ಸ್ಲೀವ್ ಲೆಸ್ ಸೀರೆಯಲ್ಲಿ ಪಡ್ಡೆ ಹುಡುಗ ಹೃದಯ ಕದ್ದ ರಮ್ಯಾ ಕೃಷ್ಣ; ಒಂದೊಂದು ಫೋಟೋ ನೋಡಿ, ಮೈಂಡ್ ಬ್ಲಾಕ್. ಹೇಗಿದೆ ಗೊತ್ತೇ ಫೋಟೋಸ್??
ನಟಿ ರಮ್ಯಾಕೃಷ್ಣ ಅವರಿಗೆ ವಯಸ್ಸಾಗಿದ್ದರು ಸಹ ತಮ್ಮ ಸೌಂದರ್ಯದಿಂದ ಅಭಿಮಾನಿಗಳು ಫಿದಾ ಆಗುವ ಹಾಗೆ ಮಾಡುತ್ತಿದ್ದಾರೆ. ಎಲ್ಲಾ ಸ್ಟಾರ್ ಹೀರೋಗಳ ಜೊತೆಗೆ ನಟಿಸಿ ಹೆಸರು ಮಾಡಿದ್ದ ರಮ್ಯಾಕೃಷ್ಣನ್ ಅವರು ಕೆರಿಯರ್ ಪೀಕ್ ನಲ್ಲಿ ಇರುವಾಗಲೇ ನಿರ್ದೇಶಕ ಕೃಷ್ಣವಂಶಿ ಅವರೊಡನೆ ಮದುವೆಯಾದರು. ಮದುವೆ ಬಳಿಕ ಚಿತ್ರರಂಗದಿಂದ ಸ್ವಲ್ಪ ಗ್ಯಾಪ್ ತೆಗೆದುಕೊಂಡರು, ಬಳಿಕ ಖ್ಯಾತ ನಿರ್ದೇಶಕ ರಾಜಮೌಳಿ ಅವರು ನಿರ್ದೇಶನ ಮಾಡಿದ ಬಾಹುಬಲಿ ಸಿನಿಮಾ ಮೂಲಕ ರೀಎಂಟ್ರಿ ನೀಡಿದರು. ಶಿವಗಾಮಿ ಪಾತ್ರದಲ್ಲಿ ತಮಗಿಂತ ಚೆನ್ನಾಗಿ ಅಭಿನಯಿಸಲು ಬೇರೆ ಯಾರಿಂದಲು ಸಾಧ್ಯವಿಲ್ಲ ಎಂದು ನಿರೂಪಿಸಿದರು. ಸಿನಿಮಾ, ವೆಬ್ ಸೀರೀಸ್, ಟಿವಿ ಶೋಗಳಲ್ಲಿ ಬಹಳ ಬ್ಯುಸಿ ಆಗಿದ್ದಾರೆ.
