ಕೇವಲ 7 ದಿನಗಳಲ್ಲಿ ಮುಖದಲ್ಲಿರುವ ಮೊಡವೆ ಹೋಗ್ಬೇಕು ಅಂದ್ರೆ ಏನು ಮಾಡಬೇಕಂತೆ ಗೊತ್ತೇ?? ನಿವೇದಿತಾ ಹೇಳಿದ್ದೇನು ಗೊತ್ತೇ??
ಕನ್ನಡ ಕಿರುತೆರೆ ಮತ್ತು ಸೋಷಿಯಲ್ ಮೀಡಿಯಾದಲ್ಲಿ ಬಹಳ ಫೇಮಸ್ ಆಗಿರುವ ಸೆಲೆಬ್ರಿಟಿಗಳಲ್ಲಿ ಒಬ್ಬರು ನಿವೇದಿತಾ ಗೌಡ. ಬಿಗ್ ಬಾಸ್ ಕನ್ನಡ ಸೀಸನ್ 5ರಲ್ಲಿ ಕಾಮನ್ ಮ್ಯಾನ್ ಆಗಿ ಎಂಟ್ರಿ ಕೊಟ್ಟ ನಿವೇದಿತಾ ಗೌಡ ಇಂದು ಬಹಳ ಫೇಮಸ್ ಆಗಿದ್ದಾರೆ. ರಿಯಾಲಿಟಿ ಶೋಗಳು, ಯೂಟ್ಯೂಬ್ ಚಾನೆಲ್ ಎಂದು ಹಲವು ವಿಚಾರಗಳಲ್ಲಿ ಬ್ಯುಸಿ ಆಗಿದ್ದಾರೆ ನಿವೇದಿತಾ. ರಾಜರಾಣಿ ಶೋನಲ್ಲಿ ಪತಿ ಚಂದನ್ ಜೊತೆಗೆ ಭಾಗವಹಿಸಿದರು, ಬಳಿಕ ಗಿಚ್ಚಿ ಗಿಲಿಗಿಲಿ ಶೋನಲ್ಲಿ ಸಹ ಕಾಣಿಸಿಕೊಂಡು, ಫಿನಾಲೆಯಲ್ಲಿ ಗೆದ್ದಿದ್ದಾರೆ ನಿವೇದಿತಾ ಗೌಡ.
ತಮ್ಮದೇ ಆದ ಯೂಟ್ಯೂಬ್ ಚಾನೆಲ್ ಹೊಂದಿರುವ ನಿವೇದಿತಾ ಗೌಡ, ಅದರ ಮೂಲಕ ಅನೇಕ ವಿಚಾರಗಳನ್ನು ಜನರ ಜೊತೆಗೆ ಹಂಚಿಕೊಳ್ಳುತ್ತಾರೆ. ಇತ್ತೀಚೆಗೆ ನಿವೇದಿತಾ ಗೌಡ ಅವರು, ಮೊಡವೆಗಳ ವಿಚಾರಕ್ಕೆ 7 ದಿನಗಳ ಸ್ಕಿನ್ ರೊಟೀನ್ ತಿಳಿಸಿದ್ದಾರೆ, ಬ್ಯೂಟಿ ಪಾರ್ಲರ್ ಗೆ ಹೋಗಿ ಸಾವಿರಾರು ರೂಪಾಯಿ ಹಣ ಖರ್ಚು ಮಾಡುವುದಕ್ಕಿಂತ ಮನೆಯಲ್ಲೇ ಸುಲಭವಾಗಿ ಈ ಕ್ರಮ ಅನುಸರಿಸಬಹುದು ಎಂದು ತೋರಿಸಿದ್ದಾರೆ. “ನಾನು 7 ದಿನಗಳ ಸ್ಕಿನ್ ಗ್ಲೋ ಚಾಲೆಂಜ್ ತೆಗೆದುಕೊಂಡಿದ್ದೀನಿ. ಚಳಿಗಾಲದಲ್ಲಿ ನನ್ನ ಸ್ಕಿನ್ ಡ್ರೈ ಆಗುತ್ತದೆ, ಇತ್ತೀಚೆಗೆ ಶೂಟಿಂಗ್ ಗಾಗಿ ಜಾಸ್ತಿ ಮೇಕಪ್ ಮಾಡಿಕೊಂಡಿರುವ ಕಾರಣ ಪಿಂಪಲ್ ಗಳು ಹೆಚ್ಚಾಗಿದೆ, ಹಣೆಯ ಮೇಲೆ ಪಿಂಪಲ್ ಜಾಸ್ತಿಯಾಗಿದೆ. ನನ್ನ ಸ್ಕಿನ್ ಮೊದಲಿಗೆ ಹೇಗಿತ್ತು ಅದೇ ರೀತಿ ತರಲು ಈಗ 7 ದಿನಗಳ ಚಾಲೆಂಜ್ ತೆಗೆದುಕೊಂಡಿದ್ದೀನಿ. ನಾನು ಏನು ಮಾಡುತ್ತೇನೆ ಅದನ್ನು ನೀವು ಜೋಡ ಟ್ರೈ ಮಾಡಿ..
“ಮೊದಲಿಗೆ ಮುಖವನ್ನು ಹಾಲಿನಿಂದ ತೊಳೆಯಿರಿ. ಫೇಸ್ ಮಾಸ್ಕ್ ಮಾಡಲು ಅರಿಶಿನ ಬೇಸನ್, ಜೇನುತುಪ್ಪ, ಮೊಸರು, ಬಳಸಿ. ಇದೆಲ್ಲವನ್ನು ಚೆನ್ನಾಗಿ ಮಿಕ್ಸ್ ಮಾಡಿ, ಮುಖಕ್ಕೆ ಹಚ್ಚಿ 15 ನಿಮಿಷಗಳು ಬಿಟ್ಟರೆ ಸಾಕು. ಅದಕ್ಕಿಂತ ಹೆಚ್ಚು ಬಿಟ್ಟರೆ ಮುಖ ಡ್ರೈ ಆಗುತ್ತದೆ. ಪಿಂಪಲ್ ಇದ್ದರೆ ಕೆನ್ನೆ ಮೇಲೆ ಹಾಕಿ. ಬಳಿಕ ಚೆನ್ನಾಗಿ ಫೇಸ್ ವಾಶ್ ಮಾಡಿದ ನಂತರ ಫ್ರೆಶ್ ಅನ್ನಿಸುತ್ತದೆ. ಮಾಸ್ಕ್ ಬಳಿಕ ಸಿರಮ್ ಅಥವಾ ರೋಸ್ ವಾಟರ್ ಬಳಸಿ. ನಂತರ moisturizer ಬಳಸಬೇಕು. ನಂತರ 10 ನಿಮಿಷ ಬಿಟ್ಟು sunscreen ಬಳಸಿ..” ಎಂದು ಹೇಳಿದ್ದಾರೆ. ಅಷ್ಟೇ ಅಲ್ಲದೆ, ಈಗ ದಸರಾ ದೀಪಾವಳಿ ಹಬ್ಬದ ಸೀಸನ್, ಮದುವೆಗಳು ಸಹ ಹೆಚ್ಚಾಗಿ ನಡೆಯುತ್ತದೆ, ಈ ಸಮಯದಲ್ಲಿ ಪಾರ್ಲರ್ ಗೆ ಹೋಗಿ ಸ್ಕಿನ್ ಸರಿ ಮಾಡಿಕೊಳ್ಳುವುದಕ್ಕಿಂತ ಮನೆಯಲ್ಲಿ ಈ ರೀತಿ ಮಾಡಿಕೊಳ್ಲಬಹುದು, ಎಂದು ಹೇಳಿದ್ದಾರೆ ನಿವೇದಿತಾ ಗೌಡ.