ಚಿನ್ನದ ಕಲರ್ ಸೀರಯಲಿ ಮಿಣಿ ಮಿಣಿ ಮಿಂಚಿದ ಮೇಘನಾ ರಾಜ್: ಥೇಟ್ ರಾಣಿಯಂತೆ ಕಂಡರು. ವಿಶೇಷ ಏನು ಅಂದ್ರು ಫ್ಯಾನ್ಸ್. ಏನು ಗೊತ್ತೇ??
ನಟಿ ಮೇಘನಾ ರಾಜ್ ಅವರು ಪತಿ ಚಿರು ಇಲ್ಲವಾದ ಬಳಿಕ ಬಹಳ ಡಲ್ ಆಗಿದ್ದರು, ನೋವಿನಲ್ಲಿದ್ದರು. ಮಗ ರಾಯನ್ ಜನಿಸಿದ ನಂತರ ಮೇಘನಾ ರಾಜ್ ಅವರಿಗೆ ಜೀವನದಲ್ಲಿ ಸಂತೋಷ ಬೆಳಕು ಮೂಡಿತು. ಮೇಘನಾ ರಾಜ್ ಅವರು ಮಗನನ್ನು ನೋಡಿಕೊಳ್ಳುವುದರಲ್ಲಿ ಹೆಚ್ಚು ಸಮಯ ಬ್ಯುಸಿ ಆಗಿದ್ದಾರೆ. ಮಗನ ಜೊತೆಗೆ ಕಾಲ ಕಳೆಯುತ್ತಾರೆ. ಇದರ ಜೊತೆಗೆ ಮೇಘನಾ ರಾಜ್ ಅವರು ಈಗ ಬಣ್ಣದ ಪ್ರಪಂಚದಲ್ಲೂ ಬ್ಯುಸಿ ಆಗಿದ್ದಾರೆ. ಕೆಲವು ಸಿನಿಮಾಗಳನ್ನು ಒಪ್ಪಿಕೊಂಡಿದ್ದಾರೆ. ನಟನೆಯನ್ನು ಬಿಡುವುದಿಲ್ಲ ಎಂದು ಮೇಘನಾ ರಾಜ್ ಈಗಾಗಲೇ ಹೇಳಿದ್ದರು.
ಇನ್ನು ಮೇಘನಾ ರಾಜ್ ಅವರು ಕಲರ್ಸ್ ಕನ್ನಡ ವಾಹಿನಿಯ ಡ್ಯಾನ್ಸಿಂಗ್ ಚಾಂಪಿಯನ್ಸ್ ಶೋನಲ್ಲಿ ಜಡ್ಜ್ ಆಗಿ ಕಾಣಿಸಿಕೊಳ್ಳುವ ಮೂಲಕ ಕಿರುತೆರೆಗೂ ಎಂಟ್ರಿ ಕೊಟ್ಟರು. ಅಷ್ಟೇ ಅಲ್ಲದೆ, ಈಗ ಸೋಷಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿರುವ ಮೇಘನಾ ರಾಜ್ ಹಲವು ವಿಚಾರಗಳನ್ನು ಶೇರ್ ಮಾಡಿಕೊಳ್ಳುತ್ತಾರೆ. ಮೇಘನಾ ಅವರು ಆಗಾಗ ಸ್ನೇಹಿತರ ಜೊತೆಗೆ ಪ್ರವಾಸಕ್ಕೂ ಹೋಗುತ್ತಿದ್ದಾರೆ. ಈ ಎಲ್ಲ ವಿಷಯಗಳನ್ನು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿಕೊಳ್ಳುತ್ತಾರೆ.

ಇತ್ತೀಚೆಗೆ ಮೇಘನಾ ರಾಜ್ ಅವರು ಬೆಂಗಳೂರಿನಲ್ಲಿ ನಡೆದ ಓಣಂ ಹಬ್ಬದ ಆಚರಣೆಯಲ್ಲಿ ಪಾಲ್ಗೊಂಡಿದ್ದರು. ಓಣಂ ಆಚರಣೆಗಾಗಿ ವಿಶೇಷವಾಗಿ ಚಿನ್ನದ ಬಣ್ಣದ ಸೀರೆ ಧರಿಸಿದ್ದರು ಮೇಘನಾ ರಾಜ್, ಅದಕ್ಕೆ ಹಸಿರು ಬಣ್ಣದ ಬ್ಲೌಸ್ ಧರಿಸಿದ್ದರು, ಈ ಸೀರೆಯಲ್ಲಿ ಬಹಳ ಸುಂದರವಾಗಿ ಕಾಣಿಸುತ್ತಿರುವ ಮೇಘನಾ ರಾಜ್ ಅವರು, ಅಷ್ಟೇ ಸುಂದರವಾಗಿ ಫೋಟೋಗಳಿಗೂ ಪೋಸ್ ನೀಡಿದ್ದಾರೆ. ಈ ಓಣಂ ಸ್ಪೆಷಲ್ ಫೋಟೋಗಳು ಸಧ್ಯಕ್ಕೆ ಸೋಷಿಯಲ್ ಮೀಡಿಯಾದಲ್ಲಿ ಅಭಿಮಾನಿಗಳಿಂದ ಮೆಚ್ಚುಗೆಯನ್ನು ಸಹ ಪಡೆದುಕೊಳ್ಳುತ್ತಿದೆ.