ಮಳೆಯಿಂದ ತತ್ತರಿಸಿ ಹೋಗಿರುವ ರಾಜ್ಯಕ್ಕೆ ಶಾಕ್ ಕೊಟ್ಟ ಕೊಡಿ ಮಠದ ಸ್ವಾಮೀಜಿ. ರಾಜ್ಯದ ಹಾಗೂ ದೇಶದ ಪರಿಸ್ಥಿತಿ ಏನಾಗಲಿದೆ ಅಂತೇ ಗೊತ್ತೇ??
ಭವಿಷ್ಯಗಳನ್ನು ನುಡಿದು ಸಂಚಲನ ಸೃಷ್ಟಿಸುವ ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನ ಕೋಡಿಮಠದ ಶ್ರೀ ಶ್ರೀ ಶಿವಾನಂದ ಸ್ವಾಮೀಜಿ ಅವರು ಇದೀಗ ಮತ್ತೊಮ್ಮೆ ಭವಿಷ್ಯ ನುಡಿದಿದ್ದಾರೆ. ಶ್ರೀಗಳು ಈಗ ಮಂಡ್ಯ ಜಿಲ್ಲೆಯ ಬೂಕನಕೆರೆಗೆ ಬಂದಿದ್ದರು, ಆಗ ಶ್ರೀಗಳು ಭವಿಷ್ಯ ನುಡಿದಿದ್ದು, ಮುಂದಿನ ದಿನಗಳಲ್ಲಿ ಇನ್ನು ಹೆಚ್ಚು ಕಷ್ಟಕಾಲ ಬರುತ್ತದೆ ಎಂದು ಹೇಳಿದ್ದಾರೆ. ನಮ್ಮ ರಾಜ್ಯದಲ್ಲಿ ಮಳೆಯ ಅಪಾಯ ಇನ್ನು ಮುಂದುವರೆಯುತ್ತದೆ, ದೇಶದಲ್ಲಿ ಸುನಾಮಿ ಬರುತ್ತದೆ ಎಂದು ದೇಶದ ಜನರಿಗೆ ಎಚ್ಚರಿಕೆಯ ಗಂಟೆಯನ್ನು ಶ್ರೀ ಶ್ರೀ ಶಿವಾನಂದ ಸ್ವಾಮಿಗಳು ನೀಡಿದ್ದಾರೆ.
ಮುಂದಿನ ದಿನಗಳಲ್ಲಿ ಭೂಮಿಯಲ್ಲಿ ಅಪಾಯಕಾರಿ ವಿಷಜಂತುಗಳು ಹೊರಬರುತ್ತದೆ, ಜನರು ನೆಲದ ಮೇಲೆ ಓಡಾಡುವಾಗ, ಬಡಿಗೆ ಹಿಡಿದು ಓಡಾಡುವ ಪರಿಸ್ಥಿತಿ ಎದುರಾಗುತ್ತದೆ ಎಂದು ಶ್ರೀಗಳು ಹೇಳಿದ್ದು, ಈ ಹಿಂದೆ ಕೂಡ ನಾನು ಕರೊನಾ ಬಗ್ಗೆ ಭವಿಷ್ಯ ಹೇಳಿದ್ದೆ, ಕಾಡಿನ ಪ್ರಾಣಿಗಳು ನಾಡಿಗೆ ಬರುತ್ತವೆ ಎಂದು ಕೂಡ ಭವಿಷ್ಯ ನುಡಿದಿದ್ದೆ ಎಂದು ಹಳೆಯ ಭವಿಷ್ಯದ ನುಡಿಗಳ ನೆನಪು ಮಾಡಿಕೊಂಡಿದ್ದಾರೆ. ಹಾಗೆಯೇ ಮುಂದಿನ ದಿನಗಳು ಇನ್ನು ಕರಾಳವಾಗಿರುತ್ತದೆ ಎಂದು ಸೂಚನೆ ನೀಡಿದ್ದಾರೆ. ತಾವು ಈ ಹಿಂದೆ ಹೇಳಿದ್ದ ಮಾತುಗಳು ಎಲ್ಲವೂ ನಿಜವಾಗಿದ್ದು, ಮುಂದೆ ಇನ್ನು ಕಷ್ಟ ಎದುರಾಗುತ್ತದೆ ಎಂದಿದ್ದಾರೆ.
ಈ ಎಲ್ಲಾ ಕಷ್ಟಗಳಿಗೂ ದೇವರನ್ನು ಪೂಜೆ ಮಾಡುವುದು ಒಂದೇ ಪರಿಹಾರ ಎಂದು ಸಹ ಶ್ರೀಗಳು ಹೇಳಿದ್ದಾರೆ. ಜೊತೆಗೆ, ಈಗಿನ ಕಾಲದಲ್ಲಿ ದೇವರ ಪೂಜೆ ಆಡಂಬರದ ಹಾಗೆ ಆಗಿದೆ. ಯೋಗಿಗಳು, ಸಾಧುಗಳು, ಅವರ ಗದ್ದುಗೆಗಳು ಇವೆ ಅವುಗಳಲ್ಲಿ ಪ್ರಾರ್ಥಿಸಿದರೆ ಪ್ರಪಂಚ ಉಳಿಯುತ್ತದೆ ಎಂದಿದ್ದಾರೆ. ಹಲವು ಬಾರಿ ರಾಜಕೀಯ ಬೆಳವಣಿಗೆಗಳ ಬಗ್ಗೆ ಸಹ ಶ್ರೀಗಳು ಭವಿಷ್ಯ ನುಡಿಯುತ್ತಿದ್ದರು, ಆದರೆ ಈ ಬಾರಿ ಬೂಕನಕೆರೆಯಲ್ಲಿ ಶ್ರೀಗಳು ರಾಜಕೀಯದ ಬಗ್ಗೆ ಭವಿಷ್ಯ ನುಡಿದಿಲ್ಲ. ಒಟ್ಟಿನಲ್ಲಿ ಶ್ರೀಗಳು ಹೇಳಿರುವ ಮಾತುಗಳನ್ನು ಕೇಳಿದರೆ, ಭಯ ಮೂಡುವುದಂತೂ ಖಂಡಿತ.