ಬಿಗ್ ಬಾಸ್ ಮನೆಗೆ ಹೋದ ನವಾಜ್ ಬಗ್ಗೆ ಶುರುವಾಯ್ತು ಬಿಗ್ ಚರ್ಚೆ: ಪ್ರೇಕ್ಷಕರು ಅಸಮಾಧಾನ ಗೊಂಡದ್ದು ಯಾಕೆ ಗೊತ್ತೇ??
ಬಹುನಿರೀಕ್ಷಿತ ಬಿಗ್ ಬಾಸ್ ಕನ್ನಡ ಸೀಸನ್ 9 ಶೋಗೆ ಸೆಪ್ಟೆಂಬರ್ 24ರ ಶನಿವಾರ ಚಾಲನೆ ಸಿಕ್ಕಿದೆ. ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರು ಪ್ರೀಮಿಯರ್ ಎಪಿಸೋಡ್ ನಲ್ಪಿ 18 ಜನ ಸ್ಪರ್ಧಿಗಳನ್ನು ಮನೆಯೊಳಗೆ ಕಳಿಸಿದ್ದಾರೆ. ಹಿಂದಿನ ಸೀಸನ್ ಗಳಿಂದ ರೂಪೇಶ್ ಶೆಟ್ಟಿ, ಸಾನ್ಯಾ ಅಯ್ಯರ್, ರಾಕೇಶ್ ಅಡಿಗ, ಆರ್ಯವರ್ಧನ್ ಗುರೂಜಿ, ಅನುಪಮಾ ಗೌಡ, ಅರುಣ್ ಸಾಗರ್, ದೀಪಿಕಾ ದಾಸ್, ಪ್ರಶಾಂತ್ ಸಂಭರ್ಗಿ ಮತ್ತು ದಿವ್ಯ ಉರುಡುಗ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದಾರೆ. ಹೊಸಬರಾಗಿ, ದರ್ಶ್ ಚಂದ್ರಪ್ಪ, ನೇಹಾ ಗೌಡ, ಮಯೂರಿ ಕ್ಯಾತರಿ, ಅಮೂಲ್ಯ ಗೌಡ..
ಕಾವ್ಯಶ್ರೀ ಗೌಡ, ನವಾಜ್, ವಿನೋದ್, ಐಶ್ವರ್ಯ ಪಿಸ್ಸೇ ಹಾಗೂ ರೂಪೇಶ್ ರಾಜಣ್ಣ ಎಂಟ್ರಿ ಕೊಟ್ಟಿದ್ದಾರೆ. ಇವರಲ್ಲಿ ಯೂಟ್ಯೂಬ್ ನಲ್ಲಿ ಸಿನಿಮಾ ರಿವ್ಯೂ ಗಾಗಿ ಪಂಚಿಂಗ್ ಡೈಲಾಗ್ಸ್ ಹೇಳುತ್ತಿದ್ದ 19 ವರ್ಷದ ನವಾಜ್ ಬಿಗ್ ಬಾಸ್ ಗೆ ಬಂದಿದ್ದು ಎಲ್ಲರಿಗು ಅಚ್ಚರಿ ಮೂಡಿಸಿದೆ. ಸೋಷಿಯಲ್ ಮೀಡಿಯಾದಲ್ಲಿ ಜನರಿಗೆ ಹಲವು ರೀತಿಯಲ್ಲಿ ಮನರಂಜನೆ ನೀಡುತ್ತಿರುವ ಹಲವು ಸದಸ್ಯರಿದ್ದಾರೆ, ಸಮಾಜಕ್ಕೆ ಒಳ್ಳೆಯ ಕೆಲಸಗಳನ್ನು ಮಾಡಿ ಕೊಡುಗೆ ನೀಡಿರುವ ಸದಸ್ಯರು ಸಹ ಇದ್ದಾರೆ, ಆದರೆ ಅಂಥವರೆಲ್ಲರನ್ನು ಬಿಟ್ಟು ನವಾಜ್ ಅವರಿಗೆ ಇಷ್ಟು ದೊಡ್ಡ ರಿಯಾಲಿಟಿ ಶೋನಲ್ಲಿ ಭಾಗವಹಿಸುವ ಅವಕಾಶ ಕೊಟ್ಟಿರುವುದು ಹಲವರ ಶಾಕ್ ಗೆ ಕಾರಣವಾಗಿದೆ.

ಸಿನಿಮಾ ಪ್ರಚಾರಕ್ಕಾಗಿ ನಾಲ್ಕೈದು ಪಂಚಿಂಗ್ ಡೈಲಾಗ್ ಗಳನ್ನು ಹೊಡೆದರೆ, ಬಿಗ್ ಬಾಸ್ ಗೆ ಎಂಟ್ರಿ ಕೊಡಬಹುದಾ ಎನ್ನುವ ಪ್ರಶ್ನೆ ಸಹ ಶುರುವಾಗಿದೆ. ಇದೆಲ್ಲಾ ಎಷ್ಟೇ ನಡೆಯುತ್ತಿದ್ದರೂ, ನವಾಜ್ ಅವರಿಗೆ ಕೆಲವರು ಬೆಂಬಲ ಸಹ ನೀಡುತ್ತಿದ್ದಾರೆ. ಟೀಕೆ ಮಾಡುವ ಎಲ್ಲರಿಗೂ ಮನೆಯ ಒಳಗೆ ಇದ್ದುಕೊಂಡು, ತಕ್ಕ ಉತ್ತರ ನೀಡಿ ಎಂದು ಸಹ ಕೆಲವರು ಸಲಹೆ ನೀಡಿದ್ದಾರೆ. ಒಟ್ಟಿನಲ್ಲಿ ಬಿಗ್ ಬಾಸ್ ಮನೆಗೆ ನವಾಜ್ ಹೋಗಿರುವುದು ಸಾಕಷ್ಟು ಚರ್ಚೆಗೆ ಕಾರಣವಾಗಿದೆ.