ಡಬಲ್ ಮಸಾಲಾ ಚಿಕನ್ ಧಮ್ ಬಿರಿಯಾನಿ: ಮನೆಯಲ್ಲಿಯೇ ಸುಲಭವಾಗಿ ಈ ರೀತಿ ಬಿರಿಯಾನಿ ಮಾಡಿ, ಎಲ್ಲರೂ ಜಾಸ್ತಿನೇ ತಿಂತಾರೆ. ಹೇಗೆ ಮಾಡಬೇಕು ಗೊತ್ತೇ??
ನಾನ್ ವೆಜ್ ಪ್ರಿಯರಿಗೆ ಚಿಕನ್ ಅಂದ್ರೆ ತುಂಬಾ ಇಷ್ಟ, ಚಿಕನ್ ಇಂದ ಹಲವು ವೆರೈಟಿ ರೆಸಿಪಿಗಳನ್ನು ಮಾಡುತ್ತಾರೆ. ಜನರು ಕೂಡ ಬಹಳ ಇಷ್ಟಪಟ್ಟು ಇದನ್ನು ತಿನ್ನುತ್ತಾರೆ, ಇಂದು ನಾವು ನಿಮಗೆ ರೆಸ್ಟೋರೆಂಟ್ ಶೈಲಿಯಲ್ಲಿ ಡಬಲ್ ಮಸಾಲ ಚಿಕನ್ ಬಿರಿಯಾನಿ ಮಾಡುವುದು ಹೇಗೆ ಎಂದು ತಿಳಿಸಿಕೊಡುತ್ತೇವೆ. ಈ ರೆಸಿಪಿಯನ್ನು ತಪ್ಪದೇ ಟ್ರೈ ಮಾಡಿ, ಎಲ್ಲರೂ ಬಹಳ ಸಂತೋಷದಿಂದ ತಿನ್ನುವುದು ಗ್ಯಾರಂಟಿ..
ಬೇಕಾಗುವ ಪದಾರ್ಥಗಳು :- ಚಿಕನ್, ಈರುಳ್ಳಿ, ಕೊತ್ತಂಬರಿ ಸೊಪ್ಪು, ಪುದೀನ ಸೊಪ್ಪು, ಕಪ್ಪು ಮೆಣಸು, ಜೀರಾ, ದಾಲ್ಚಿನ್ನಿ, ಲವಂಗ, ಏಲಕ್ಕಿ, ಶುಂಠಿ ಬೆಳ್ಳುಳ್ಳಿ ಪೇಸ್ಟ್, ಬಿರಿಯಾನಿ ಎಲೆ, ಮರಾಠಿ ಮೊಗ್ಗು, ಮೆಣಸಿನಕಾಯಿ, ಜೀರಿಗೆ ಪುಡಿ, ಧನಿಯಾ ಪುಡಿ, ಏಲಕ್ಕಿ ಪುಡಿ, ಉಪ್ಪು, ನಿಂಬೆ ರಸ, ಗರಂ ಮಸಾಲ, ಅರಿಶಿನ, ಮೊಸರು, ಎಣ್ಣೆ, ಬಾಸುಮತಿ ಅಕ್ಕಿ, ಫ್ರೆಶ್ ಕ್ರೀಮ್, ಹಸಿರು ಮೆಣಸಿನಕಾಯಿ, ತುಪ್ಪ, ನೀರು, ಕೇಸರಿ ಹಾಗೂ ಇನ್ನಿತರ ಪದಾರ್ಥಗಳು..
ತಯಾರಿಸುವ ವಿಧಾನ :- ಒಂದು ದೊಡ್ಡ ಬಟ್ಟಲು ತೆಗೆದುಕೊಂಡು ಅದಕ್ಕೆ ಜೀರಾ, 8 ಏಲಕ್ಕಿ ಪುಡಿ, ಸ್ವಲ್ಪ ಗರಂ ಮಸಾಲ, ಎಂಟು ಲವಂಗ, ಒಂದು ದಾಲ್ಚಿನ್ನಿ, ಒಂದು ಕಪ್ ಪುದೀನಾ, ಒಂದು ಕಪ್ ಕೊತ್ತಂಬರಿ ಸೊಪ್ಪು, ಒಂದು ಕಪ್ ಮೊಸರು, ಸ್ವಲ್ಪ ಉಪ್ಪು, ಸ್ವಲ್ಪ ಕತ್ತರಿಸಿದ ಮೆಣಸಿನಕಾಯಿ, ಜೀರಿಗೆ ಪುಡಿ, ಕೊತ್ತಂಬರಿ ಪುಡಿ, ಏಲಕ್ಕಿ ಪುಡಿ, ಸ್ವಲ್ಪ ಗರಂ ಮಸಾಲ, ಸ್ವಲ್ಪ ನಿಂಬೆ ರಸ ಸೇರಿಸಿ ಎಲ್ಲವನ್ನು ಚೆನ್ನಾಗಿ ಮಿಶ್ರಣ ಮಾಡಿ.
