ಭುವನೇಶ್ವರ್ ವಿರುದ್ಧ ಮಾತನಾಡಿದ ಮಾಜಿ ಬೌಲರ್ RP ಸಿಂಗ್; ಯಾಕೆ ಗೊತ್ತೇ?? ರೋಹಿತ್ ಗೆ ಸಲಹೆ ನೀಡಿದ್ದೇನು ಗೊತ್ತೇ??

20

Get real time updates directly on you device, subscribe now.

ಭಾರತ ಕ್ರಿಕೆಟ್ ತಂಡದಲ್ಲಿ ಬೌಲಿಂಗ್ ಸಮಸ್ಯೆ ಸರಿಹೋಗುವ ಹಾಗೆ ತೋರುತ್ತಿಲ್ಲ. ಏಷ್ಯಾಕಪ್ ನಲ್ಲಿ ಸಹ ಇದೇ ರೀತಿ ನಡೆದಿತ್ತು, ಇದೀಗ ಆಸ್ಟ್ರೇಲಿಯಾ ವಿರುದ್ಧದ ಪಂದ್ಯಗಳಲ್ಲೂ ಅದೇ ರೀತಿ ಆಗುತ್ತಿದೆ. ಜಸ್ಪ್ರೀತ್ ಬುಮ್ರ ಹಾಗೂ ಹರ್ಷಲ್ ಪಟೇಲ್ ಬಂದರೆ ತಂಡದಲ್ಲಿ ಎಲ್ಲವೂ ಸರಿಹೋಗುತ್ತದೆ ಎಂದು ಭಾವಿಸಲಾಗಿತ್ತು. ಆದರೆ ಹರ್ಷಲ್ ಪಟೇಲ್ ಫಾರ್ಮ್ ನಲ್ಲಿಲ್ಲ, ಇನ್ನು ಜಸ್ಪ್ರೀತ್ ಬುಮ್ರ ಅವರು ವಿಕೆಟ್ಸ್ ಪಡೆಯುತ್ತಿದ್ದರು ಸಹ, ರನ್ಸ್ ನೀಡುವುದು ಸಹ ಕಡಿಮೆ ಆಗಿಲ್ಲ. ಇತ್ತ ಭುವನೇಶ್ವರ್ ಕುಮಾರ್ ಅವರು ಸಹ ಡೆತ್ ಓವರ್ ಗಳಲ್ಲಿ ಕಳಪೆ ಪ್ರದರ್ಶನ ನೀಡಿ ಹೆಚ್ಚು ರನ್ ಗಳನ್ನು ಬಿಟ್ಟುಕೊಡುತ್ತಿದ್ದಾರೆ.

ಆಸ್ಟ್ರೇಲಿಯಾ ವಿರುದ್ಧ ನಡೆದ ನಿನ್ನೆಯ ಕೊನೆಯ ಪಂದ್ಯದಲ್ಲಿ ಕಡೆಯ 5 ಓವರ್ ಗಳಲ್ಲಿ ಎದುರಾಳಿ ತಂಡಕ್ಕೆ ಬರೋಬ್ಬರಿ 63 ರನ್ ನೀಡಲಾಯಿತು. ಇನ್ನು ಮೊದಲ ಪಂದ್ಯದಲ್ಲಿ ಭಾರತ ತಂಡ 208 ರನ್ ಗಳ ಟಾರ್ಗೆಟ್ ನೀಡಿದರು ಸಹ, ಅದನ್ನು ಡಿಫೆಂಡ್ ಮಾಡಿಕೊಳ್ಳಲು ಸಾಧ್ಯವಾಗಲಿಲ್ಲ. ಬೌಲಿಂಗ್ ನಲ್ಲಿ ಅದರಲ್ಲೂ ಡೆತ್ ಓವರ್ ಗಳಲ್ಲಿ ಆಗುತ್ತಿರುವ ಈ ಕಳಪೆ ಬೌಲಿಂಗ್ ಸಮಸ್ಯೆ ಸರಿಪಡಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ವಿಶ್ವಕಪ್ ಗಿಂತ ಮೊದಲು ಭಾರತ ತಂಡ ಇದನ್ನು ಸರಿಪಡಿಸಿಕೊಳ್ಳಬೇಕಾದ ಅವಶ್ಯಕತೆ ಬಹಳ ಇದೆ, ಈ ಸಮಯದಲ್ಲಿ ಮಾಜಿ ಬೌಲರ್ ಆರ್.ಪಿ.ಸಿಂಗ್ ಅವರು ಭುವನೇಶ್ವರ್ ಕುಮಾರ್ ಅವರ ವಿರುದ್ಧ ಮಾತನಾಡಿದ್ದು, ರೋಹಿತ್ ಶರ್ಮಾ ಅವರಿಗೆ ಸಲಹೆ ನೀಡಿದ್ದಾರೆ. ಅದೇನು ಎಂದು ತಿಳಿಸುತ್ತೇವೆ ನೋಡಿ..

