ನೀವು ಯಶಸ್ಸು ಗಳಿಸಬೇಕು ಎಂದರೆ, ಈಗಲೇ ಮನೆಯಲ್ಲಿ ಈ ಚಿಕ್ಕ ಬದಲಾವಣೆ ಮಾಡಿ, ಅದೃಷ್ಟ ಹುಡುಕಿಕೊಂಡು ಬರುತ್ತದೆ. ಏನು ಮಾಡಬೇಕು ಗೊತ್ತೇ??
ಮನೆ ಎನ್ನುವುದು ಎಲ್ಲರ ಜೀವನದಲ್ಲೂ ಬಹಳ ಮುಖ್ಯವಾದ ಅಂಶ. ಪ್ರತಿದಿನ ಕೆಲಸ ಮುಗಿದ ಬಳಿಕ ಹೋಗಿ ವಿಶ್ರಾಂತಿ ಪಡೆದು, ನಮ್ಮವರೊಂದಿಗೆ ಕುಟುಂಬದೊಂದಿಗೆ ಸಮಯ ಕಳೆಯಲು ಒಂದು ಮನೆ ಬೇಕೇ ಬೇಕು. ನಮಗೆ ಸೂರು ಇರಬೇಕು. ಕೆಲವೊಮ್ಮೆ ನಮ್ಮ ಮನೆಯನ್ನು ಹೇಗೆ ಇಟ್ಟುಕೊಂಡಿರುತ್ತೀವಿ, ಮನೆಯಲ್ಲಿ ಏನೆಲ್ಲಾ ಇರುತ್ತದೆ ಎನ್ನುವುದರ ಮೇಲೆ ನಮ್ಮ ಯಶಸ್ಸು ಕೂಡ ನಿಂತಿರುತ್ತದೆ. ನೀವು ಜೀವನದಲ್ಲಿ ಹೆಚ್ಚಿನ ಯಶಸ್ಸು ಪಡೆಯಲು, ನಿಮ್ಮ ಮನೆಯಲ್ಲಿ ಈ ಸಣ್ಣದಾದ ಕೆಲವು ಬದಲಾವಣೆಗಳನ್ನು ಮಾಡಿದರೆ ಸಾಕು. ಅದೃಷ್ಟ ನಿಮ್ಮ ಬಳಿಗೆ ಬರುತ್ತದೆ. ಅವುಗಳು ಏನು ಎಂದು ತಿಳಿಸುತ್ತೇವೆ ನೋಡಿ..
ದೇವರ ಮನೆ :- ಇದು ಶಾಂತಿ, ಭಕ್ತಿ ಮತ್ತು ನೆಮ್ಮದಿಯ ಸ್ಥಳ. ಮನೆಯಲ್ಲಿ ದೇವರ ಮನೆ ಈಶಾನ್ಯ ದಿಕ್ಕಿನಲ್ಲಿ ಇರಬೇಕು, ಆ ದಿಕ್ಕು ದೇವತೆಗಳ ಸ್ಥಳ. ಹಾಗಾಗಿ ಈಶಾನ್ಯ ದಿಕ್ಕಿನಲ್ಲಿ ದೇವರ ಮನೆ ಇರಿಸಿ, ಜೊತೆಗೆ ದೇವರ ಮನೆ ಕೆಳಗೆ ಅಥವಾ ಮೇಲೆ ಏಣಿ, ಶೌಚಾಲಯ ಇರದ ಹಾಗೆ ನೋಡಿಕೊಳ್ಳಿ.
ಶುಭ್ರತೆ :- ನಿಮ್ಮ ಮನೆಯನ್ನು ಯಾವಾಗಲೂ ಶುಚಿಯಾಗಿ ಇಟ್ಟುಕೊಳ್ಳಿ. ಮನೆಯಲ್ಲಿ ಜೇಡರ ಬಲೆ, ಮನೆಯೊಳಗೆ ಧೂಳು, ಕೊಳಕು ಇದ್ದರೆ ಅದರಿಂದ ದೋಷ ಆಗುತ್ತದೆ. ಹಾಗಾಗಿ ಮನೆಯಲ್ಲಿ ಸ್ನಾನದ ಮನೆಯನ್ನು ಸ್ವಚ್ಛವಾಗಿಡಿ.
ಮುಖ್ಯದ್ವಾರ :- ನಿಮ್ಮ ಮನೆಯ ಮುಖ್ಯ ದ್ವಾರ ಯಾವಾಗಲೂ ಸ್ವಚ್ಛವಾಗಿ ಇರುವ ಹಾಗೆ ನೋಡಿಕೊಳ್ಳಿ. ಬಾಗಿಲನ್ನು ತೆರೆಯುವಾಗ ಮತ್ತು ಮುಚ್ಚುವಾಗ ಶಬ್ಧ ಬರಬಾರದು ಆ ರೀತಿ ಇರಬೇಕು. ಬಾಗಿಲಿನ ಬಣ್ಣ ಕೂಡ ಮಾಸಬಾರದು.
ಕರ್ಪೂರ ಹಚ್ಚಿ :- ಪ್ರತಿದಿನ ಬೆಳಗ್ಗೆ ಮತ್ತು ಸಂಜೆ ನಿಮ್ಮ ಮನೆಯಲ್ಲಿ ಕರ್ಪೂರ ಹಚ್ಚುವುದರಿಂದ ವಾಸ್ತು ದೋಷಗಲಿ ಪರಿಹಾರ ಆಗುತ್ತದೆ. ಇದರಿಂದಾಗಿ ಮನೆಯಲ್ಲಿ ಸಕಾರಾತ್ಮಕ ಶಕ್ತಿ ಹೆಚ್ಚಾಗುತ್ತದೆ, ಹಾಗೂ ಮನೆಯಲ್ಲಿ ಸಮೃದ್ಧಿ ಮೂಡುತ್ತದೆ.
ನಿದ್ರಿಸುವ ದಿಕ್ಕು :- ನಿದ್ದೆ ಮಾಡುವಾಗ ದಕ್ಷಿಣ ದಿಕ್ಕಿಗೆ ತಲೆ ಹಾಕಿ ಮಲಗಬೇಡಿ, ಇದರಿಂದಾಗಿ ನಿಮ್ಮ ಆರೋಗ್ಯಕ್ಕೆ ತೊಂದರೆ ಉಂಟಾಗಬಹುದು.