ಯಾರಿಗೂ ತಿಳಿಯದಂತೆ ಈ ಹುಡುಗಿಯ ಬರ್ತಡೇ ಮಾಡಿದ ದರ್ಶನ್. ಯಾಕೆ ಗೊತ್ತಾ? ಯಾರು ಈ ಹುಡುಗಿ??
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಒಳ್ಳೆಯತನದ ಬಗ್ಗೆ ಎಷ್ಟು ಹೇಳಿದರು ಕಡಿಮೆಯೇ, ಸದಾ ಸರಳವಾಗಿ ಅಭಿಮಾನಿಗಳಿಗೆ ಬಹಳ ಪ್ರೀತಿ ನೀಡುತ್ತಾ ಇರುವವರು ನಟ ದರ್ಶನ್. ಸಿನಿಮಾ, ಶೂಟಿಂಗ್ ಎಂದು ಯಾವುದೇ ಕೆಲಸದಲ್ಲಿ ಬ್ಯುಸಿ ಇದ್ದರು ಹೊರಗಡೆ ಹೋದಾಗ ಅಭಿಮಾನಿಗಳು ಸಿಕ್ಕರೆ ಬಹಳ ಪ್ರೀತಿಯಿಂದ ಗೌರವದಿಂದ ಮಾತನಾಡಿಸುತ್ತಾರೆ. ಅದರಲ್ಲೂ ಹೆಣ್ಣುಮಕ್ಕಳಿಗೆ ದರ್ಶನ್ ಅವರು ಯಾವ ರೀತಿ ಗೌರವ ಕೊಡುತ್ತಾರೆ ಎಂದು ಪ್ರತ್ಯೇಕವಾಗಿ ಹೇಳಬೇಕಿಲ್ಲ, ಅದು ಎಲ್ಲರಿಗೂ ಗೊತ್ತಿದೆ.
ದರ್ಶನ್ ಅವರು ಇತ್ತೀಚೆಗೆ ಸೈಮಾ ಅವಾರ್ಡ್ಸ್ ಕಾರ್ಯಕ್ರಮ ಅಟೆಂಡ್ ಮಾಡಿದರು. ಅದಾದ ಬಳಿಕ ದರ್ಶನ್ ಅವರು ಥಾಯ್ಲೆಂಡ್ ಗೆ ಸ್ನೇಹಿತರ ಜೊತೆಗೆ ಹೋಗಿ ಎಂಜಾಯ್ ಮಾಡುತ್ತಿರುವ ಕೆಲವು ಫೋಟೋಗಳು ವೈರಲ್ ಆಗಿದ್ದವು. ಅದೆಲ್ಲದರ ನಡುವೆ ದರ್ಶನ್ ಒಬ್ಬ ಹುಡುಗಿಯ ಬರ್ತ್ ಡೇ ಸೆಲೆಬ್ರೇಟ್ ಮಾಡಿರುವ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಆ ಹುಡುಗಿ ಯಾರು? ದರ್ಶನ್ ಅವರು ಆಕೆಯ ಬರ್ತ್ ಡೇ ಸೆಲೆಬ್ರೇಟ್ ಮಾಡಿರೋದು ಯಾಕೆ ಎನ್ನುವ ಪ್ರಶ್ನೆ ಅಭಿಮಾನಿಗಳಲ್ಲಿ ಕೇಳಿ ಬಂದಿತ್ತು.

ಅದಕ್ಕೀಗ ಉತ್ತರ ಸಿಕ್ಕಿದೆ. ದರ್ಶನ್ ಅವರು ಅಭಿಮಾನಿಗಳಿಗೆ ಪ್ರಾಮುಖ್ಯತೆ ಕೊಡುತ್ತಾರೆ. ಈ ಹುಡುಗಿ ಕೂಡ ದರ್ಶನ್ ಅವರ ದೊಡ್ಡ ಅಭಿಮಾನಿ ಆಗಿದ್ದಾರೆ. ಈಕೆಯ ಹೆಸರು ಇಶಿತಾ ಎಂದು, ಈಕೆ ಒಬ್ಬ ನಟಿ ಹಾಗೂ ನಿರೂಪಕಿ ಸಹ ಹೌದು. ಜೊತೆಗೆ ಈಕೆ ದರ್ಶನ್ ಅವರ ದೊಡ್ಡ ಅಭಿಮಾನಿ ಆಗಿದ್ದಾಳೆ. ಹಾಗಾಗಿ ದರ್ಶನ್ ಅವರು ಈ ಹುಡುಗಿಯನ್ನು ಕರೆಸಿ ಬರ್ತ್ ಡೇ ಸೆಲೆಬ್ರೇಟ್ ಮಾಡಿದ್ದಾರೆ. ಡಿಬಾಸ್ ಅವರ ಈ ಗುಣವನ್ನು ಮೆಚ್ಚಿಕೊಂಡ ಅಭಿಮಾನಿಗಳು ಫೋಟೋಗಳನ್ನು ನೋಡಿ ಸಂತೋಷಪಟ್ಟಿದ್ದಾರೆ.