ಸೈಮಾ ಅವಾರ್ಡ್ ನಲ್ಲಿ ದರ್ಶನ್ ಖಡಕ್ ಆಗಿ ಹೇಳಿದ್ದೇನು ? ಮೊದಲ ಸಾಲಿನಲ್ಲೆ ಸ್ಥಾನ ಕೊಟ್ಟಿದ್ದೇಕೆ ? ಶಾಕಿಂಗ್ ವಿಚಾರ ಬಯಲು.
ದಕ್ಷಿಣ ಭಾರತ ಚಿತ್ರರಂಗದ ಕಲಾವಿದರು ಹಾಗೂ ತಂತ್ರಜ್ಞರಿಗೆ ಕೊಡುವ ಪ್ರತಿಷ್ಟಿತ ಅವಾರ್ಡ್ ಗಳಲ್ಲಿ ಒಂದು ಸೈಮಾ ಅವಾರ್ಡ್ಸ್, ಈ ಕಾರ್ಯಕ್ರಮ ಈ ವರ್ಷ ಬೆಂಗಳೂರಿನಲ್ಲಿ ನಡೆಯಿತು. ಇದು ಸೈಮಾ ದ 10ನೇ ವರ್ಷದ ವಾರ್ಷಿಕೋತ್ಸವ ಆಗಿದ್ದು, ಬಹಳ ವಿಶೇಷವಾದ ಈ ವರ್ಷದ ಅವಾರ್ಡ್ ಶೋ ಅನ್ನು ಬೆಂಗಳೂರಿನಲ್ಲಿ ನಡೆಸಲಾಗಿದೆ. 2022ರ ಸೈಮಾ ಅವಾರ್ಡ್ಸ್ ಕಾರ್ಯಕ್ರಮವನ್ನು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರಿಗೆ ಅರ್ಪಣೆ ಮಾಡಲಾಯಿತು. ಬೆಂಗಳೂರಿನಲ್ಲಿ ನಡೆದ ಈ ಕಾರ್ಯಕ್ರಮದ ಕನ್ನಡ ಚಿತ್ರರಂಗದ ಹಲವು ಸೆಲೆಬ್ರಿಟಿಗಳು ಪಾಲ್ಗೊಂಡರು.
ಅದರಲ್ಲು ಡಿಬಾಸ್ ದರ್ಶನ್ ಅವರು ಕಾರ್ಯಕ್ರಮದ ಪ್ರಮುಖ ಆಕರ್ಷಣೆ ಆಗಿದ್ದರು ಎಂದರೆ ತಪ್ಪಾಗುವುದಿಲ್ಲ. ಏಕೆಂದರೆ ದರ್ಶನ್ ಅವರ ರಾಬರ್ಟ್ ಸಿನಿಮಾ ಸಾಕಷ್ಟು ವಿಭಾಗದಲ್ಲಿ ನಾಮಿನೇಟ್ ಆಗಿತ್ತು. ಸೈಮಾ ಅವಾರ್ಡ್ಸ್ ನಲ್ಲಿ ಅತ್ಯುತ್ತಮ ನಾಯಕನಟ ಪ್ರಶಸ್ತಿ ಯುವರತ್ನ ಸಿನಿಮಾಗೆ ಪುನೀತ್ ರಾಜ್ ಕುಮಾರ್ ಅವರಿಗೆ ಸಿಕ್ಕಿತು, ಅತ್ಯುತ್ತಮ ನಾಯಕನಟಿ ಪ್ರಶಸ್ತಿ ಮದಗಜ ಸಿನಿಮಾಗೆ ಆಶಿಕಾ ರಂಗನಾಥ್ ಅವರಿಗೆ ಸಿಕ್ಕಿತು. ತರುಣ್ ಸುಧೀರ್ ಅವರಿಗೆ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ ಸಿಕ್ಕಿತು. ಈ ಕಾರ್ಯಕ್ರಮದಲ್ಲಿ ಡಿಬಾಸ್ ಎಂಟ್ರಿಗೆ ಶಿಳ್ಳೆ, ಚಪ್ಪಾಳೆ ಬಹಳಷ್ಟಿತ್ತು.
ದರ್ಶನ್ ಅವರು ಮೊದಲ ಸಾಲಿನಲ್ಲೇ ಕೂತು ಅವಾರ್ಡ್ ಕಾರ್ಯಕ್ರಮವನ್ನು ವೀಕ್ಷಿಸಿದರು. ದರ್ಶನ್ ಅವರು ಮೊದಲ ಸಾಲಿನಲ್ಲೇ ಕೂರೋದಕ್ಕೆ ಒಂದು ಪ್ರಮುಖ ಕಾರಣ ಸಹ ಇದೆ, ಈ ಹಿಂದೆ ಸಂದರ್ಶನ ಒಂದರಲ್ಲಿ ದರ್ಶನ್ ಅವರು ಯಾಕೆ ಅವಾರ್ಡ್ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳೋದಿಲ್ಲ ಎಂದು ಕೇಳಿದ ಪ್ರಶ್ನೆಗೆ, ಅವಾರ್ಡ್ ಕಾರ್ಯಕ್ರಮಗಳಿಗೆ ಆಮಂತ್ರಣ ಬರುತ್ತೆ, ನಮ್ಮ ಅಲ್ಲೆಲ್ಲಾ ಕನ್ನಡದ ನಟನಟಿಯರಿಗೆ ಕೊನೆಯಲ್ಲಿ ಎಲ್ಲೋ ಜಾಗ ಕೊಟ್ಟಿರ್ತಾರೆ. ಕನ್ನಡ ಚಿತ್ರರಂಗದವರು ಮೊದಲ ಸಾಲಿನಲ್ಲಿ ಕೂರೋವಾಗ ಬರ್ತೀನಿ ಎಂದು ಹೇಳಿದ್ದರು. ಇದೀಗ ಅವಾರ್ಡ್ ಕಾರ್ಯಕ್ರಮವೇ ಬೆಂಗಳೂರಿಗೆ ಬಂದಿದ್ದು, ದರ್ಶನ್ ಅವರು ಮೊದಲ ರೋ ನಲ್ಲಿ ಖಡಕ್ ಆಗಿ ಕುಳಿತಿದ್ದರು. ದರ್ಶನ್ ಅವರು ಅಂದು ನೀಡಿದ ಆ ಖಡಕ್ ವಾರ್ನಿಂಗ್ ಇಂದ ಈ ಮಟ್ಟ ತಲುಪಿದೆ ಎನ್ನುತ್ತಿದ್ದಾರೆ ಅಭಿಮಾನಿಗಳು.