ಕೊನೆಗೂ ಸಿಕ್ತು ಸಿಹಿ ಸುದ್ದಿ: ಸ್ವಲ್ಪ ಸಿಹಿ ಸ್ವಲ್ಪ ಕಹಿ. ಎಬಿಡಿ ಆರ್ಸಿಬಿ ಬರುತ್ತಿರುವ ಕುರಿತು ಮಹತ್ವದ ಅಪ್ಡೇಟ್. ಏನಾಗುತ್ತಿದೆ ಗೊತ್ತೇ??
ಐಪಿಎಲ್ ಪಂದ್ಯಗಳು ಎಂದರೆ ಕ್ರೇಜ್ ಎಷ್ಟರ ಮಟ್ಟಿಗೆ ಇರುತ್ತದೆ ಎಂದು ಎಲ್ಲರಿಗು ಗೊತ್ತಿದೆ. ಅದರಲ್ಲೂ ನಮ್ಮ ಆರ್.ಸಿ.ಬಿ ತಂಡಕ್ಕೆ ಅಭಿಮಾನಿಗಳು ಅತಿಹೆಚ್ಚು ಎಂದರೆ ತಪ್ಪಾಗುವುದಿಲ್ಲ. 2023ರ ಐಪಿಎಲ್ ನ ಹೊಸ ಸೀಸನ್ ಗೆ ಈಗಾಗಲೇ ತಯಾರಿಗಳು ಶುರುವಾಗಿದೆ, ಎಲ್ಲಾ ಫ್ರಾಂಚೈಸಿಗಳು ತಮ್ಮ ತಂಡವನ್ನು ಬಲಿಷ್ಠವಾಗಿ ಮಾಡಲು ಪ್ರಯತ್ನ ಹಾಗೂ ಹೊಸ ನಿರ್ಧಾರ ತೆಗೆದುಕೊಳ್ಳುತ್ತಿದ್ದಾರೆ. ಕೆಕೆಆರ್ ತಂಡ, ಪಂಜಾಬ್ ತಂಡ ಈಗಾಗಲೇ ಹೊಸ ಕೋಚ್ ಗಳನ್ನು ಆಯ್ಕೆ ಮಾಡಿಕೊಂಡಿದ್ದಾರೆ.
ಅದೇ ರೀತಿ ನಮ್ಮ ಆರ್.ಸಿ.ಬಿ ತಂಡ ಸಹ ಹೊಸ ಕೋಚ್ ಅನ್ನು ಆಯ್ಕೆಮಾಡಿಕೊಂಡಿದ್ದು, ಅವರು ಮತ್ಯಾರು ಅಲ್ಲ, ಎಬಿಡಿವಿಲಿಯರ್ಸ್. ಆರ್.ಸಿ.ಬಿ ಆಪತ್ಬಾಂಧವ ಎಂದೇ ಎಲ್ಲರ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದಿರುವ ಎಬಿಡಿ ಅವರು ಆರ್.ಸಿ.ಬಿ ತಂಡಕ್ಕೆ ವಾಪಸ್ ಬರುವುದು ಪಕ್ಕಾ ಕನ್ಫರ್ಮ್ ಆಗಿದೆ. ಈ ಬಗ್ಗೆ ಎಬಿಡಿ ಅವರು ಸಹ ಅಧಿಕೃತವಾಗಿ ಹೇಳಿದ್ದಾರೆ, ಇತ್ತೀಚೆಗೆ ಎಬಿಡಿ ಅವರು 2023ರ ಐಪಿಎಲ್ ನಲ್ಲಿ ನಾನು ಆರ್.ಸಿ.ಬಿ ತಂಡದ ಪರವಾಗಿ ಕಂಬ್ಯಾಕ್ ಮಾಡುತ್ತೇನೆ, ಮತ್ತೊಮ್ಮೆ ಬೆಂಗಳೂರಿಗೆ ಬರುತ್ತೇನೆ ಎಂದು ಹೇಳಿದ್ದರು. ಇದೀಗ ಅವರು ಕೋಚ್ ಆಗಿ ಬರುವುದು ಪಕ್ಕಾ ಎನ್ನಲಾಗುತ್ತಿದೆ.
ಆರ್.ಸಿ.ಬಿ ಅಭಿಮಾನಿಗಳಿಗೆ ಇದಕ್ಕಿಂತ ಮತ್ತೊಂದು ಖುಷಿ ಇಲ್ಲ, ಆರ್.ಐ.ಬಿ ತಂಡವನ್ನು ಅಭಿಮಾನಿಗಳು ಎಷ್ಟು ಇಷ್ಟಪಡುತ್ತಾರೋ, ಎಬಿಡಿ ಅವರನ್ನು ಸಹ ಅಷ್ಟೇ ಇಷ್ಟಪಡುತ್ತಾರೆ. ಆರ್.ಸಿ.ಬಿ ತಂಡಕ್ಕೆ ಮತ್ತೊಂದು ಗುಡ್ ನ್ಯೂಸ್ ಸಹ ಸಿಕ್ಕಿದ್ದು, 2023ರ ಐಪಿಎಲ್ ನಲ್ಲಿ ಹೋಮ್ ಅಂಡ್ ಅವೇ ರೀತಿಯಲ್ಲಿ ಪಂದ್ಯಗಳು ನಡೆಯಲಿದ್ದು, ಬೆಂಗಳೂರಿನಲ್ಲಿ ಆರ್.ಸಿ.ಬಿ ತಂಡದ 7 ಪಂದ್ಯಗಳು ನಡೆಯುವುದು ಪಕ್ಕಾ ಆಗಿದೆ, ಚಿನ್ನಸ್ವಾಮಿ ಸ್ಟೇಡಿಯಂ ನಲ್ಲಿ ಮತ್ಯೆ ಆರ್.ಸಿ.ಬಿ ಪಂದ್ಯ ನಡೆಯಲಿದ್ದು, ನಮ್ಮ ಬೆಂಗಳೂರಿನಲ್ಲಿ ಆರ್.ಸಿ.ಬಿ ಪಂದ್ಯವನ್ನು ನೋಡುವ ಮಜವೇ ಬೇರೆ ಎನ್ನುತ್ತಾರೆ ಅಭಿಮಾನಿಗಳು.