ರಿಷಬ್ ಪಂತ್ ಫಾರ್ಮ್ ನಲ್ಲಿ ಇಲ್ಲದೆ ಇದ್ದರೂ ಕೂಡ ಪಂತ್ ಅನ್ನು ನಂಬಿ ದ್ರಾವಿಡ್ ಕೈಬಿಟ್ಟದ್ದು ಯಾರನ್ನು ಗೊತ್ತೇ? ಮತ್ತೆ ನಡೆಯಿತೇ ಮೋಸ.

39

Get real time updates directly on you device, subscribe now.

ಅಕ್ಟೋಬರ್ 11 ರಿಂದ ಟಿ20 ವಿಶ್ವಕಪ್ ಪಂದ್ಯಗಳು ಶುರುವಾಗಲಿದೆ. ಇದಕ್ಕಾಗಿ ಈಗಾಗಲೇ ಬಿಸಿಸಿಐ 15 ಪ್ಲೇಯರ್ ಗಳು ಹಾಗೂ 4 ಸ್ಟ್ಯಾಂಡ್ ಬೈ ಆಟಗಾರರನ್ನು ಆಯ್ಕೆ ಮಾಡಿ, ತಂಡವನ್ನು ಪ್ರಕಟಿಸಿದೆ. ಈಗ ಭಾರತ ತಂಡಕ್ಕೆ ಆಯ್ಕೆ ಆಗಿರುವ ಕೆಲವು ಆಟಗಾರರ ಮೇಲೆ ಅಸಮಾಧಾನ ವ್ಯಕ್ತವಾಗುತ್ತಿದೆ. ಕ್ರಿಕೆಟ್ ಅಭಿಮಾನಿಗಳು ಹಾಗೂ ಸೋಷಿಯಲ್ ಮೀಡಿಯಾದಲ್ಲಿ ಕೆಲವು ಅಭಿಮಾನಿಗಳು ಟಿ20 ವಿಶ್ವಕಪ್ ಗೆ ಅರ್ಹತೆ ಇಲ್ಲದ ಆಟಗಾರರನ್ನು ಆಯ್ಕೆ ಮಾಡಲಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಅದರಲ್ಲೂ ಹೆಚ್ಚು ಚರ್ಚೆ ಆಗುತ್ತಿರುವುದು ರಿಷಬ್ ಪಂತ್ ಅವರನ್ನು ಆಯ್ಕೆ ಮಾಡಿರುವ ಬಗ್ಗೆ. ರಿಷಬ್ ಪಂತ್ ಅವರು ಈಗ ಕಳಪೆ ಫಾರ್ಮ್ ನಲ್ಲಿದ್ದಾರೆ ಏಷ್ಯಾಕಪ್ ಪಂದ್ಯಗಳಲ್ಲಿ ರಿಷಬ್ ಪಂತ್ ಅವರು ಉತ್ತಮವಾದ ಪ್ರದರ್ಶನ ನೀಡಿಲ್ಲ. ಹಾಗಿದ್ದರು ಸಹ ರಿಷಬ್ ಪಂತ್ ಅವರನ್ನು ವಿಶ್ವಕಪ್ ತಂಡಕ್ಕೆ ಆಯ್ಕೆ ಮಾಡಿ, ಉತ್ತಮ ಫಾರ್ಮ್ ನಲ್ಪಿರುವ ಸಂಜು ಸ್ಯಾಮ್ಸನ್ ಅವರನ್ನು ಆಯ್ಕೆ ಮಾಡಿರುವುದಕ್ಕೆ ಅಭಿಮಾನಿ ವಲಯದಲ್ಲಿ ಆಕ್ರೋಶ ವ್ಯಕ್ತವಾಗಿದ್ದು ಪಂತ್ ಹಾಗೂ ಸಂಜು ಸ್ಯಾಮ್ಸನ್ ಅವರ ಸ್ಕೋರ್ ಗಳನ್ನು ಕಂಪೆರ್ ಮಾಡಿ ಸಂಜು ಅವರನ್ನು ಯಾಕೆ ಆಯ್ಕೆ ಮಾಡಿಲ್ಲ ಎಂದು ರಾಹುಲ್ ದ್ರಾವಿಡ್ ಅವರನ್ನು ಪ್ರಶ್ನೆ ಮಾಡಲಾಗುತ್ತಿದೆ.

2022ರ ಪಂದ್ಯದಲ್ಲಿ ಸಂಜು ಸ್ಯಾಮ್ಸನ್ ಅವರು 17 ಪಂದ್ಯಗಳಲ್ಲಿ 458 ರನ್ ಗಳಿಸಿದರು, ಸರಾಸರಿ 28.63 ಸ್ಟ್ರೈಕ್ ರೇಟ್ 146.79 ಆಗಿತ್ತು. ಇತ್ತ ಪಂತ್ ಅವರು 14 ಪಂದ್ಯಗಳಲ್ಲಿ 340 ರನ್ ಗಳಿಸಿದರು, ಸರಾಸರಿ 30.91, ಸ್ಟ್ರೈಕ್ ರೇಟ್ 151.78ಆಗಿತ್ತು. 2021ರ ಐಪಿಎಲ್ ನಲ್ಲಿ, ಸಂಜು ಸ್ಯಾಮ್ಸನ್ ಅವರು 14 ಪಂದ್ಯಗಳಲ್ಲಿ 484 ರನ್ ಗಳಿಸಿದರು, ಸರಾಸರಿ 40.33, ಸ್ಟ್ರೈಕ್ ರೇಟ್ 136.72. ಪಂತ್ ಅವರು 16 ಪಂದ್ಯಗಳಲ್ಲಿ 416 ರನ್ ಗಳಿಸಿದರು, ಸರಾಸರಿ 34.91, ಸ್ಟ್ರೈಕ್ ರೇಟ್ 128.52 ಇತ್ತು. ಇದೆಲ್ಲವನ್ನು ಹೋಲಿಕೆ ಮಾಡಿ ನೋಡಿದರೆ ಸಂಜು ಸ್ಯಾಮ್ಸನ್ ಉತ್ತಮರಾಗಿದ್ದಾರೆ, ಐಪಿಎಲ್ ಮಾತ್ರವಲ್ಲದೆ, ಟಿ20 ವಿಶ್ವಕಪ್ ನಲ್ಲಿ ಸಹ ಸಂಜು ಸ್ಯಾಮ್ಸನ್ ಉತ್ತಮರಾಗಿದ್ದಾರೆ.. ರಿಷಬ್ ಪಂತ್ ಅವರನ್ನು ಆಯ್ಕೆ ಮಾಡಿದ್ದು ಯಾಕೆ ಎಂದು ಅರ್ಥವಾಗುತ್ತಿಲ್ಲ ಎನ್ನುತ್ತಿದ್ದಾರೆ ಅಭಿಮಾನಿಗಳು.

Get real time updates directly on you device, subscribe now.