಿಳಿದುಬಂದಿಲ್ಲ ಎನ್ನಲಾಗುತ್ತಿದೆ. ಹಾಗಾಗಿ ಬಿಸಿಸಿಐ ಐಪಿಎಲ್ ನಲ್ಲಿ ಮಿಂಚಿದ್ದ ಉಮ್ರಾನ್ ಮಲಿಕ್ ಅವರಿಗೆ ಸಿದ್ಧವಾಗಿ ಇರಬೇಕು ಎಂದು ಈಗಾಗಲೇ ತಿಳಿಸಿದೆ ಎಂದು ಮಾಹಿತಿ ಸಿಕ್ಕಿದೆ. ಪ್ರಸ್ತುತ ಆಸ್ಟ್ರೇಲಿಯಾ ವಿರುದ್ಧದ ಟಿ20 ಪಂದ್ಯ ಮುಗಿಸಿರುವ ಭಾರತ ತಂಡ ಸೌತ್ ಆಫ್ರಿಕಾ ವಿರುದ್ಧದ ಸರಣಿಯಲ್ಲಿ ಗೆಲ್ಲಲು ಮುಂದಾಗಿದೆ.