ಅಸಲಿಗೆ ಕನ್ನಡ ತೆಲುಗು ಬಿಟ್ಟು ರಶ್ಮಿಕಾ ಬಾಲಿವುಡ್ ಹೋಗಲು ಕಾರಣ ಏನಂತೆ ಗೊತ್ತೇ?? ಅಸಲಿ ಕಾರಣ ನೀಡಿ ಹೇಳಿದ್ದೇನು ಗೊತ್ತೇ??
ನಟಿ ರಶ್ಮಿಕಾ ಮಂದಣ್ಣ ಈಗ ನ್ಯಾಷನಲ್ ಕ್ರಶ್ ಎಂದು ಹೆಸರು ಮಾಡಿದ್ದಾರೆ. ರಶ್ಮಿಕಾ ಅವರು ಕನ್ನಡ ಚಿತ್ರರಂಗದ ಮೂಲಕ ನಟನೆ ಶುರು ಮಾಡಿದರು, ಕಿರಿಕ್ ಪಾರ್ಟಿ ಮೂಲಕ ಸಿನಿಮಾ ಫೇಮಸ್ ಆದ ನಂತರ ತೆಲುಗಿನಲ್ಲಿ ನಟಿಸುವ ಅವಕಾಶಗಳನ್ನು ಪಡೆದುಕೊಂಡರು. ತೆಲುಗಿನಲ್ಲಿ ಸ್ಟಾರ್ ನಟರ ಜೊತೆಗೆ ಅಭಿನಯಿಸಿ ರಶ್ಮಿಕಾ ಸಹ ಸ್ಟಾರ್ ಹೀರೋಯಿನ್ ಆದರು, ಪ್ರಸ್ತುತ ರಶ್ಮಿಕಾ ಅವರು ಬಾಲಿವುಡ್ ನಲ್ಲಿ ಬ್ಯುಸಿ ಆಗಿದ್ದಾರೆ.
ಬಾಲಿವುಡ್ ನಲ್ಲಿ ರಶ್ಮಿಕಾ ಅವರಿಗೆ ಸಾಲು ಸಾಲು ಸಿನಿಮಾಗಳಲ್ಲಿ ನಟಿಸುವ ಅವಕಾಶ ಸಿಗುತ್ತಿದೆ. ಪ್ರಸ್ತುತ ರಶ್ಮಿಕಾ ಅವರು ಬಾಲಿವುಡ್ ಗೆ ಎಂಟ್ರಿ ಕೊಟ್ಟಿದ್ದು ಯಾಕೆ ಎನ್ನುವ ಪ್ರಶ್ನೆ ಸಹ ಕೆಲವರಲ್ಲಿ ಮೂಡಿದ್ದು, ಸ್ವತಃ ರಶ್ಮಿಕಾ ಅವರೇ ಈ ಪ್ರಶ್ನೆಗೆ ಉತ್ತರ ಕೊಟ್ಟಿದ್ದಾರೆ. ಪುಷ್ಪ ಸಿನಿಮಾ ಎಷ್ಟು ದೊಡ್ಡ ಮಟ್ಟದಲ್ಲಿ ಹಿಟ್ ಆಯಿತು ಎಂದು ಎಲ್ಲರಿಗೂ ಗೊತ್ತಿದೆ. ಪುಷ್ಪ ಸಿನಿಮಾ ಇಂದ ರಶ್ಮಿಕಾ ಅವರಿಗೆ ಬಾಲಿವುಡ್ ನಲ್ಲಿ ಸಹ ಬೇಡಿಕೆ ಶುರುವಾಯಿತು. ಪುಷ್ಪ ಸಿನಿಮಾ ತಮಿಳು ಚಿತ್ರರಂಗದಲ್ಲಿ ಸಹ ರಶ್ಮಿಕಾ ಅವರಿಗೆ ಬಿಗ್ ಚಾನ್ಸ್ ಸಿಕ್ಕಿದೆ. ಬಾಲಿವುಡ್ ಗೆ ಈಗಾಗಲೇ ದಕ್ಷಿಣ ಭಾರತ ಚಿತ್ರರಂಗದ ಹಲವು ನಟಿಯರು ಎಂಟ್ರಿ ಕೊಟ್ಟಿದ್ದು, ಅವರಲ್ಲಿ ಎಲ್ಲರೂ ಹಿಟ್ ಲಿಸ್ಟ್ ಗೆ ಸೇರಿಲ್ಲ.
ಆದರೆ ರಶ್ಮಿಕಾ ಮಂದಣ್ಣ, ಬಾಲಿವುಡ್ ನಲ್ಲು ಸಕ್ಸಸ್ ಕಾಣುತ್ತಿದ್ದಾರೆ,. ಮೊದಲಿಗೆ ಯೋ ಯೋ ಹನಿಸಿಂಗ್ ಅವರ ಮ್ಯೂಸಿಕ್ ಆಲ್ಬಮ್ ನಲ್ಲಿ ಕಾಣಿಸಿಕೊಂಡ ರಶ್ಮಿಕಾ, ನಂತರ ಗುಡ್ ಬೈ ಹಾಗೂ ಮಿಷನ್ ಮಜ್ನು ಸಿನಿಮಾಗಳಲ್ಲಿ ನಟಿಸಿದ್ದಾರೆ, ರಣಬೀರ್ ಕಪೂರ್ ಅವರ ಅನಿಮಲ್ ಸಿನಿಮಾದಲ್ಲಿ ನಟಿಸುವ ಅವಕಾಶ ಸಹ ಪಡೆದುಕೊಂಡಿದ್ದಾರೆ. ಈಗ ರಶ್ಮಿಕಾ ಅವರು ತಾವು ಬಾಲಿವುಡ್ ಗೆ ಎಂಟ್ರಿ ಕೊಟ್ಟಿದ್ದು ಯಾಕೆ ಎನ್ನುವ ಪ್ರಶ್ನೆಗೆ ಉತ್ತರ ಕೊಟ್ಟಿದ್ದಾರೆ, “ಹಿಂದಿ ಸಿನಿಮಾಗಳಲ್ಲಿ ನಟಿಸಲು ಮುಖ್ಯ ಕಾರಣ ನನ್ನ ಅಭಿಮಾನಿಗಳು, ಬಾಲಿವುಡ್ ಗೆ ಬನ್ನಿ ಹಿಂದಿಯಲ್ಲಿ ಸಿನಿಮಾ ಮಾಡಿ, ಹಿಂದಿಯಲ್ಲಿ ನಿಮ್ಮನ್ನು ನೋಡಲು ಕಾಯುತ್ತಿದ್ದೇವೆ ಎನ್ನುತ್ತಿದ್ದರು. ಆ ಕಾರಣದಿಂದ ಬಾಲಿವುಡ್ ಗೆ ಬಂದೆ, ಪುಷ್ಪ ಸಿನಿಮಾ ಸಕ್ಸಸ್ ಬಾಲಿವುಡ್ ನಲ್ಲಿ ನಟಿಸಲು ಇನ್ನಷ್ಟು ಪ್ರೇರಣೆ ನೀಡಿತು..” ಎಂದು ಹೇಳಿದ್ದಾರೆ ನಟಿ ರಶ್ಮಿಕಾ.