ದಿನೇಶ್ ಕಾರ್ತಿಕ್ ಹಾಗೂ ರಿಷಬ್ ಪಂತ್ ರವರಲ್ಲಿ ಯಾರು ಆಡಬೇಕಂತೆ ಗೊತ್ತೇ?? ಕನ್ನಡಿಗ ಉತ್ತಪ್ಪ ಆಯ್ಕೆ ಮಾಡಿದ್ದು ಯಾರನ್ನು ಗೊತ್ತೇ?? ಭೇಷ್ ಎಂದ ನೆಟ್ಟಿಗರು

23

Get real time updates directly on you device, subscribe now.

ಪ್ರಸ್ತುತ ಭಾರತ ಕ್ರಿಕೆಟ್ ತಂಡದ ಬಗ್ಗೆ ಬ್ಯಾಟ್ಸ್ಮನ್ ಗಳ ಕ್ರಮಾಂಕಗಳ ಬಗ್ಗೆ ಹೆಚ್ಚಾಗಿಯೇ ಚರ್ಚೆ ನಡೆಯುತ್ತಿದೆ. ದಿನೇಶ್ ಕಾರ್ತಿಕ್ ಅವರನ್ನು ತಂಡದಲ್ಲಿ ಫಿನಿಷರ್ ಪಾತ್ರ ನಿರ್ವಹಿಸಲು ಬಿಡಬೇಕು, ರಿಷಬ್ ಪಂತ್ ಅವರ ಬದಲಾಗಿ ಹಿರಿಯ ಆಟಗಾರ ದಿನೇಶ್ ಕಾರ್ತಿಕ್ ಅವರಿಗೆ ಅವಕಾಶ ಕೊಡುವುದು ಒಳ್ಳೆಯದು ಎನ್ನುವ ಅಭಿಪ್ರಾಯ ವ್ಯಕ್ತವಾಗುತ್ತಿದೆ. ಹಿರಿಯ ಆಟಗಾರರು ಈ ರೀತಿ ಹೇಳುತ್ತಿದ್ದು, ರಾಬಿನ್ ಉತ್ತಪ್ಪ ಅವರು ಸಹ ಇದೇ ಮಾತುಗಳನ್ನಾಡಿದ್ದಾರೆ..

ಏಷ್ಯಾಕಪ್ 2022 ಪಂದ್ಯಗಳು ಶುರುವಾದ ಬಳಿಕ ದಿನೇಶ್ ಕಾರ್ತಿಕ್ ಅವರು ಮೊದಲ ಪಂದ್ಯ ಪಾಕಿಸ್ತಾನ್ ವಿರುದ್ಧದ ಪಂದ್ಯದಲ್ಲಿ ಕ್ರೀಸ್ ನಲ್ಲಿ ಕಾಣಿಸಿಕೊಂಡರು, ಹಾಂಗ್ ಕಾಂಗ್ ವಿರುದ್ಧದ ಎರಡನೇ ಪಂದ್ಯದಲ್ಲಿ ದಿನೇಶ್ ಕಾರ್ತಿಕ್ ಮತ್ತು ರಿಷಬ್ ಪಂತ್ ಇಬ್ಬರನ್ನು ಆಡಿಸಲಾಯಿತು. ನಂತರದ ಮೂರನೇ ಮತ್ತು ನಾಲ್ಕನೆಯ ಪಂದ್ಯಗಳು, ಸೂಪರ್ 4 ಹಂತದ ಪಂದ್ಯಗಳಾದ ,ಕಲೆಡ್ ಭಾನುವಾರ ನಡೆದ ಪಾಕಿಸ್ತಾನ್ ವಿರುದ್ಧದ ಪಂದ್ಯ ಹಾಗೂ ಹಾಂಗ್ ಕಾಂಗ್ ವಿರುದ್ಧದ ಪಂದ್ಯಗಳಲ್ಲಿ ರಿಷಬ್ ಪಂತ್ ಅವರನ್ನು ಮಾತ್ರ ಆಡಿಸಲಾಯಿತು. ಆದರೆ ರಿಷಬ್ ಪಂತ್ ಅವರು ಈ ಪಂದ್ಯಗಳಲ್ಲಿ ಉತ್ತಮವಾದ ಪ್ರದರ್ಶನವನ್ನು ಸಹ ನೀಡಿಲ್ಲ. ಹಾಗಾಗಿ ಈ ಅಭಿಪ್ರಾಯ ವ್ಯಕ್ತವಾಗಿದೆ.

ಸಂದರ್ಶನದಲ್ಲಿ ಮಾತನಾಡಿದ ರಾಬಿನ್ ಉತ್ತಪ್ಪ ಅವರು, “ದಿನೇಶ್ ಕಾರ್ತಿಕ್ ಅವರು ಮ್ಯಾಚ್ ಫಿನಿಷರ್, ಅವರು ಈ ಪಾತ್ರ ನಿರ್ವಹಿಸಬೇಕು. ದೀಪಕ್ ಹೂಡಾ ಅವರನ್ನು 5ನೇ ಕ್ರಮಾಂಕದಲ್ಲಿ ಆಡಿಸಬಹುದು. ರಿಷಬ್ ಪಂತ್ ಅವರು ಒಳ್ಳೆಯ ಪ್ರದರ್ಶನ ನೀಡವುದು ಮೊದಲ 4 ಕ್ರಮಾಂಕಗಳಲ್ಲಿ ಮಾತ್ರ. ಈಗಿರುವ ಪರಿಸ್ಥಿತಿಯಲ್ಲಿ ರಿಷಬ್ ಪಂತ್ ಅವರಿಗೆ ಟಿ20 ತಂಡದಲ್ಲಿ ಸ್ಥಾನವಿಲ್ಲ, ಆದರೂ ಅವರನ್ನು ಯಾಕೆ ಆಡಿಸುತ್ತಿದ್ದೀರಿ.? ಪಂತ್ ಅವರನ್ನು ಆಡಿಸಲು ಅಗ್ರ ನಾಲ್ಕು ಕ್ರಮಾಂಕದಲ್ಲಿ ಸ್ಥಾನವಿಲ್ಲ. 5ನೇ ಕ್ರಮಾಂಕಕ್ಕೂ ಸ್ಥಾನವಿಲ್ಲ. ಹಾಗಾಗಿ ಪಂತ್ ಅವರ ಬದಲು ದಿನೇಶ್ ಕಾರ್ತಿಕ್ ಅವರನ್ನು ಆಡಿಸುವುದು ಒಳ್ಳೆಯದು. ಹಾರ್ದಿಕ್ ಅವರ ಜೊತೆಗೆ ಮತ್ತೊಬ್ಬ ಫಿನಿಷರ್ ಸಿಗುತ್ತಾರೆ. ಇಲ್ಲವಾದರೆ, ಅಕ್ಷರ್ ಪಟೇಲ್ ಅವರಿಗೆ ಕೆಳಗಿನ ಕ್ರಮಾಂಕದಲ್ಲಿ ಹೆಚ್ಚು ಹೊರೆ ಆಗುತ್ತದೆ..”ಎಂದು ಹೇಳಿದ್ದಾರೆ.

Get real time updates directly on you device, subscribe now.