ರಾಣಿ ಎಲಿಜೆಬೆತ್ ಬದುಕಿದ್ದಾಗ ಬಳಸಿದ್ದ ಟೀ ಬ್ಯಾಗ್ ಅನ್ನು ಮಾರಾಟಕ್ಕೆ ಇಟ್ಟ ಸಂಸ್ಥೆ. ಬೆಲೆ ಎಷ್ಟು ಗೊತ್ತೇ?? ಪ್ರಪಂಚವೇ ಶಾಕ್ ಆಗಿದ್ದು ಯಾಕೆ ಗೊತ್ತೇ??

41

Get real time updates directly on you device, subscribe now.

ಬ್ರಿಟನ್ ನ ರಾಣಿ ಎಲಿಜಬೆತ್ 11 ಅವರು 96 ವರ್ಷಗಳ ಸುದೀರ್ಘ ಜೀವನ ನಡೆಸಿ ಇಹಲೋಕ ತ್ಯಜಿಸಿದರು. ಇವರು ಮೃತರಾದ ಬಳಿಕ ಇವರ ಬಗೆಗಿನ ಹಲವು ವಿಚಾರಗಳು ವೈರಲ್ ಆಗುತ್ತಿದೆ. ರಾಣಿಯವರ ಬಗ್ಗೆ ಹೆಚ್ಚಾಗಿ ತಿಳಿದುಕೊಳ್ಳಲು ಜನರು ಪ್ರಯತ್ನ ಮಾಡುತ್ತಿದ್ದಾರೆ. 96 ವರ್ಷವಿದ್ದಾಗಲು ರಾಣಿಯವರು ಅಷ್ಟೇ ದೃಢವಾಗಿದ್ದರು. 70 ವರ್ಷಗಳ ಆಳ್ವಿಕೆ ನಡೆಸಿದ ಏಕೈಕ ರಾಣಿ ಆಗಿದ್ದಾರೆ. ಎಲಿಜಬೆತ್ ಅವರ ಬಗ್ಗೆ ಮತ್ತೊಂದು ವಿಚಾರ ಈಗ ಭಾರಿ ಟ್ರೆಂಡ್ ಆಗುತ್ತಿದೆ.

ಮಾರಾಟದ ಪ್ರಸಿದ್ಧ ವೆಬ್ಸೈಟ್ ಇಬೇ ನಲ್ಲಿ ಇದೀಗ ಮಹಾರಾಣಿ ಎಲಿಜಬೆತ್ 11 ಅವರು ಬಳಸಿದ್ದ ಟೀಬ್ಯಾಗ್ ಅನ್ನು ಮಾರಾಟಕ್ಕೆ ಇಡಲಾಗಿದೆ. ಸಾಮಾನ್ಯವಾಗಿ ಟೀಬ್ಯಾಗ್ ಬಳಸಿದ ನಂತರ ಅದರೊಳಗಿರುವ ವಸ್ತುವನ್ನು ಗಿಡಕ್ಕೆ ಗೊಬ್ಬರವಾಗಿ ಹಾಕಬಹುದು ಅದನ್ನು ಹೊರತಪಡಿಸಿ ಇನ್ಯಾವುದೇ ಉಪಯೋಗ ಇಲ್ಲ. ಆದರೆ ಇದು ಮಹಾರಾಣಿ ಅವರು ಬಳಸಿರುವ ಟೀಬ್ಯಾಗ್ ಎನ್ನುವ ಕಾರಣಕ್ಕೆ ಜನರು ಇದನ್ನು ಕೊಂಡುಕೊಳ್ಳಬಹುದು. ಇನ್ನು ಈ ಟೀ ಬ್ಯಾಗ್ ಅನ್ನು ಮಾರಾಟಕ್ಕೆ ಇಟ್ಟಿರುವುದು ಬ್ರಿಟನ್ ನ ಒಬ್ಬ ವ್ಯಾಪಾರಿ ಆಗಿದ್ದಾನೆ. ಈ ಟೀಬ್ಯಾಗ್ ನ ವಿಶೇಷತೆ ಬಗ್ಗೆ ಸಹ ಆತ ಬರೆದಿದ್ದಾನೆ.

1998 ರಲ್ಲಿ ಮಹಾರಾಣಿಯವರು ವಾಸವಿದ್ದ ವಿಂಡ್ಸರ್ ಕ್ಯಾಸಲ್ ನಲ್ಲಿ ಈ ಟೀಬ್ಯಾಗ್ ಬಳಸಿದ್ದರು, ಅಲ್ಲಿಂದ ಅದನ್ನು ಕಳವು ಮಾಡಲಾಗಿತ್ತು. ಇದನ್ನು ವಿಶೇಷ ನಿರ್ವಾಹಕರು ಕದ್ದು ಸಾಗಿಸುತ್ತಿದ್ದರು. ಆ ಸಮಯದಲ್ಲಿ ಲಂಡನ್ ರೋಚ್ ಎನ್ನುವ ಜಿರಳೆ ರಾಣಿಯವರನ್ನು ಮುತ್ತಿಕೊಂಡಿತ್ತು, ರಾಣಿಯವರನ್ನು ಅದರಿಂದ ಕಾಪಾಡಲಾಗಿತ್ತು ಎಂದು ಬರೆದುಕೊಂಡಿದ್ದಾರೆ. ಇನ್ನು ಈ ಟೀಬ್ಯಾಗ್ ಗೆ ನಿಗದಿ ಮಾಡಿರುವ ಬೆಲೆ, $12,000 ಆಗಿದ್ದು, ಭಾರತದ ರೂಪಾಯಿಯ ಪ್ರಕಾರ, 956,471 ರೂಪಾಯಿ ಆಗಿದೆ. ಇಷ್ಟು ದುಬಾರಿ ಹಣ ಕೊಟ್ಟು ಟೀಬ್ಯಾಗ್ ಅನ್ನು ಯಾರು ಕೊಂಡುಕೊಳ್ಳುತ್ತಾರೆ ಎಂದು ಕಾದು ನೋಡಬೇಕಿದೆ. ಇದೊಂದೇ ಅಲ್ಲದೆ, ಮಹಾರಾಣಿ ಎಲಿಜಬೆತ್ 11 ಅವರ ಕುರಿತ ಹಾಗೆ ಇನ್ನು ಹಲವು ವಸ್ತುಗಳನ್ನು ಮಾರಾಟಕ್ಕೆ ಇಡಲಾಗಿದೆ.

Get real time updates directly on you device, subscribe now.