ಒಂದು ಕಡೆ ಸರಿಯಾಗಿ ಬ್ಯಾಟಿಂಗ್ ಮಾಡಲು ಅವಕಾಶ ನೀಡದೆ ಇದ್ದರೂ ನಾಯಕನ ಬಗ್ಗೆ ದಿನೇಶ್ ಕಾರ್ತಿಕ್ ಹೇಳಿದ್ದೇನು ಗೊತ್ತೇ??

17

Get real time updates directly on you device, subscribe now.

ನಿನ್ನೆ ನಡೆದ ಭಾರತ ವರ್ಸಸ್ ಆಸ್ಟ್ರೇಲಿಯಾ ಪಂದ್ಯದಲ್ಲಿ ಮಳೆಯ ಕಾರಣ ಪಂದ್ಯ ಎರಡು ಗಂಟೆಗಳ ಕಾಲ ತಡವಾಯಿತು. ಹಾಗಾಗಿ ಪಂದ್ಯವು 8 ಓವರ್ ಗಳಲ್ಲಿ ಮ್ಯಾಚ್ ನಡೆಯಿತು. ನಿನ್ನೆಯ ಮ್ಯಾಚ್ ನಲ್ಲಿ ಅದ್ಭುತವಾದ ಪ್ರದರ್ಶನ ನೀಡಿದವರು ಕ್ಯಾಪ್ಟನ್ ರೋಹಿತ್ ಶರ್ಮಾ. ಕೇವಲ 20 ಬಾಲ್ ಗಳಲ್ಲಿ ರೋಹಿತ್ ಶರ್ಮಾ ಅವರು 46 ರನ್ ಗಳನ್ನು ಭಾರಿಸಿ, ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ಸಹ ಪಡೆದುಕೊಂಡರು. ರೋಹಿತ್ ಅವರ ಈ ಪ್ರದರ್ಶನಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ.

ಇನ್ನು ಪಂದ್ಯದ ಕೊನೆಯಲ್ಲಿ ದಿನೇಶ್ ಕಾರ್ತಿಕ್ ಅವರು ಬಂದು, ಎರಡು ಬಾಲ್ ಗಳಲ್ಲಿ ಒಂದು ಸಿಕ್ಸರ್ ಹಾಗೂ ಒಂದು ಬೌಂಡರಿ ಭಾರಿಸಿ ಪಂದ್ಯದ ಗೆಲುವಿಗೆ ಸಾಕ್ಷಿಯಾದರು. ಇದೆಲ್ಲ ನಡೆಯುತ್ತಿದ್ದರು ಸಹ, ದಿನೇಶ್ ಕಾರ್ತಿಕ್ ಅವರಿಗೆ ಸರಿಯಾಗಿ ಬ್ಯಾಟಿಂಗ್ ಅವಕಾಶ ಸರಿಯಾಗಿ ಕೊಡುತ್ತಿಲ್ಲ ಎನ್ನುವ ಮಾತು ಸಹ ಕೇಳಿಬರುತ್ತಿದೆ. ಇದರ ನಡುವೆ ನಿನ್ನೆ ಪಂದ್ಯ ಮುಗಿದ ಬಳಿಕ ದಿನೇಶ್ ಕಾರ್ತಿಕ್ ಅವರು ರೋಹಿತ್ ಶರ್ಮಾ ಅವರ ಬಗ್ಗೆ ಮಾತನಾಡಿ, ಅವರ ಆಟವಾಡಿದ ಬಗ್ಗೆ ಮೆಚ್ಚುಗೆಯ ಮಾತುಗಳನ್ನು ವ್ಯಕ್ತಪಡಿಸಿದ್ದಾರೆ.

“ರೋಹಿತ್ ಶರ್ಮಾ ಅವರ ಆಟ ಅದ್ಭುತವಾಗಿತ್ತು, ನಾನು ಕೇವಲ ಎರಡು ಎಸೆತಗಳನ್ನು ಮಾತ್ರ ಎದುರಿಸಿ, ನನ್ನ ಬೆಸ್ಟ್ ನೀಡಿ, ಒಳ್ಳೆಯ ಪ್ರಯತ್ನ ಮಾಡಿದೆ. ಹೊಸ ಬಾಲ್ ನಲ್ಲಿ, ವಿಶ್ವಮಟ್ಟದ ಬೌಲರ್ ಗಳನ್ನು ಎದುರಿಸುವುದು ಸುಲಭ ಅಲ್ಲ. ಈ ಕಾರಣದಿಂದಲೇ ರೋಹಿತ್ ಶರ್ಮಾ ಅವರು ವಿಶ್ವಶ್ರೇಷ್ಠ ಬ್ಯಾಟ್ಸ್ಮನ್ ಆಗಿ ಹೆಸರು ಮಾಡಿದ್ದಾರೆ. ವೇಗದ ಬೌಲರ್ ಗಳ ಬೌಲಿಂಗ್ ನಲ್ಲಿ ಈ ರೀತಿಯ ಅದ್ಭುತವಾದ ಬ್ಯಾಟಿಂಗ್ ಮಾಡುವುದು ರೋಹಿತ್ ಶರ್ಮಾ ಅವರಿಂದ ಮಾತ್ರ ಸಾಧ್ಯ, ಇದೇ ಕಾರಣದಿಂದಲೇ ಅವರು ಒಬ್ಬ ವಿಶೇಷವಾರ ಆಟಗಾರಾ ಆಗಿದ್ದಾರೆ..” ಎಂದಿದ್ದಾರೆ ದಿನೇಶ್ ಕಾರ್ತಿಕ್

Get real time updates directly on you device, subscribe now.