ಗೋಲ್ಡನ್ ಗರ್ಲ್ ಆದ ರಶ್ಮಿಕಾ ಮಂದಣ್ಣ: ಹುಡುಗರ ತಲೆ ತಿರುಗುವಂತೆ ಫೋಟೋಗಳನ್ನು ಹರಿಬಿಟ್ಟ ಚೆಲುವೆ
ನಟಿ ರಶ್ಮಿಕಾ ಮಂದಣ್ಣ ಈಗ ಎಲ್ಲಾ ಭಾಷೆಗಳ ಸಿನಿಮಾಗಳಲ್ಲೂ ನಟಿಸುತ್ತಾ ಬಹಳ ಬ್ಯುಸಿ ಆಗಿದ್ದಾರೆ. ಪುಷ್ಪ ಸಿನಿಮಾ ಸಕ್ಸಸ್ ಬಳಿಕ ರಶ್ಮಿಕಾ ಮಂದಣ್ಣ ಅವರು ಪ್ಯಾನ್ ಇಂಡಿಯಾ ಸ್ಟಾರ್ ಆಗಿದ್ದಾರೆ. ಕನ್ನಡ, ತೆಲುಗು, ತಮಿಳು ಹಾಗೂ ಹಿಂದಿ ಭಾಷೆಯ ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ. ಸಾಲು ಸಾಲು ಸಿನಿಮಾ ಆಫರ್ ಗಳು ಇವರನ್ನು ಹುಡುಕಿಕೊಂಡು ಬರುತ್ತಿದೆ. ಪ್ರಸ್ತುತ ಅಲ್ಲು ಅರ್ಜುನ್ ಅವರೊಡನೆ ಪುಷ್ಪ2, ನಟ ವಿಜಯ್ ಅವರೊಡನೆ ವಾರಿಸು ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ.
ಜೊತೆಗೆ ರಶ್ಮಿಕಾ ಮಂದಣ್ಣ ಅಭಿನಯದ ಎರಡನೇ ಬಾಲಿವುಡ್ ಸಿನಿಮಾ ತೆರೆಕಾಣಲು ಸಜ್ಜಾಗಿದೆ. ಮೊದಲ ಸಿನಿಮಾ ನಟ ಸಿದ್ಧಾರ್ಥ್ ಮಲ್ಹೋತ್ರಾ ಅವರ ಜೊತೆ ನಟಿಸಿರುವ ಮಿಷನ್ ಮಜ್ನು, ಆದರೆ ಆ ಸಿನಿಮಾ ಕಾರಣಾಂತರಗಳಿಂದ ಬಿಡುಗಡೆ ಆಗುವುದು ತಡವಾಗಿದ್ದು, ಮೊದಲಿಗೆ ಬಿಗ್ ಬಿ ಅಮಿತಾಭ್ ಬಚ್ಚನ್ ಅವರೊಡನೆ ಅಭಿನಯಿಸಿರುವ ಗುಡ್ ಬೈ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ಈ ಸಿನಿಮಾ ಮುಂದಿನ ತಿಂಗಳು ಬಿಡುಗಡೆ ಆಗುತ್ತಿದ್ದು, ಗುಡ್ ಬೈ ಸಿನಿಮಾ ಪ್ರೊಮೋಷನ್ ನಲ್ಲಿ ಬ್ಯುಸಿ ಆಗಿದ್ದಾರೆ.
ಇತ್ತೀಚೆಗೆ ಗುಡ್ ಬೈ ಸಿನಿಮಾ ಪ್ರೊಮೋಷನ್ ಗಾಗಿ ರಶ್ಮಿಕಾ ಮಂದಣ್ಣ ಅವರು ಗೋಲ್ಡನ್ ಕಲರ್ ಲೆಹೆಂಗ ಧರಿಸಿದ್ದರು, ಡೀಪ್ ನೆಕ್, ಸ್ಲೀವ್ ಲೆಸ್ ಬ್ಲೌಸ್ ಹಾಗೂ ಸ್ಟೈಲಿಶ್ ಡ್ರೆಸ್ ಧರಿಸಿದ್ದಾರೆ ರಶ್ಮಿಕಾ, ರಶ್ಮಿಕಾ ಅವರ ಈ ಲುಕ್ ನೋಡಿ ಅಭಿಮಾನಿಗಳು ಮೆಚ್ಚಿಗೆ ಸೂಚಿಸಿದ್ದಾರೆ. ರಶ್ಮಿಕಾ ಅವರು ಇನ್ಸ್ಟಾಗ್ರಾಮ್ ನಲ್ಲಿ ಈ ಫೋಟೋಸ್ ಶೇರ್ ಮಾಡಿ, ಈ ಲುಕ್ ನಿಮಗೆ ಇಷ್ಟ ಆಯಿತಾ ಎಂದು ಕೇಳಿದ್ದು, ಈ ಫೋಟೋಗಳಿಗೆ 1.6 ಮಿಲಿಯನ್ ಗಿಂತ ಹೆಚ್ಚು ಲೈಕ್ಸ್ ಬಂದಿದೆ. ಕಮೆಂಟ್ಸ್ ಗಳ ಮೂಲಕ ಹಾಗು ಲೈಕ್ಸ್ ಗಳ ಮೂಲಕ ಮೆಚ್ಚುಗೆ ತೋರಿಸುತ್ತಿದ್ದಾರೆ.