ಮಾಲಾಶ್ರೀ ಮಗಳ ತರ ಶ್ರುತಿ ಮಗಳು ಹೀರೋಯಿನ್ ಆಗ್ತಾರಾ?? ಶ್ರುತಿ ಮಗಳು ಮೊದಲ ಬಾರಿಗೆ ಹೇಳಿದ್ದೇನು ಗೊತ್ತೇ??
ಇತ್ತೀಚೆಗೆ ಕನ್ನಡದ ಕನಸಿನ ರಾಣಿ ಮಾಲಾಶ್ರೀ ಅವರ ಮಗಳು ರಾಧನಾ ರಾಮ್ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಅದರಲ್ಲೂ ಮೊದಲ ಸಿನಿಮಾದಲ್ಲೇ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ ರಾಧನಾ. 90ರ ದಶಕದ ಸ್ಟಾರ್ ಹೀರೋಯಿನ್ ಗಳ ಮಕ್ಕಳು ಈಗ ಚಿತ್ರರಂಗಕ್ಕೆ ನಾಯಕಿಯರಾಗಿ ಎಂಟ್ರಿ ಕೊಡುತ್ತಿದ್ದಾರೆ. ಇವರ ಬಳಿಕ ಇದೀಗ ನಟಿ ಶ್ರುತಿ ಅವರ ಮಗಳು ಗೌರಿ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಾರಾ ಎನ್ನುವ ಚರ್ಚೆ ಸಹ ಶುರುವಾಗಿದ್ದು, ಅದಕ್ಕೆ ಖುದ್ದು ನಟಿ ಶ್ರುತಿ ಅವರ ಮಗಳೇ ಉತ್ತರ ಕೊಟ್ಟಿದ್ದಾರೆ.
ಶ್ರುತಿ ಅವರ ಮಗಳು ಗೌರಿ, ಶರಣ್ ಅವರ ಗುರು ಶಿಷ್ಯರು ಸಿನಿಮಾ ಸೆಲೆಬ್ರಿಟಿ ಶೋ ನೋಡಲು ಬಂದಿದ್ದರು, ಆಗ ಅವರಿಗೆ ನೀವು ಚಿತ್ರರಂಗಕ್ಕೆ ಬರೋದು ಯಾವಾಗ ಎಂದು ಪ್ರಶ್ನೆ ಕೇಳಲಾಗಿದ್ದು, ಅದಕ್ಕೆ ಉತ್ತರ ಕೊಟ್ಟಿದ್ದಾರೆ, “ಸದ್ಯಕ್ಕಂತೂ ಪ್ಲಾನ್ ಇಲ್ಲ.. ಅವಕಾಶ ಸಿಕ್ಕರೆ ನಾನು ಮಾಡಲ್ಲ ಅಂತ ಅಂತೂ ಖಂಡಿತ ಹೇಳಲ್ಲ.. ನಮ್ಮ ಇಡೀ ಕುಟುಂಬ ಕಲೆ ಇಂದಲೇ ಬೆಳೆದಿದೆ. ಸಧ್ಯಕ್ಕೆ ಪ್ಲಾನ್ ಇಲ್ಲ. ನೋಡೋಣ ..” ಎಂದಿದ್ದಾರೆ ಗೌರಿ. ಖಂಡಿತ ಬಂದೆ ಬರುತ್ತೀರಾ ಎಂದು ಮತ್ತೊಂದು ಪ್ರಶ್ನೆ ಕೇಳಿದ್ದು, ಅದಕ್ಕೆ ಉತ್ತರಿಸಿ, “ಸಂಗೀತದಲ್ಲಿ ಖಂಡಿತ ಬರ್ತೀನಿ.. ಸಿಂಗರ್ ಆಗಿ ಬರ್ತೀನಿ.. ಆಕ್ಟಿಂಗ್ ನೋಡೋಣ..ನಾನು ಪ್ರಿಪರೇಷನ್ ಸ್ಟಾರ್ಟ್ ಮಾಡಿಲ್ಲ.. ಸಂಗೀತ ಮಾಡ್ತಾ ಇದ್ದೀನಿ. ” ಎಂದಿದ್ದಾರೆ ಗೌರಿ..

ಶ್ರುತಿ ಅವರ ಮಗಳು ಗೌರಿ ಈಗಾಗಲೇ ಗಾಯನದಲ್ಲಿ ಗುರುತಿಸಿಕೊಂಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿರುವ ಗೌರಿ ಅವರು, ಹೊಸ ಫೋಟೋಶೂಟ್ ಗಳನ್ನು ಮಾಡಿಸಿ ಅವುಗಳನ್ನು ಶೇರ್ ಮಾಡುತ್ತಾರೆ. ಅಷ್ಟೇ ಅಲ್ಲದೆ, ಹಾಡುಗಳನ್ನು ಹಾಡಿ ಅವುಗಳನ್ನು ಇನ್ಸ್ಟಾಗ್ರಾಮ್ ನಲ್ಲಿ ಶೇರ್ ಮಾಡುತ್ತಾರೆ. ಗೌರಿ ಅವರು ಹಾಡುತ್ತಿರುವುದನ್ನು ನೋಡಿಬ ಅನೇಕರು ಕಮೆಂಟ್ಸ್ ಮೂಲಕ ಮೆಚ್ಚುಗೆ ಸೂಚಿಸಿದ್ದಾರೆ. ಇದೀಗ ಗೌರಿ ಅವರು ಯಾವಾಗ ಚಿತ್ರರಂಗಕ್ಕೆ ಬರುತ್ತಾರೆ ಎಂದು ಕಾದು ನೋಡಬೇಕಿದೆ.