ಇತ್ತೀಚೆಗೆ ರಮ್ಯಾ ಕೃಷ್ಣನ್ ಅವರು ಲೈಗರ್ ಸಿನಿಮಾದಲ್ಲಿ ನಟಿಸಿದರು, ಈ ಸಿನಿಮಾವನ್ನು ಡೈನಾಮಿಕ್ ಡೈರೆಕ್ಟರ್ ಪೂರಿ ಜಗನ್ನಾಧ್ ನಿರ್ದೇಶನ ಮಾಡಿದರು, ವಿಜಯ್ ದೇವರಕೊಂಡ ಅವರ ಅಮ್ಮನ ಪಾತ್ರದಲ್ಲಿ, ಮಾಸ್ ತಾಯಿಯಾಗಿ ಕಾಣಿಸಿಕೊಂಡರು ರಮ್ಯಾ ಕೃಷ್ಣನ್. ಈ ಸಿನಿಮಾಗೆ 1.5ಕೋಟಿ ಸಂಭಾವನೆ ತೆಗೆದುಕೊಂಡಿದ್ದಾರಂತೆ. ರಮ್ಯಾ ಕೃಷ್ಣ ಅವರಂತಹ ನಟಿಗೆ ಇಷ್ಟು ಸಂಭಾವನೇ ಕೊಡಬೇಕು ಎನ್ನುತ್ತಿದ್ದಾರೆ ನೆಟ್ಟಿಗರು. ಇದೀಗ ರಮ್ಯಾ ಕೃಷ್ಣ ಅವರು ಡ್ಯಾನ್ಸ್ ಶೋ ಒಂದಕ್ಕೆ ಜಡ್ಜ್ ಆಗಿ ಬಂದಿರುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಈ ಕಾರ್ಯಕ್ರಮದಲ್ಲಿ ಬಹಳ ಸುಂದರವಾದ ಸೀರೆಗಳನ್ನು ಧರಿಸಿ ಕಾಣಿಸಿಕೊಳ್ಳುತ್ತಾರೆ ರಮ್ಯಾ, ಹಾಗು ವಿಭಿನ್ನವಾದ ಗೆಟಪ್ ಗಳಲ್ಲಿ ಸಹ ಕಾಣಿಸಿಕೊಳ್ಳುತ್ತಾರೆ.
ಇತ್ತೀಚೆಗೆ ಈ ಶೋಗಾಗಿಯೇ ಹೊಸ ಸೀರೆಯ ಲುಕ್ ನಲ್ಲಿ ಫೋಟೋಶೂಟ್ ಮಾಡಿಸಿದ್ದಾರೆ ರಮ್ಯಾ. ಕೆಂಪು ಬಣ್ಣದ ಟ್ರಾನ್ಸ್ಪರೆಂಟ್ ಸೀರೆಯಲ್ಲಿ ಕಾಣಿಸಿಕೊಂಡಿದ್ದಾರೆ. ಸ್ಲೀವ್ ಲೆಸ್ ಬ್ಲೌಸ್ ಧರಿಸಿ ಗ್ಲಾಮರಸ್ ಆಗಿ ಕಾಣಿಸಿಕೊಂಡಿದ್ದಾರೆ.. ಹೀಗೆ ತಮ್ಮ ಚೆಲುವಿನಿಂದ 51ರ ಹರೆಯದಲ್ಲೂ ಹುಡುಗರು ಫಿದಾ ಆಗುವ ಹಾಗೆ ಮಾಡುತ್ತಿದ್ದಾರೆ ನಟಿ ರಮ್ಯಾ ಕೃಷ್ಣ. ಆಗ, ಕೆ.ರಾಘವೇಂದ್ರ ರಾವ್ ಅವರ ಸಿನಿಮಾಗಳಲ್ಲಿ ಹೆಚ್ಚಾಗಿ ನಟಿಸುತ್ತಿದ್ದರು ರಮ್ಯಾಕೃಷ್ಣ, ಆಗಿನ ಕಾಲದ ಯುವಕರಿಗೆ ಕನಸಿನ ಹುಡುಗಿ ಆಗಿದ್ದರು. ನಂತರ ಅಕ್ಕ ಅತ್ತಿಗೆಯ ಮುಖ್ಯ ಪಾತ್ರಗಳಲ್ಲಿ ಕೆಲವು ಸಿನಿಮಾಗಳಲ್ಲಿ ಕಾಣಿಸಿಕೊಂಡರು. ಬಳಿಕ ಬ್ರೇಕ್ ತೆಗೆದುಕೊಂಡು ಶಿವಗಾಮಿಯಾಗಿ ಮಿಂಚಿದ ರಮ್ಯಾ ಕೃಷ್ಣ ಅವರು ಇಂದಿಗು ಸಹ ಅದೇ ಬೇಡಿಕೆ ಉಳಿಸಿಕೊಂಡಿದ್ದಾರೆ.