ಇದ್ದಕ್ಕಿದ್ದ ಹಾಗೆ ಅಪ್ಪು ರವರ ಕಾರ್ ಅನ್ನು ವಿದೇಶಕ್ಕೆ ಕಳುಹಿಸಿದ ಅಶ್ವಿನಿ ಪುನೀತ್. ಈ ದೃಢ ನಿರ್ಧಾರ ತೆಗೆದುಕೊಳ್ಳಲು ಕಾರಣವೇನು ಗೊತ್ತೆ??

150

Get real time updates directly on you device, subscribe now.

ನಮ್ಮೆಲ್ಲರ ಪ್ರೀತಿಯ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ಅಪ್ಪಟ ಜಂಟಲ್ ಮ್ಯಾನ್ ಆಗಿದ್ದರು, ಸಿನಿಮಾಗಳಲ್ಲಿ ಪವರ್ ಸ್ಟಾರ್ ಇಮೇಜ್ ಹಾಗೂ ಫ್ಯಾಮಿಲಿ ಹೀರೋ ಹೊಂದಿದ್ದ ಅಪ್ಪು ನಿಜ ಜೀವನದಲ್ಲಿ ಇದ್ದಿದ್ದು ಸಹ ಅದೇ ರೀತಿ. ಮಕ್ಕಳಿಂದ ಹಿರಿಯರವರೆಗೂ ಎಲ್ಲರಿಗೂ ಅಪ್ಪು ಅಂದ್ರೆ ತುಂಬಾ ಇಷ್ಟ, ನಿಜ ಜೀವನದಲ್ಲಿ ಸಹ ಅಪ್ಪು ಅವರು ಅದೇ ರೀತಿ ಬಾಳಿ ಬದುಕಿದವರು, ಅಪ್ಪು ಅವರು ಪಕ್ಕಾ ಫ್ಯಾಮಿಲಿ ಮ್ಯಾನ್, ಎಲ್ಲೇ ಇದ್ದರೂ, ಎಷ್ಟೇ ಬ್ಯುಸಿ ಇದ್ದರು, ಮಕ್ಕಳಿಗೆ ಕುಟುಂಬಕ್ಕೆ ಸಮಯ ಕೊಡುವುದನ್ನು ಮಾತ್ರ ಅಪ್ಪು ಅವರು ತಪ್ಪಿಸುತ್ತಿರಲಿಲ್ಲ.

ಪತ್ನಿ ಅಶ್ವಿನಿ ಅಂದ್ರೆ ಅಪ್ಪು ಅವರಿಗೆ ಬಹಳ ಪ್ರೀತಿ. ಅಶ್ವಿನಿ ಹಾಗೂ ಅಪ್ಪು ಅವರದ್ದು ಪ್ರೇಮ ವಿವಾಹ. ಪ್ರೀತಿಸಿ ಎರಡು ಕುಟುಂಬದವರನ್ನು ಒಪ್ಪಿಸಿ ಈ ಜೋಡಿ ಅದ್ಧೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿತು. ಈ ಜೋಡಿಗೆ ಇಬ್ಬರು ಹೆಣ್ಣುಮಕ್ಕಳು. ಇಬ್ಬರು ಚೆನ್ನಾಗಿ ಓದುತ್ತಾ, ತಂದೆಯ ಹೆಸರಿಗೆ ಗೌರವ ತರುತ್ತಿದ್ದಾರೆ. ಚಿಕ್ಕಂದಿನಲ್ಲಿ ಅಮ್ಮನ ಜೊತೆಗೆ ಹೆಚ್ಚಾಗಿ ಕಾಲ ಕಳೆದಿದ್ದ ಅಪ್ಪು ಅವರಿಗೆ ಹೆಣ್ಣುಮಕ್ಕಳು ಎಂದರೆ ಬಹಳ ಗೌರವ, ಹೆಣ್ಣುಮಕ್ಕಳು ಸ್ವಾವಲಂಬಿಯಾಗಿರಬೇಕು ಎಂದು ಅಪ್ಪು ಅವರು ಹೇಳುತ್ತಿದ್ದರು. ಅದೇ ರೀತಿ ಅಶ್ವಿನಿ ಅವರನ್ನು ನಿರ್ಮಾಪಕಿಯಾಗಿ ಮಾಡಿದರು ಅಪ್ಪು.

ಪತ್ನಿ ಮೇಲೆ ಬಹಳ ಪ್ರೀತಿ ಗೌರವ ಇಟ್ಟುಕೊಂಡಿದ್ದ ಅಪ್ಪು ಅವರು 2019ರ ಮಹಿಳಾ ದಿನಾಚರಣೆಗೆ ಅಶ್ವಿನಿ ಅವರಿಗೆ ಸ್ಪೆಷಲ್ ಗಿಫ್ಟ್ ಆಗಿ Lamborghini car ಅನ್ನು ನೀಡಿದರು. ಆ ಕಾರ್ ಅನ್ನು ಅಪ್ಪು ಅವರೇ ಹೆಚ್ಚಾಗಿ ಬಳಸುತ್ತಿದ್ದರು. ಆದರೆ ಅಪ್ಪು ಅವರು ಇನ್ನಿಲ್ಲವಾದಮೇಲೆ ಆ ಕಾರ್ ಅನ್ನು ಯಾರು ಉಪಯೋಗಿಸುತ್ತಿರಲಿಲ್ಲ, ಹಾಗಾಗಿ ಅಶ್ವಿನಿ ಅವರು ಆ ಕಾರ್ ಅನ್ನು ದುಬೈ ನಲ್ಲಿರುವ ಅವರ ತಮ್ಮನಿಗೆ ನೀಡಿದ್ದಾರೆ ಎಂದು ತಿಳಿದುಬಂದಿದೆ. ಅಶ್ವಿನಿ ಅವರಿಗೆ ಕಾರ್ ನೋಡಿದಾಗಲೆಲ್ಲಾ ಅಪ್ಪು ಅವರ ನೆನಪಾಗುತ್ತಿತ್ತು ಎಂದು ಹೀಗೆ ಮಾಡಿದ್ದಾರೆ ಅಶ್ವಿನಿ. ಅಪ್ಪು ಅವರು ಪ್ರೆಸೆಂಟ್ ಮಾಡಿದ್ದ Lamborghini ಕಾರ್ ನ ಬೆಲೆ ಬರೊಬ್ಬರಿ 4 ಕೋಟಿ ರೂಪಾಯಿ ಆಗಿತ್ತು.

Get real time updates directly on you device, subscribe now.