ರವಿ ಚಂದ್ರನ್ ಮಗನ ಮನೆಗೆ ಹೋದ, ದರ್ಶನ್ ಹಾಗೂ ವಿಜಯಲಕ್ಷ್ಮಿ ರವರು ನವದಂಪತಿಗಳಿಗೆ ನೀಡಿದ ಉಡುಗೊರೆ ಏನು ಗೊತ್ತೇ?? ನಿಜಕ್ಕೂ ಶಾಕ್
ಡಿಬಾಸ್ ದರ್ಶನ್ ಅವರ ಗುಣ ಸ್ವಭಾವ ಎಂಥದ್ದು ಎಂದು ಈಗಾಗಲೇ ನಮಗೆ ಗೊತ್ತಿದೆ. ಚಿತ್ರರಂಗದಲ್ಲಿ ಹಿರಿಯರನ್ನು ಬಹಳ ಗೌರವದಿಂದ ಹಾಗೂ ಕಿರಿಯರನ್ನು ಬಹಳ ಪ್ರೀತಿಯಿಂದ ಕಾಣುತ್ತಾರೆ ಡಿಬಾಸ್ ದರ್ಶನ್. ಇವರ ಸ್ನೇಹಮಯ ವ್ಯಕ್ತಿತ್ವದ ಬಗ್ಗೆ ವಿಶೇಷವಾಗಿ ಹೇಳಬೇಕಿಲ್ಲ. ಇತ್ತೀಚೆಗೆ ಚಿತ್ರರಂಗದಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಮೊದಲ ಮಗ ಮನೋರಂಜನ್ ಅವರ ಮದುವೆ ಅದ್ಧೂರಿಯಾಗಿ ನಡೆಯಿತು. ಮನೋರಂಜನ್ ಅವರು ಸಂಗೀತ ಅವರ ಕೈಹಿಡಿದರು.
ಈ ಜೋಡಿಯ ಮದುವೆ ಸಂಭ್ರಮಕ್ಕೆ ಕುಟುಂಬದವರು, ಸ್ನೇಹಿತರು ಹಾಗೂ ಕನ್ನಡ ಚಿತ್ರರಂಗ ಸಾಕ್ಷಿಯಾಯಿತು. ಚಿತ್ರರಂಗದ ಸಾಕಷ್ಟು ಗಣ್ಯರು ಮನೋರಂಜನ್ ಅವರ ಮದುವೆಗೆ ಬಂದು ದಂಪತಿಗಳಿಗೆ ವಿಶ್ ಮಾಡಿದ್ದಾರೆ. ಇನ್ನು ಡಿಬಾಸ್ ದರ್ಶನ್ ಅವರು ಸುಮಲತಾ ಅಂಬರೀಶ್ ಹಾಗು ಅಭಿಷೇಕ್ ಅಂಬರೀಶ್ ಅವರ ಜೊತೆಗೆ ಗ್ರಾಂಡ್ ಆಗಿ ಮದುವೆಮನೆಗೆ ಎಂಟ್ರಿ ಕೊಟ್ಟರು. ರವಿಚಂದ್ರನ್ ಅವರನ್ನು ನೋಡಿದ ತಕ್ಷಣ ಅವರ ಕಾಲಿಗೆ ಬಿದ್ದು ನಮಸ್ಕರಿಸಿದರು ಡಿಬಾಸ್. ಅವರ ಸರಳತೆಯನ್ನು ಎಲ್ಲರೂ ಮೆಚ್ಚಿಕೊಂಡಿದ್ದಾರೆ. ಮನೋರಂಜನ್ ಅವರ ಮದುವೆಗೆ ಡಿಬಾಸ್ ಅವರ ಪತ್ನಿ ವಿಜಯಲಕ್ಷ್ಮಿ ದರ್ಶನ್ ಅವರು ಬರಲು ಸಾಧ್ಯವಾಗಿಲ್ಲ.

ಆದರೆ ವಿಜಯಲಕ್ಷ್ಮಿ ದರ್ಶನ್ ಅವರು ಹಾಗೂ ಮಗ ವಿನೀಶ್ ಮನೋರಂಜನ್ ಅವರ ಮನೆಯಲ್ಲಿ ಮೆಹೆಂದಿ ಮತ್ತು ಶಾಸ್ತ್ರದಲ್ಲಿ ಪಾಲ್ಗೊಂಡಿದ್ದರು ಎನ್ನಲಾಗಿದೆ. ಮನೋರಂಜನ್ ಅವರ ಮದುವೆಗೆ ಡಿಬಾಸ್ ದರ್ಶನ್ ಹಾಗೂ ಅವರ ಪತ್ನಿ ವಿಜಯಲಕ್ಷ್ಮಿ ದರ್ಶನ್ ಅವರು ಬಹಳ ವಿಶೇಷವಾದ ಉಡುಗೊರೆ ಕೊಟ್ಟಿದ್ದಾರೆ, ದೊಡ್ಡದಾದ ಹೂಗುಚ್ಛದ ಜೊತೆಗೆ ಒಂದು ಬಹಳ ವಿಶೇಷವಾದ ಚಿನ್ನದ ಉಂಗುರವನ್ನು ಗಿಫ್ಟ್ ಆಗಿ ನೀಡಿದ್ದಾರೆ ಎಂದು ಮಾಹಿತಿ ಸಿಕ್ಕಿದೆ. ಡಿಬಾಸ್ ಅವರ ಒಳ್ಳೆಯತನಕ್ಕೆ ಅಭಿಮಾನಿಗಳು ಮೆಚ್ಚುಗೆ ಸೂಚಿಸಿದ್ದಾರೆ. ಇನ್ನು ರವಿಚಂದ್ರನ್ ಅವರು ದರ್ಶನ್ ಅವರ ಕ್ರಾಂತಿ ಸಿನಿಮಾದಲ್ಲಿ ವಿಶೇಷ ಪಾತ್ರ ಒಂದರಲ್ಲಿ ಕಾಣಿಸಿಕೊಂಡಿದ್ದಾರೆ.