ಲೆಹೆಂಗಾದಲ್ಲಿ ರಶ್ಮಿಕಾ ಕಾಣಿಸ್ಕೊಂಡ ರೀತಿ ನೋಡಿ, ದೇಶದ ಜನರ ಮೈಂಡ್ ಬ್ಲಾಕ್: ಹೇಗಿದೆ ಗೊತ್ತೇ ವಿಡಿಯೋ??
ಕನ್ನಡದಲ್ಲಿ ಕಿರಿಕ್ ಪಾರ್ಟಿ ಸಿನಿಮಾ ಮೂಲಕ, ಚಲೋ ಚಿತ್ರದ ಮೂಲಕ ತೆಲುಗು ಪ್ರೇಕ್ಷಕರ ಮನಗೆದ್ದ ಸುಂದರ ನಟಿ ರಶ್ಮಿಕಾ ಮಂದಣ್ಣ, ಪುಷ್ಪ ಚಿತ್ರದ ಮೂಲಕ ಪ್ಯಾನ್ ಇಂಡಿಯಾ ಇಮೇಜ್ ಗಿಟ್ಟಿಸಿಕೊಂಡಿರುವ ರಶ್ಮಿಕಾ ಸದ್ಯ ಬಾಲಿವುಡ್ ನಲ್ಲಿ ಬ್ಯಾಕ್ ಟು ಬ್ಯಾಕ್ ಚಿತ್ರಗಳಲ್ಲಿ ನಟಿಸುತ್ತಿರುವುದು ಗೊತ್ತೇ ಇದೆ. ಇದೇ ಸಂದರ್ಭದಲ್ಲಿ ಅವರ ಮೊದಲ ಹಿಂದಿ ಚಿತ್ರ ‘ಗುಡ್ ಬೈ’ ಬಿಡುಗಡೆಗೆ ಸಿದ್ಧವಾಗುತ್ತಿದೆ. ಹಾಗಾಗಿ ರಶ್ಮಿಕಾ ಚಿತ್ರದ ಪ್ರಚಾರದಲ್ಲಿ ಸಕ್ರಿಯರಾಗಿದ್ದಾರೆ. ಇತ್ತೀಚಿನ ಸಮಾರಂಭದಲ್ಲಿ ರಶ್ಮಿಕಾ ಮಂದಣ್ಣ ಅವರ ಪ್ರವೇಶವು ಸುಂದರವಾಗಿತ್ತು. ಸ್ಟಾರ್ ಹೀರೋಯಿನ್ ಟ್ರಡಿಷನಲ್ ವೇರ್ ನಲ್ಲಿ ಎಲ್ಲರ ಕಣ್ಣು ತನ್ನತ್ತ ತಿರುಗಿಸಿದರು. ಪ್ರಿಂಟೆಡ್ ಲೆಹೆಂಗಾ ಧರಿಸಿ ರಶ್ಮಿಕಾ ನಾಜುಕು ಸೌಂದರ್ಯವನ್ನು ಪ್ರದರ್ಶಿಸಿದ್ದಾರೆ..ಅವರ ಉಪಸ್ಥಿತಿಯಿಂದ ಈವೆಂಟ್ ಹೆಚ್ಚು ಆಕರ್ಷಕವಾಗಿ ನಡೆಯಿತು.