“ಪದೇ ಪದೇ ಡೆತ್ ಓವರ್ ಗಳಲ್ಲಿ 18-19 ರನ್ ಗಳನ್ನು ನೀಡುತ್ತಾ ಇದ್ದರೆ, ಆ ಸಮಯದಲ್ಲಿ ಅವರಿಗೆ ಅವಕಾಶ ಕೊಡಬಾರದು. ಆರಂಭದ ಓವರ್ ಗಳಲ್ಲಿ ದೊಡ್ಡ ವಿಕೆಟ್ಸ್ ಪಡೆದರೆ ಮಾತ್ರ, ಡೆತ್ ಓವರ್ ಗಳಲ್ಲೂ ಒಳ್ಳೆಯ ಪ್ರದರ್ಶನ ನೀಡಲು ಸಾಧ್ಯವಾಗುತ್ತದೆ. ಒಂದು ವೇಳೆ ಆ ರೀತಿ ಆಗದೆ ಹೋದರೆ, ಬೌಲರ್ ಅನ್ನು ಸ್ವಲ್ಪ ಸಮಯದವರೆಗೂ ದೂರ ಇಡುವುದು ಒಳ್ಳೆಯದು. ಕಾರಣ, ಅದು ಅವ್ಕ್ರ ಆತ್ಮವಿಶ್ವಾಸದ ಮೇಲೆ ಪರಿಣಾಮ ಬೀರುತ್ತದೆ. ಈಗಿನ ಪಂದ್ಯಗಳಲ್ಲಿ ಭುವನೇಶ್ವರ್ ಕುಮಾರ್ ಹೆಚ್ಚಿನ ರನ್ಸ್ ಬಿಟ್ಟುಕೊಡುತ್ತಿದ್ದಾರೆ ಇದು ಭಾರತ ತಂಡಕ್ಕೆ ತಲೆನೋವಾಗಿದೆ. ಹರ್ಷಲ್ ಪಟೇಲ್ ಕೂಡ ಹೆಚ್ಚು ರನ್ಸ್ ಬಿಟ್ಟುಕೊಡುತ್ತಿದ್ದಾರೆ, ಜಸ್ಪ್ರೀತ್ ಬುಮ್ರ ಬಂದಮೇಲು ಪರಿಸ್ಥಿತಿ ಸರಿಹೋಗಿಲ್ಲ. ಮುಂದಿನ ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯಗಳಲ್ಲಿ ವಿಭಿನ್ನವಾದ ಬೌಲಿಂಗ್ ಸಂಯೋಜನೆ ಹೊಂದಿರಬೇಕು.

ಆಗ, ಹಾರ್ದಿಕ್ ಪಾಂಡ್ಯ ಮತ್ತು ಭುವನೇಶ್ವರ್ ಕುಮಾರ್ ಅಕಾಡೆಮಿಗೆ ಹೋಗುತ್ತಾರೆ, ಅರ್ಷದೀಪ್ ಸಿಂಗ್ ಮತ್ತು ಮೊಹಮ್ಮದ್ ಶಮಿ ತಂಡಕ್ಕೆ ವಾಪಸ್ ಬರುತ್ತದೆ ಎಂದಿದ್ದಾರೆ ಆರ್.ಪಿ.ಸಿಂಗ್. ಈ ಸಮಯದಲ್ಲಿ ಬೌಲಿಂಗ್ ಘಟಕವನ್ನು ಇನ್ನು ಹೆಚ್ಚು ಬಲಿಷ್ಠವಾಗಿ ಮಾಡಬೇಕು.. ಅರ್ಷದೀಪ್ ಸಿಂಗ್ ಅವರ ಬೌಲಿಂಗ್ ಕೂಡ ಕಳವಳವಾಗಿದೆ ಎಂದು ಹೇಳಿ, ಅದೆಲ್ಲವನ್ನು ನಾಯಕ ರೋಹಿತ್ ಶರ್ಮಾ ಸರಿಮಾಡಬೇಕು ಎಂದಿದ್ದಾರೆ.

Get real time updates directly on you device, subscribe now.