ನಂತರ ಅದಕ್ಕೆ ಫ್ರೆಶ್ ಕ್ರೀಮ್ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ, ನಂತರ ಇದೇ ಬೌಲ್ ಗೆ ಚಿಕನ್ ಹಾಕಿ ನಂತರ ಸ್ವಲ್ಪ ಎಣ್ಣೆ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ರಾತ್ರಿ ಫ್ರಿಡ್ಜ್ ನಲ್ಲಿ ಇಡಿ. ನಂತರ ಎರಡು ಕಪ್ ಬಾಸುಮತಿ ಅಕ್ಕಿಯನ್ನು ಚೆನ್ನಾಗಿ ತೊಳೆದು, ಒಂದು ಗಂಟೆಗಳ ಕಾಲ ಚೆನ್ನಾಗಿ ನೆನೆಸಿ ಇಡಿ. ನಂತರ ಸ್ಟವ್ ಮೇಲೆ ಒಂದು ಪಾತ್ರೆ ಇಟ್ಟು ಅದಕ್ಕೆ ನೀರು ಹಾಕಿ ಆ ನೀರಿನಲ್ಲಿ ಜೀರ, ಕಪ್ಪು ಏಲಕ್ಕಿ, ಏಲಕ್ಕಿ, ಲವಂಗ, ದಾಲ್ಚಿನ್ನಿ, ಒಂದು ಬಿರಿಯಾನಿ ಎಲೆ, ಸ್ವಲ್ಪ ಪುದೀನಾ ಮತ್ತು ಕೊತ್ತಂಬರಿ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ. ನಂತರ ಮೊದಲೇ ನೆನೆಸಿಟ್ಟ ಅಕ್ಕಿಯನ್ನು ಅದಕ್ಕೆ ಹಾಕಿ ಜೊತೆಗೆ ನಾಲ್ಕರಿಂದ ಐದು ಹಸಿಮೆಣಸಿನಕಾಯಿ ಹಾಕಿ ಶೇ.
70ರಷ್ಟು ಅಕ್ಕಿಯನ್ನು ಬೇಯಿಸಿ. ನಂತರ ರಾತ್ರಿ ನೆನೆಸಿ ಇಟ್ಟ ಚಿಕನ್ ತೆಗೆದುಕೊಂಡು ಅದನ್ನು ಸ್ಟವ್ ಮೇಲೆ ಇಟ್ಟು, 70%ಬೇಯಿಸಿದ ಅನ್ನವನ್ನು ಲೇಯರ್ ಲೇಯರ್ ಆಗಿ ಹಾಕಿ. ನಂತರ ಅದರ ಮೇಲೆ ಸ್ವಲ್ಪ ಕೊತ್ತಂಬರಿ ಸೊಪ್ಪು, ಸ್ವಲ್ಪ ಪುದೀನಾ, ಈರುಳ್ಳಿ, ಸ್ವಲ್ಪ ತುಪ್ಪ, ಒಂದಷ್ಟು ಬೆಣ್ಣೆ ಎಣ್ಣೆ, ಕೇಸರಿ ಹಾಲಿನಲ್ಲಿ ಹಾಕಿ ಸ್ವಲ್ಪ ನೀರು ಚಿಮುಕಿಸಿ ಪಾತ್ರೆಯನ್ನು ಮುಚ್ಚಿ. ಗೋಧಿ ಹಿಟ್ಟಿನ ಹಬೆಯಲ್ಲಿ ಹಾಕಿ ಗಟ್ಟಿಯಾಗಿ ಕುಕ್ ಆಗಲು ಬಿಡಿ, ಇದನ್ನು 15 ನಿಮಿಷ ಬೇಯಿಸಿ. ಬಳಿಕ ಸ್ಟವ್ ಆಫ್ ಮಾಡಿ ಹತ್ತು ನಿಮಿಷದ ನಂತರ ಹೊರತೆಗೆದು ಸರ್ವ್ ಮಾಡಿ. ಈಗ ಚಿಕರವಾದ ಡಬಲ್ ಮಸಾಲಾ ದಮ್ ಬಿರಿಯಾನಿ ಸಿದ್ಧವಾಗಿದೆ.