ರಶ್ಮಿಕಾ ಅವರನ್ನು ನೋಡಿದ ಅಭಿಮಾನಿಗಳು ಸೆಲ್ಫಿ ತೆಗೆದುಕೊಳ್ಳಲು ಮುಗಿಬಿದ್ದರು, ಅವರಿಗೆ ಸೆಲ್ಫಿ ಕೊಟ್ಟು ರಂಜಿಸಿದರು ರಶ್ಮಿಕಾ. ಆದರೆ ರಶ್ಮಿಕಾ ಲುಕ್ ಎಲ್ಲರ ಗಮನ ಸೆಳೆದಿದೆ. ಹಿಂದಿಯಲ್ಲಿ ರಶ್ಮಿಕಾ ಮೊದಲ ಚಿತ್ರ ‘ಗುಡ್ ಬೈ’ ಆಗಿರುವುದರಿಂದ ಉತ್ತರ ಭಾರತದ ಪ್ರೇಕ್ಷಕರಲ್ಲಿ ಗುರುತಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಈ ಸಂದರ್ಭದಲ್ಲಿ ಚಿತ್ರತಂಡ ಕೂಡ ಪ್ರಚಾರ ಕಾರ್ಯದಲ್ಲಿ ಭಾಗವಹಿಸುತ್ತಿದೆ. ಇನ್ನೊಂದೆಡೆ ಸೋಷಿಯಲ್ ಮೀಡಿಯಾದಲ್ಲಿ ತನ್ನದೇ ಸ್ಟೈಲ್ ನಲ್ಲಿ ಫೋಟೋಶೂಟ್ ಮಾಡುವ ಮೂಲಕ ಇಂಟರ್ ನೆಟ್ ಅಭಿಮಾನಿಗಳನ್ನು ಹುಚ್ಚೆಬ್ಬಿಸುತ್ತಿದ್ದಾರೆ. ಸದ್ಯ ರಶ್ಮಿಕಾ ಮಂದಣ್ಣ ಟಾಲಿವುಡ್ ಜೊತೆಗೆ ಕಾಲಿವುಡ್ ಮತ್ತು ಸ್ಯಾಂಡಲ್ ವುಡ್ ನಲ್ಲಿ ನಾಯಕಿಯಾಗಿ ಸಾಕಷ್ಟು ಅವಕಾಶಗಳ ಮೂಲಕ ಭರ್ಜರಿ ಯಶಸ್ಸು ಗಳಿಸುತ್ತಿದ್ದಾರೆ.
ಇತ್ತೀಚೆಗಷ್ಟೇ ಸೀತಾರಾಮಮ್ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿ ಒಳ್ಳೆ ಹೆಸರು ಪಡೆದಿರುವ ರಶ್ಮಿಕಾ ಗುಡ್ ಬೈ ಸಿನಿಮಾದ ಮೂಲಕ ಬಾಲಿವುಡ್ ಗೆ ಪಾದಾರ್ಪಣೆ ಮಾಡುತ್ತಿದ್ದಾರೆ. ವಾಸ್ತವವಾಗಿ ಬಾಲಿವುಡ್‌ನಲ್ಲಿ ಮಿಷನ್ ಮಜ್ನು ಚಿತ್ರಕ್ಕೆ ರಶ್ಮಿಕಾ ಮೊದಲು ಸಹಿ ಹಾಕಿದ್ದರು, ಆದರೆ ಶೂಟಿಂಗ್ ವಿಳಂಬದಿಂದಾಗಿ ಮಿಷನ್ ಮಜ್ನು ಬಿಡುಗಡೆಗೆ ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ, ನಂತರ ಒಪ್ಪಿದ ಗುಡ್‌ಬೈ ಮೊದಲು ಬಿಡುಗಡೆಯಾಗುತ್ತಿದೆ. ಗುಡ್ ಬೈ ಚಿತ್ರದಲ್ಲಿ ರಶ್ಮಿಕಾ ಲೆಜೆಂಡರಿ ಸ್ಟಾರ್ ಅಮಿತಾಬ್ ಬಚ್ಚನ್ ಅವರ ಪುತ್ರಿಯಾಗಿ ಕಾಣಿಸಿಕೊಂಡಿದ್ದಾರೆ, ಈ ಸಿನಿಮಾವನ್ನು ವಿಕಾಸ್ ಬಾಲ್ ನಿರ್ದೇಶಿಸಿದ್ದಾರೆ. ಹಾಸ್ಯ ಪ್ರಧಾನ ಚಿತ್ರವಾಗಿರುವ ಗುಡ್ ಬೈ ಅಕ್ಟೋಬರ್ 7 ರಂದು ವಿಶ್ವದಾದ್ಯಂತ ಬಿಡುಗಡೆಯಾಗಲಿದೆ