ಮತ್ತೆ ಹುಡುಗರ ಹೃದಯ ಕದ್ದ ಚೆಲುವೆ: ಡಾನ್ಸ್ ಮಾಡುತ್ತಾ ಶರ್ಟ್ ತೆಗೆದು ಶಾಕ್ ಕೊಟ್ಟ ನಟಿ ಶ್ವೇತಾ ಶ್ರೀವಾತ್ಸವ್. ಡಾನ್ಸ್ ಆಯಿತು ಫುಲ್ ವೈರಲ್.

37

Get real time updates directly on you device, subscribe now.

ಸ್ಯಾಂಡಲ್ ವುಡ್ ನ ಪ್ರತಿಭಾನ್ವಿತ ನಟಿ ಶ್ವೇತಾ ಶ್ರೀವಾತ್ಸವ್ ಅವರು ಸೋಷಿಯಲ್ ಮೀಡಿಯಾದಲ್ಲಿ ಬಹಳ ಆಕ್ಟಿವ್ ಆಗಿರುತ್ತಾರೆ. ಆಗಾಗ ತಮ್ಮ ಮಗಳ ಜೊತೆ ಮತ್ತು ಗಂಡನ ಜೊತೆ ಇರುವ ಕೆಲವು ಫೋಟೋಗಳನ್ನು ಇನ್ಸ್ಟಾಗ್ರಾಮ್ ನಲ್ಲಿ ಶೇರ್ ಮಾಡಿಕೊಳ್ಳುತ್ತಾರೆ ಶ್ವೇತಾ ಶ್ರೀವಾತ್ಸವ್. ನಟಿ ಶ್ವೇತಾ ಶ್ರೀವತ್ಸವ್ ಸಿನಿರಂಗಕ್ಕೆ ಎಂಟ್ರಿ ಕೊಡುವ ಮೊದಲು, ಥಿಯೇಟರ್ ಆರ್ಟಿಸ್ಟ್ ಆಗಿದ್ದರು. ಕೆಲವು ಸಣ್ಣ ಕಥೆಗಳಲ್ಲಿ ನಟಿಸಿ ನಂತರ ಟಿ.ಎನ್.ಸೀತಾರಾಮ್ ಅವರ ಮನ್ವಂತರ ಸೀರಿಯಲ್ ಮೂಲಕ ಕಿರುತೆರೆಗೆ ಎಂಟ್ರಿ ಕೊಟ್ಟರು. ನಂತರ 2012 ರಲ್ಲಿ ಸೈಬರ್ ಯುಗದೊಳ್ ಸಿನಿಮಾ ಮೂಲಕ ನಾಯಕಿಯಾಗಿ ಮೊದಲ ಸಿನಿಮಾಗೆ ಫಿಲ್ಮ್ ಫೇರ್ ಅವಾರ್ಡ್ ಪಡೆದರು, ಇವರಿಗೆ ಹೆಚ್ಚಿನ ಜನಪ್ರಿಯತೆ ತಂದುಕೊಟ್ಟಿದ್ದು, 2013 ರಲ್ಲಿ ತೆರೆಕಂಡ ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ ಸಿನಿಮಾ.

ನಂತರ 2014 ರಲ್ಲಿ ಲವ್ಲಿ ಸ್ಟಾರ್ ಪ್ರೇಂ ಅವರ ಜೊತೆ ಫೇರ್ ಅಂಡ್ ಲವ್ಲಿ ಸಿನಿಮಾದಲ್ಲಿ ನಟಿಸಿ, ಅದರಲ್ಲಿನ ಪಾತ್ರಕ್ಕೆ ಫಿಲ್ಮ್ ಫೇರ್ ಅವಾರ್ಡ್ ಪಡೆದರು. 2016 ರಲ್ಲಿ ಕಿರಗೂರಿನ ಗಯ್ಯಾಳಿಗಳು ಸಿನಿಮಾದಲ್ಲಿ ನಟಿಸಿದ ನಂತರ ಇವರಿಗೆ ಬೇಡಿಕೆ ಹೆಚ್ಚಾಯಿತು. ನಟಿ ಶ್ವೇತಾ ಸಿನಿಮಾಗಳಲ್ಲಿ ಹೆಚ್ಚಾಗಿ ನಟಿಸದೆ ಇದ್ದರು ದೊಡ್ಡ ಫ್ಯಾನ್ ಬೇಸ್ ಹೊಂದಿದ್ದಾರೆ. ಇನ್ಸ್ಟಾಗ್ರಾಮ್ ನಲ್ಲಿ ಶ್ವೇತಾ ಮತ್ತು ಅವರ ಮಗಳ ಫೋಟೋಗಳು ಬಹಳ ವೈರಲ್ ಆಗುತ್ತವೆ. ಶ್ವೇತಾ ಅವರ ಮಗಳು ಆಶ್ಮಿತಾ, ಈಗಾಗಲೇ ಪುಟ್ಟ ಸ್ಟಾರ್ ಎನ್ನಬಹುದು.

ಶ್ವೇತಾ ಅವರ ವೈಯಕ್ತಿಕ ಜೀವನದ ವಿಷಯಕ್ಕೆ ಬರುವುದಾದರೆ, ಅಮಿತ್ ಶ್ರೀವತ್ಸವ್ ಅವರೊಡನೆ ಶ್ವೇತಾ ಅವರು 2005 ರಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟರು. 2017ರಲ್ಲಿ ಇವರಿಗೆ ಮುದ್ದಾದ ಹೆಣ್ಣುಮಗು ಜನಿಸಿತು. ಶ್ವೇತಾ ಅವರ ಮಗಳು ಆಶ್ಮಿತಾ ಅವರಿಗೆ ಈಗಲೇ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಅಭಿಮಾನಿಗಳಿದ್ದಾರೆ. ಆಗಾಗ ಇನ್ಸ್ಟಾಗ್ರಾಮ್ ನಲ್ಲಿ ರೀಲ್ಸ್ ಸಹ ಮಾಡುವ ಶ್ವೇತಾ ಅವರು ಇತ್ತೀಚೆಗೆ ಒಂದು ಮ್ಯೂಸಿಕ್ ಗೆ ರೆಡ್ ಟಾಪ್ ಮತ್ತು ಟ್ರ್ಯಾಕ್ ಪ್ಯಾಂಟ್ ನಲ್ಲಿ ಡ್ಯಾನ್ಸ್ ಮಾಡಿದ್ದು, ಹುಚ್ಚೆದ್ದು ಕುಣಿದಿದ್ದಾರೆ, ಕೊನೆಗೆ ಟೀ ಶರ್ಟ್ ತೆಗೆದು ಸಹ ಡ್ಯಾನ್ಸ್ ಮಾಡಿದ್ದು, ಈ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಈ ವಿಡಿಯೋಗೆ hot mom, cool mom ಎಂದು ಕ್ಯಾಪ್ಶನ್ ಬರೆದಿದ್ದಾರೆ ಶ್ವೇತಾ. ಅಭಿಮಾನಿಗಳು ಸಹ ಇದೇ ರೀತಿ ಕಮೆಂಟ್ಸ್ ಬರೆಯುತ್ತಿದ್ದಾರೆ.

Get real time updates directly on you device, subscribe now.