ಭಾರತ ತಂಡ ವಿಶ್ವಕಪ್ ಗೆ ತಂಡ ಘೋಷಣೆ ಮಾಡಿದ ಬೆನ್ನಲ್ಲೇ ತಂಡದ ಕುರಿತು ಎಬಿಡಿ ಹೇಳಿದ್ದೇನು ಗೊತ್ತೇ??

22

Get real time updates directly on you device, subscribe now.

ಮುಂದಿನ ತಿಂಗಳು ಶುರುವಾಗಲಿರುವ ಐಸಿಸಿ ಟಿ20 ವರ್ಲ್ಡ್ ಕಪ್ ಗೆ 15 ಸದಸ್ಯರ ತಂಡವನ್ನು ಬಿಸಿಸಿಐ ನಿನ್ನೆಯಷ್ಟೇ ಪ್ರಕಟಣೆ ಮಾಡಿದೆ. ಏಷ್ಯಾಕಪ್ ನಲ್ಲಿ ಪಾಲ್ಗೊಂಡು ಬಹುತೇಕ ಸದಸ್ಯರು ಟಿ20 ವಿಶ್ವಕಪ್ ನಲ್ಲೂ ಆಯ್ಕೆಯಾಗಿದ್ದಾರೆ. ಬಿಸಿಸಿಐ ಆಯ್ಕೆ ಮಾಡಿ, ಪ್ರಕಟಣೆ ಮಾಡಿರುವ ಲಿಸ್ಟ್ ನೋಡಿ, ಭಾರತದ ಹಲವು ದಿಗ್ಗಜ ಆಟಗಾರರು ಪ್ಲೇಯರ್ ಗಳ ಬಗ್ಗೆ ಪ್ರತಿಕ್ರಿಯೆ ನೀಡುತ್ತಿದ್ದಾರೆ, ಇದೀಗ ಸೌತ್ ಆಫ್ರಿಕಾದ ಮಾಜಿ ಆಟಗಾರ ನಮ್ಮ ಆರ್.ಸಿ.ಬಿ ತಂಡದ ಆಪತ್ಬಾಂಧವ ಎಂದೇ ಖ್ಯಾತಿಯಾಗಿದ್ದ ಎಬಿಡಿ ಅವರು ಸಹ ಭಾರತ ತಂಡದ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.

ಐಸಿಸಿ ಟಿ20 ವರ್ಲ್ಡ್ ಕಪ್ ಶುರುವಾಗಲು ಇನ್ನು ಕೆಲವು ದಿನಗಳು ಉಳಿದಿದೆ, ಅದಕ್ಕಿಂತ ಮೊದಲು ಆಸ್ಟ್ರೇಲಿಯಾ ಹಾಗೂ ಸೌತ್ ಆಫ್ರಿಕಾ ವಿರುದ್ಧ ಭಾರತ ತಂಡ ಸರಣಿ ಪಂದ್ಯಗಳನ್ನು ಆಡಲಿದೆ, ಆ ಪಂದ್ಯಗಳಿಗೂ ಆಯ್ಕೆಯಾಗಿರುವ ಸದಸ್ಯರ ಲಿಸ್ಟ್ ಅನ್ನು ಬಿಸಿಸಿಐ ಪ್ರಕಟಣೆ ಮಾಡಿದೆ. ಈ ಹಿಂದೆ ಏಷ್ಯಾಕಪ್ ಗೆ ಸದಸ್ಯರ ಲಿಸ್ಟ್ ಬಿಡುಗಡೆ ಆದಾಗ, ಕ್ರಿಕೆಟ್ ತಜ್ಞರು ಹಾಗೂ ಮಾಜಿ ಕ್ರಿಕೆಟಿಗರು ಅದರ ಬಗ್ಗೆ ಚರ್ಚೆ ನಡೆಸಿ, ಭಾರತ ತಂಡ ಏಷ್ಯಾಕಪ್ ಗೆಲ್ಲುತ್ತಾ ಎಂದು ಚರ್ಚೆ ಮಾಡಿದ್ದರು, ಇದೀಗ ಐಸಿಸಿ ಟಿ20 ವರ್ಲ್ಡ್ ಕಪ್ ಗೆ ತಂಡದ ಪ್ರಕಟಣೆ ಆದಮೇಲು ಅದೇ ರೀತಿಯ ಚರ್ಚೆ ಶುರುವಾಗಿದೆ.

ಇದೀಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿರುವ ಖ್ಯಾತ ಆಟಗಾರ ಎಬಿಡಿ ಅವರು ಸಹ ಭಾರತ ತಂಡದ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. “ನಮ್ಮ ಆರ್.ಸಿ.ಬಿ ತಂಡದ ಮೂವರು ಆಟಗಾರರು ಆಯ್ಕೆಯಾಗಿರುವುದು ಬಹಳ ಸಂತೋಷವಾಗಿದೆ. ಮೂವರು ಕೂಡ ಬಲಿಷ್ಠ ಆಟಗಾರರು, ವಿರಾಟ್ ಕೋಹ್ಲಿ ಅವರು ಮರಳಿ ಫಾರ್ಮ್ ಗೆ ಬಂದಿದ್ದಾರೆ. ದಿನೇಶ್ ಕಾರ್ತಿಕ್ ಅದ್ಭುತವಾಗಿ ಬ್ಯಾಟಿಂಗ್ ಮಾಡುತ್ತಾರೆ, ಹರ್ಷಲ್ ಪಟೇಲ್ ಅವರ ಬೌಲಿಂಗ್ ನಗ್ಗೆ ಹೇಳುವುದೇ ಬೇಡ, ಮ್ಯಾಚ್ ನಲ್ಲಿ ಎಂತಹ ಚೇಂಜ್ ಆದರೂ ತರುತ್ತಾರೆ. ಇವರು ಆರ್.ಸಿ.ಬಿ ಗೆ ಬಂದ ಬಳಿಕ ನ್ಯಾಷನಲ್ ಟೀಮ್ ಗೆ ಸೆಲೆಕ್ಟ್ ಆಗಿರುವುದು ಸಂತೋಷ ಇದೆ. ದಿನೇಶ್ ಕಾರ್ತಿಕ್ ಅವರು ಈ ವಯಸ್ಸಿನಲ್ಲೂ ಬ್ಯಾಟ್ ಮಾಡುವ ಪರಿ ನೋಡಿದರೆ ಬಹಳ ಸಂತೋಷ ಆಗುತ್ತೆ. ವರ್ಲ್ಡ್ ಕಪ್ ನಲ್ಲಿ ಮೂವರು ಕೂಡ ಒಳ್ಳೆಯ ಪ್ರದರ್ಶನ ನೀಡಲಿ, ವಿರಾಟ್ ಕೋಹ್ಲಿ ಅವರು ಮತ್ತೊಂದು ಸೆಂಚುರಿ ಭಾರಿಸಿ”, ಎಂದು ಹೇಳಿ ವಿಶ್ ಮಾಡಿದ್ದಾರೆ ಎಬಿಡಿ.

Get real time updates directly on you device, subscribe now.